Advertisement

ವಿಳಂಬ ಮಾಡದೇ ಸಕಾಲ ಅರ್ಜಿ ವಿಲೇವಾರಿ ಮಾಡಿ

01:36 PM Feb 22, 2022 | Team Udayavani |

ರಾಮನಗರ: ಸಕಾಲ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡ ಬೇಕು, ವಿಳಂಬಕ್ಕೆ ಅವಕಾಶ ಬೇಡ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

Advertisement

ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ನಡೆದ ಸಕಾಲ ಸೇವೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ನಿಗದಿತ ಅವಧಿಯಲ್ಲಿ ಒದಗಿಸಿಕೊಡಲುಸರ್ಕಾರ ಸಕಾಲ ಯೋಜನೆ ಜಾರಿಗೆ ತಂದಿದೆ. ಸಕಾಲ ಯೋಜನೆ ಮೂಲಕಅರ್ಜಿ ಸಲ್ಲಿಸುವ ವೇಳೆ ಆಯಾ ಇಲಾಖೆಗಳ ಅಧಿಕಾರಿಗಳು ಅಥವಾ ಸಿಬ್ಬಂದಿಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳ ಬಗ್ಗೆ ಪೂರ್ವ ಮಾಹಿತಿ ಕೊಡಿ ಎಂದರು.

ಸಕಾಲ ಯೋಜನೆಯಡಿ ಸ್ವೀಕೃತವಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಿ. ಸಕಾಲ ಯೋಜನೆ ಯಡಿ ಸೇವೆ ನೀಡುವ ಸಂದರ್ಭದಲ್ಲಿ ಯಾವುದೇ ತಾಂತ್ರಿಕಸಮಸ್ಯೆ ಬಂದಲ್ಲಿ ಅಧಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ವಿವಿಧ ಇಲಾಖೆಗಳಲ್ಲಿನಸಕಾಲ ಸೇವೆಗಳಲ್ಲಿ ವಿಳಂಬವಾದ, ಅವಧಿಮೀರಿ ವಿಲೇವಾರಿ ಆದ ಹಾಗೂ ಅವಧಿಗೂ ಮುನ್ನ ವಿಲೇ ವಾರಿಯಾದ ಅರ್ಜಿಗಳಬಗ್ಗೆ ಇಲಾಖಾ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಿ, ಲೋಪಗಳಿದ್ದಲ್ಲಿ ಸರಿಪಡಿಸಿ ಎಂದರು.

Advertisement

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್‌, ರಾಮನಗರನಗರಸಭೆ ಆಯುಕ್ತ ನಂದ ಕುಮಾರ್‌, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next