ಬಾಗಲಕೋಟೆ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಕಳೆದ 2013-14ರಿಂದ ಇಲ್ಲಿಯವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 22 ಕೋಟಿ ರೂ.ಗಳ ಅನುದಾನ ಖರ್ಚಾಗದೇ ಉಳಿದಿದ್ದು, ಸಂಪೂರ್ಣ ವಿನಿಯೋಗಕ್ಕೆ ಕ್ರಮ ಕೈಗೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಸಾಂಖ್ಯೀಕ ಸಚಿವ ಡಾ|ನಾರಾಯಣಗೌಡ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಶಾಸಕರ ಕ್ಷೇಮಾಭಿವೃದ್ದಿ ಅನುದಾನ ಬಳಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಸಕರ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು ತ್ವರಿತಗತಿಯಲ್ಲಿ ಆಗುತ್ತಿಲ್ಲ. ಕೆಆರ್ ಐಡಿಎಲ್ ಒಂದು ಸರಕಾರಿ ಏಜೆನ್ಸಿಯಾಗಿದ್ದು, ಇವರಿಗೆ ನೀಡಿರುವ ಕಾಮಗಾರಿಗಳು ಸರಿಯಾಗಿ ಆಗುತ್ತಿಲ್ಲ. ಇದರಿಂದ ಅಭಿವೃದ್ಧಿಯಲ್ಲಿ ಕುಂಟಿತಗೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ಸ್ಥಳೀಯ ಪ್ರದೇಶಾಭಿವೃದ್ದಿಯೋಜನೆಯಡಿ ನೀಡಲಾದ ಅನುದಾನ ಖರ್ಚಾಗದೇ ಉಳಿದರೆ ಮುಂದಿನ ಯೋಜನೆಗಳಿಗೆ ಅನುದಾನ ತರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬಾಕಿ ಉಳಿದ ಅನುದಾನದಲ್ಲಿ ಹಾಕಿಕೊಂಡ ಕ್ರೀಯಾ ಯೋಜನೆಗಳಿಗೆ ಅನುಮತಿ ನೀಡದಿದ್ದಲ್ಲಿ ಬೇರೆ ಯೋಜನೆಗಳಿಗೆ ಬಳಿಕೊಂಡು ಜಿಲ್ಲೆಯಲ್ಲಿ ಬಾಕಿ ಉಳಿದ ಹಣವನ್ನು ಸಂಪೂರ್ಣವಾಗಿ ಖರ್ಚುಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರಿಗೆ ಕ್ರಮವಹಿಸಲು ಸೂಚಿಸಿದರು.
ಸರಕಾರಿ ಏಜೆನ್ಸಿ ಕೆಆರ್‌ಐಡಿಎಗೆ ನೀಡುದ ಬಹುತೇಕ ಕಾಮಗಾರಿಗಳು ಬಾಕಿ ಉಳಿಸಿಕೊಂಡಿವೆ. ಅವರ ಮೇಲೆ ಕ್ರಮಕ್ಕಾಗಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಇನ್ನುಮುಂದೆ ಪ್ರತಿಯೊಂದು ಕಾಮಗಾರಿ ಪಿಡಬ್ಲೂಡಿಗೆನೀಡಬೇಕು. ಉಳಿದ ಅನುದಾನ ಅಂಗನವಾಡಿಹಾಗೂ ಶಾಲಾ ಅಭಿವೃದ್ದಿಗೆ ಬಳಸಿಕೊಳ್ಳಲು ತಿಳಿಸಿದರು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಮಾತನಾಡಿ, ಸರಕಾರಿ ಏಜೆನ್ಸಿಯವರು ವಿನಾಕಾರಣ ಹೆಚ್ಚಿನ ಪ್ರಮಾಣದಲ್ಲಿ ಜಿಎಸ್‌ಟಿ ಕಡಿತಗೊಳಿಸುತ್ತಿದ್ದಾರೆ. ಅಂತವರ ಮೇಲೆಕ್ರಮವಾಗಬೇಕು ಎಂದು ತಿಳಿಸಿದರೆ, ಇನ್ನು ಕೆಲವೊಂದು ತಾಲೂಕುಗಳಲ್ಲಿ ಕ್ರೀಡಾಂಗಣಗಳುಆಗಿಲ್ಲ. ಅವುಗಳ ಕಾರ್ಯಗತಗೊಳಿಸಲು ಸಚಿವರಲ್ಲಿ ಕೇಳಿಕೊಂಡರು.
ಸಂಸದ ಪಿ.ಸಿ.ಗದ್ದಿಗೌಡರ ಬಾದಾಮಿ ತಾಲೂಕಿನಲ್ಲಿ ಕ್ರೀಡಾಂಗಣದ ಕೊರತೆ ಇದ್ದು, ಬೇಗೆ ಅನುಷ್ಠಾನಕ್ಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ.ರಾಜೇಂದ್ರಮಾತನಾಡಿ, ಬಾಕಿ ಉಳಿದ ಶಾಸಕರ ಅನುದಾನವನ್ನುಗಾಂಧಿ ಸಾಕ್ಷಿ ತಂತ್ರಾಂಶದಲ್ಲಿ ಎಂಟ್ರಿ ಮಾಡಲ ತಡವಾಗಿದ್ದು, ಬಾಕಿ ಉಳಿದ ಅನುದಾನ ಖರ್ಚಿಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಡಾ|ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಜಿ.ಪಂ ಸಿಇಒ ಟಿ.ಭೂಬಾಲನ, ಪ್ರೊಬೇಷನರಿ ಐಎಎಸ್ ಅಧಿಕಾರಿ ಯಶವಂತ ಗುರುಕಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಸಿದ್ದು ಹುಳ್ಳೊಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಶಾಸಕರ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು ತ್ವರಿತಗತಿಯಲ್ಲಿ ಆಗುತ್ತಿಲ್ಲ. ಕೆಆರ್‌ಐಡಿಎಲ್ ಒಂದು ಸರಕಾರಿ ಏಜೆನ್ಸಿಯಾಗಿದ್ದು, ಇವರಿಗೆನೀಡಿರುವ ಕಾಮಗಾರಿಗಳು ಸರಿಯಾಗಿ ಆಗುತ್ತಿಲ್ಲ. ಇದರಿಂದ ಅಭಿವೃದ್ಧಿಯಲ್ಲಿ ಕುಂಟಿತಗೊಳ್ಳುತ್ತಿದೆ.
– ಡಾ|ನಾರಾಯಣಗೌಡ, ಕ್ರೀಡಾ ಸಚಿವ