Advertisement

‘ಬದ್ಧತೆಯ ಕೆಲಸಗಳು ಸಂಘಟನಾತ್ಮಕವಾಗಿ ಆದಾಗ ಪ್ರಗತಿ’

03:43 PM Jan 07, 2018 | |

ನಗರ: ಗ್ರಾಮೀಣತೆ, ಸ್ಥಳೀಯತೆ, ಕೃಷಿ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ಕೆಲಸ ಗ್ರಾಮೀಣ ಭಾರತದಲ್ಲಿ ಆಗಬೇಕು. ಇಂತಹ ಬದ್ಧತೆಯ ಕೆಲಸಗಳು ಸಂಘಟನಾತ್ಮಕವಾಗಿ ಆದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ ಎಂದು ಅಂಕಣಕಾರ, ಪತ್ರಕರ್ತ ನಾ. ಕಾರಂತ ಪೆರಾಜೆ ಹೇಳಿದರು. ಭಾರತೀಯ ಕಿಸಾನ್‌ ಸಂಘದ ಪುತ್ತೂರು ಜಿಲ್ಲಾ ಕಚೇರಿಯಲ್ಲಿ ಸಂಘದ ಸದಸ್ಯತನ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಮನುಷ್ಯನ ಬದುಕೂ ಕಾಲಮಿತಿಗೆ ತಲುಪಿದೆ. ಅಭಿಯಾನವು ಸದಸ್ಯರನ್ನು ಹೆಚ್ಚು ಮಾಡುವ ಕಾಲಮಿತಿಯ ಪ್ರಕ್ರಿಯೆ. ಸ್ಥಳೀಯತೆಯ ನಾಶ ಸಂಸ್ಕೃತಿಯ ನಾಶಕ್ಕೆ ಕಾರಣವಾಗುವುದರಿಂದ ಸ್ಥಳೀಯವಾಗಿ ನಮ್ಮಲ್ಲಿ ಬೆಳೆದುಕೊಂಡು ಬಂದಿರುವ ಕೃಷಿ ಮಿಳಿತ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಕಿಸಾನ್‌ ಸಂಘ ಇನ್ನಷ್ಟು ಕ್ರಿಯಾಶೀಲವಾಗಬೇಕು ಎಂದರು.

ಗಟ್ಟಿ ಧ್ವನಿಯಾಗಲಿ
ಸ್ಥಳೀಯ ಅಥವಾ ಗ್ರಾಮೀಣ ಜನತೆಯೊಂದಿಗೆ ಬೆಸೆದಿರುವ ಸಂಘಟನೆಗಳು ಗಟ್ಟಿ ಧ್ವನಿ ಎತ್ತಿದಾಗ ಗ್ರಾಮಗಳು ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಭಾರತೀಯ ಕಿಸಾನ್‌ ಸಂಘವು ಸಹಕಾರ ನೀಡಿ, ರೈತರ ನೆರವಿಗೆ ನಿಂತಿದೆ. ಸಂಘದಿಂದ ಬಹಳಷ್ಟು ಶ್ರಮ ಜೀವಿಗಳಿಗೆ ಪ್ರಯೋಜನವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಿಸಾನ್‌ ಸಂಘ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ.ಕೆ. ರಮೇಶ್‌, ಗ್ರಾಮ, ಹೋಬಳಿಗಳ ಜವಾಬ್ದಾರಿ ತೆಗೆದುಕೊಂಡು ಆಸಕ್ತರನ್ನು ಕರೆದು ಸದಸ್ಯತನದ ಮಾಹಿತಿಯನ್ನು ನೀಡಬೇಕು. ಈ ಕ್ಷೇತ್ರದಲ್ಲಿ ಬದ್ಧತೆಯನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂಘದ ಕಾರ್ಯಯೋಜನೆಗಳು ಸಾಗಬೇಕು ಎಂದರು.

ಕಿಸಾನ್‌ ಸಂಘ ಕುಮ್ಕಿ ಹಕ್ಕು ಹೋರಾಟ ಸಮಿತಿ ಸಹ ಸಂಚಾಲಕ ರಾಮಚಂದ್ರ ನೆಕ್ಕಿಲು ಮಾತನಾಡಿ, 3 ವರ್ಷಕ್ಕೊಮ್ಮೆ ಸಂಘದ ಸದಸ್ಯತನ ನವೀಕರಣ ಪ್ರಕ್ರಿಯೆ ನಡೆಯುತ್ತದೆ. ಪ್ರಸ್ತುತ ರಾಷ್ಟ್ರಾದ್ಯಂತ 67 ಲಕ್ಷ ಸದಸ್ಯರಿದ್ದು, ಅದನ್ನು ದುಪ್ಪಟ್ಟುಗೊಳಿಸುವ ಇಂಗಿತವನ್ನು ಇತ್ತೀಚೆಗೆ ಪುತ್ತೂರಿಗೆ ಭೇಟಿ ನೀಡಿದ್ದ ಸಂಘದ ರಾಷ್ಟ್ರಾಧ್ಯಕ್ಷರು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಿಂದ ಅಭಿಯಾನ ಪ್ರಮುಖ್‌, ತಾಲೂಕಿನಿಂದ ಸಮಿತಿಗಳನ್ನು ಮಾಡಿ ಅದರ ಮೂಲಕ ಗ್ರಾಮಗಳನ್ನು ಸಂಪರ್ಕಿಸಲಾಗುತ್ತಿದೆ. ಒಂದು ಮನೆಯಿಂದ ಇಬ್ಬರು ಸದಸ್ಯರನ್ನು ಮಾಡಿಕೊಳ್ಳುವ ಕುರಿತು ಪ್ರಯತ್ನ ನಡೆಸಬೇಕು ಎಂದರು ವಿನಂತಿಸಿದರು.

Advertisement

ಭಾರತೀಯ ಕಿಸಾನ್‌ ಸಂಘ ಜಿಲ್ಲಾಧ್ಯಕ್ಷ ಸಿ.ಎಚ್‌. ನಾರಾಯಣ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಕುಮ್ಕಿ ಹಕ್ಕು ಹೋರಾಟ ಸಮಿತಿ ಸಂಚಾಲಕ ಎಂ.ಜಿ. ಸತ್ಯನಾರಾಯಣ ತಮ್ಮ ಇಸ್ರೆಲ್‌ ಪ್ರವಾಸದ ಅನುಭವ ಹಂಚಿಕೊಂಡರು. ವಿದ್ಯುತ್‌ ಬಳಕೆದಾರರ ಹೋರಾಟ ಸಮಿತಿಯ ಬಿ.ಟಿ. ನಾರಾಯಣ ಭಟ್‌, ಕಿಸಾನ್‌ ಸಂಘ ವಿಭಾಗೀಯ ಕಾರ್ಯದರ್ಶಿ ಮೂಲಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಸುಬ್ರಾಯ, ಸುಳ್ಯ ತಾಲೂಕು ಕಾರ್ಯದರ್ಶಿ ನೆಟ್ಟಾರು
ಗೋಪಾಲಕೃಷ್ಣ ಭಟ್‌, ಸೀತಾರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಯದುನಂದನ ಅವರು ಪ್ರಾರ್ಥಿಸಿದರು. ರಾಮಚಂದ್ರ ಕೆ. ನೆಕ್ಕಿಲ ಅವರು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next