Advertisement
ರಾಜ್ಯ ಪ್ರವಾಸ ಕೈಗೊಂಡಿರುವ ಎನ್‌ಸಿಎಸ್‌ಸಿ ಸದಸ್ಯೆ ಡಾ.ಅಂಜುಬಾಲ ಅವರು ಗುರುವಾರ ಸಂಜೆ ಜಿಪಂ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಕರೆದಿದ್ದರು.ಸಭೆಗೆ ಜಿಪಂ ಸಿಇಒ ಹೊರತುಪಡಿಸಿ ಜಿಲ್ಲಾಧಿಕಾರಿ ಡಾ.ಅವಿನಾಶ್‌ಮೆನನ್ ರಾಜೇಂದ್ರನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಗೈರಾಗಿದ್ದು, ಅಪರ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಭೆಗೆ ಬಂದಿದ್ದರು. ಜಿಲ್ಲೆಯ ಮುಖ್ಯಸ್ಥರು ಗೈರು ಹಾಜರಾಗಿರುವುದನ್ನು ತಿಳಿಯುತ್ತಿದ್ದಂತೆ ಗರಂ ಆದ ಡಾ.ಅಂಜುಬಾಲ, ಸಮಿತಿಯ ಸಭೆ ಎಂದರೆ ಏನೆಂದುಕೊಂಡಿ ದ್ದೀರಾ? ಅವರನ್ನು ಸಭೆಗೆ ಕರೆಸಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಯಾಕೆ ಸಭೆಗೆ ಬಂದಿಲ್ಲ ಎಂದು ಸಭೆಯಲ್ಲಿದ್ದ ಜಿಪಂ ಸಿಇಒ ದಿಗ್ವಿಜಯ್ ಬೋಡ್ಚೆ ಅವರನ್ನು ತರಾಟೆಗೆ ತೆಗೆದುಕೊಂಡರು.
Related Articles
Advertisement
ದಲಿತ ಮುಖಂಡರ ಆಕ್ರೋಶ: ಸಭೆ ರದ್ದುಪಡಿಸಿ ಹೋಗುತ್ತಿದ್ದ ಡಾ. ಅಂಜುಬಾಲ ಅವರನ್ನು ಜಿಪಂ ಸಭಾಂಗಣದ ಹೊರಗೆ ಭೇಟಿ ಮಾಡಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ತಮಗೆ ಸಭೆಗೆ ಆಹ್ವಾನ ನೀಡಿಲ್ಲ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹೆಚ್ಚಿನ ದೌರ್ಜನ್ಯವಾಗುತ್ತಿದೆ. ಪೊಲೀಸರು ಇದನ್ನು ನಿಯಂತ್ರಿಸುತ್ತಿಲ್ಲ. ಜಿಲ್ಲಾಡಳಿತ ದಲಿತರ ರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ದೂರುಗಳ ಸುರಿಮಳೆ ಗರೆದರು. ಸಮಿತಿಯ ಸದಸ್ಯರಿಗೆ ತಮ್ಮ ವಿಸಿಟಿಂಗ್ ಕಾರ್ಡ್ ನೀಡಿ ಏನಾದರು ಸಮಸ್ಯೆಯಾದರೆ ನನ್ನನ್ನು ಸಂಪರ್ಕಿಸಿ ಎಂದು ಹೇಳಿ ಅಲ್ಲಿಂದ ತೆರಳಿದರು.