Advertisement

ಪ್ಯಾಕ್ಸ್‌ಗಳು ಅಂದಿನ ವಹಿವಾಟು ಅಂದೇ ದಾಖಲಿಸಲಿ

03:36 PM Aug 22, 2022 | Team Udayavani |

ಕೋಲಾರ: ಪ್ಯಾಕ್ಸ್‌ಗಳು ಆಯಾದಿನದ ವಹಿವಾಟನ್ನು ಅಂದೇ ಗಣಕೀಕೃತವಾಗಿ ಅಪ್‌ಡೇಟ್‌ ಮಾಡಿ ನಂತರ ಮನೆಗೆ ಹೋಗಬೇಕು. ತಪ್ಪಿದಲ್ಲಿ ಹಠಾತ್‌ ಭೇಟಿ ನೀಡಿದಾಗ ಸಿಕ್ಕಿಹಾಕಿಕೊಂಡರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸೊಸೈಟಿಗಳ ಸಿಇಒಗಳಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.

Advertisement

ಕೋಲಾರ ಡಿಸಿಸಿ ಬ್ಯಾಂಕ್‌ ಆವರಣದಲ್ಲಿ ಉಭಯ ಜಿಲ್ಲೆಯ ಎಲ್ಲಾ ರೇಷ್ಮೆ ಬೆಳೆಗಾರರ, ರೈತರ ಸೇವಾ ಸಹಕಾರ ಸಂಘಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಇಒಗಳನ್ನು ಉದ್ದೇಶಿಸಿ ಮಾತನಾಡಿ, ಬ್ಯಾಂಕ್‌ ಸಿಬ್ಬಂದಿ, ಸೊಸೈಟಿಗಳ ನಡುವೆ ಸಮನ್ವಯತೆ ಅತಿ ಮುಖ್ಯವಾಗಿದೆ. ಸಾಲದ ಅರ್ಜಿ, ಕಡತಗಳನ್ನು ಪರಿಶೀಲನೆಗಾಗಿ ಡಿಸಿಸಿ ಬ್ಯಾಂಕ್‌ ಕೇಂದ್ರ ಕಚೇರಿಗೆ ಸೊಸೈಟಿ ಸಿಇಒಗಳು ತರುವ ಅಗತ್ಯವಿಲ್ಲ. ಆಯಾ ವ್ಯಾಪ್ತಿಯ ಡಿಸಿಸಿ ಬ್ಯಾಂಕ್‌ ಸೂಪರ್‌ವೈಸರ್‌ ಸೊಸೈಟಿಗಳಿಗೆ ಭೇಟಿ ನೀಡಿ, ಅರ್ಜಿ ಪರಿಶೀಲಿಸಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.

ನಗದು ಪುಸ್ತಕ ಅಪ್‌ಡೇಟ್‌ ಆಗಲಿ: ಗುರುವಾರ ದೊಳಗೆ ನಗದು ಪುಸ್ತಕ ಅಪ್‌ಡೇಟ್‌ ಆಗಿರಬೇಕು, ಗಣಕೀಕರಣ ವಹಿವಾಟಿನಲ್ಲಿ ವ್ಯತ್ಯಾಸ, ತಾಂತ್ರಿಕ ತೊಂದರೆ ಇದ್ದರೆ ತಿಳಿಸಿ ವಿ-ಸಾಫ್ಟ್‌ ಸಿಬ್ಬಂದಿ ಸರಿಪಡಿಸುತ್ತಾರೆ. ಗಣಕೀಕೃತ ವಹಿವಾಟಿಗೆ ನೀವು ನೆಪ ಹೇಳಿದರೆ ಸಹಿಸಲು ಸಾಧ್ಯವಿಲ್ಲ ಎಂದರು.

ಬ್ಯಾಂಕ್‌ ಘನತೆ ಹಾಳು ಮಾಡದಿರಿ: ಡಿಸಿಸಿ ಬ್ಯಾಂಕ್‌ ಸಂಕಷ್ಟದಲ್ಲಿದ್ದಾಗ ಕೆಲಸ ಮಾಡಿದ ಸಿಬ್ಬಂದಿಯೂ ಇದ್ದೀರಿ, ಅಂದು ಸಂಬಳಕ್ಕೂ ಪರದಾಡಿ, ಐದಾರು ಸಾವಿರ ಸಂಬಳ ಪಡೆಯುತ್ತಿದ್ದ ಸಂಕಷ್ಟವನ್ನು ಇತರೆ ಸಿಬ್ಬಂದಿಗೂ ತಿಳಿಸಿ, ಮತ್ತೆ ಅಂತಹ ಪರಿಸ್ಥಿತಿ ಬರಬಾರದು ಎಂದಾದರೆ ನಿಷ್ಟೆ, ಶ್ರದ್ಧೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ಟೀಕಾಕಾರರು ದಿನವೂ ಬ್ಯಾಂಕ್‌ ವಿರುದ್ಧ ಮಾತನಾಡುತ್ತಿದ್ದಾರೆ, ಅವರಿಗೆ ಉತ್ತರ ನೀಡುವ ಅಗತ್ಯವಿಲ್ಲ, ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದು, ಅಂದಿನ ವಹಿವಾಟು ಅಂದೇ ಅಪ್‌ಡೇಟ್‌ ಆಗುತ್ತಿದ್ದರೆ ಯಾರೇ ಬಂದರೂ ಉತ್ತರ ನೀಡಬಹುದು ಎಂದರು.

Advertisement

ವಿ-ಸಾಫ್ಟ್ ಸಿಬ್ಬಂದಿ ಲೋಪಗಳ ಸರಿಪಡಿಸಲಿ: ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್‌ ಮಾತನಾಡಿ, ಸಿಇಒಗಳಿಗೆ ಮತ್ತಷ್ಟು ಗಣಕಯಂತ್ರ ಜ್ಞಾನ ಅಗತ್ಯವಿದೆ, ವಹಿವಾಟು ಅಪ್‌ಡೇಟ್‌ ಮಾಡು ವಾಗ ಎದುರಾಗುವ ಲೋಪಗಳನ್ನು ಸರಿಪಡಿಸಲು ವಿ-ಸಾಫ್ಟ್‌ ಸಿಬ್ಬಂದಿ ಕ್ರಮವಹಿಸಬೇಕು ಎಂದರು. ಡಿಸಿಸಿ ಬ್ಯಾಂಕ್‌ ಎಜಿಎಂ ಶಿವಕುಮಾರ್‌ ಮಾತ ನಾಡಿ, 2022-23ರಲ್ಲಿ ಕಡ್ಡಾಯವಾಗಿ ಗಣಕೀಕೃತ ಬ್ಯಾಲೆನ್ಸ್‌ಶೀಟ್‌ ಆಧಾರದ ಮೇಲೆಯೇ ಲೆಕ್ಕಪರಿಶೋ ಧನೆ ನಡೆಸಬೇಕು, ಆಡಿಟ್‌ಗೆ ನಗದು ಪುಸ್ತಕ ನೀಡುವಂತಿಲ್ಲ ಎಂದು ಸೂಚಿಸಿದರು.

ಸಭೆಯಲ್ಲಿ ಎಜಿಎಂಗಳಾದ ಖಲೀಮುಲ್ಲಾ, ಹುಸೇನ್‌ದೊಡ್ಡ ಮುನಿ, ಭಾನುಪ್ರಕಾಶ್‌, ವಿ- ಸಾಫ್ಟ್‌ನ ವಿಶ್ವ, ಫರ್ನಾಂಡೀಸ್‌, ಬ್ಯಾಂಕಿನ ಸಿಬ್ಬಂದಿ ಪದ್ಮಮ್ಮ,ತಿಮ್ಮಯ್ಯ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next