ಅರಸೀಕೆರೆ: ರಾಜ್ಯಕ್ಕೆ ಕೇಂದ್ರ ಸರ್ಕಾರ 39.5 ಸಾವಿರ ಕೋಟಿ ರೂ. ಪೈಕಿ 9.5 ಕೋಟಿ ರೂ. ನೀಡದ ಕಾರಣ ಸ್ಥಳೀಯ ಸಂಸೆ §ಗಳ 2 ಕೋಟಿ ರೂ. ಅರ್ನಿಬಂಧಿತ ಅನುದಾನ ಬಿಡುಗಡೆಯಾಗದೆ ಅಭಿವೃದ್ಧಿ ಕಾಮಗಾರಿಗಳು ಕುಂಟಿತಗೊಳ್ಳಲಿವೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಪಟ್ಟಣದ ತಾಪಂನ ಸಾಮರ್ಥ್ಯ ಸೌಧದಲ್ಲಿ ಅಧ್ಯಕ್ಷೆ ರೂಪಾ ಗುರುಮೂರ್ತಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಕೊರೊನಾ ಕಾರಣ ನೀಡಿ ರಾಜ್ಯ ಸರ್ಕಾರಕ್ಕೆ ನೀಡಬೇಕಾಗಿದ್ದ 39.5 ಸಾವಿರ ಕೋಟಿ ರೂ. ಹಣದ ಪೈಕಿ 9.5 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಹೀಗಾಗಿ 14ನೇ ಹಣಕಾಸು ಯೋಜನೆಯಲ್ಲಿ ಸ್ಥಳೀಯಸಂಸ್ಥೆಗಳಿಗೆ ನೀಡಬೇಕಾಗಿದ್ದ 2 ಕೋಟಿ ರೂ.ಅರ್ನಿಬಂಧಿತಅನುದಾನಬಂದಿಲ್ಲ.ಆದಕಾರಣಪ್ರಸಕ್ತವರ್ಷದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಕುಂಟಿತಗೊಳ್ಳಲಿವೆ ಎಂದು ದೂರಿದರು.
ವಿಷಯ ಚರ್ಚೆಗೆ ತರಲಿಲ್ಲ: ಮುಂದಿನ ವರ್ಷ ನಡೆಯಲಿರುವ ತಾಪಂ ಚುನಾವಣೆಗೆ ಜನಪ್ರತಿನಿಧಿಗಳು ಜನರ ಬಳಿಗೆ ಹೋಗಿ ಮತ ಕೇಳಲು ಸಾಧ್ಯವಾದ ಪರಿಸ್ಥಿತಿ ಉಂಟಾಗಲಿದೆ. ಈ ಬಗ್ಗೆ ತಾವು ಸದನದಲ್ಲಿ ಪ್ರಸ್ತಾಪ ಮಾಡಿದೆ. ಆದರೆ, ಕೊರೊನಾ ಕಾರಣ ನೀಡಿ ಸಮಯ ಇಲ್ಲ ಎಂದು ವಿಷಯ ಚರ್ಚೆಗೆ ತರಲಿಲ್ಲ ಎಂದು ವಿಷಾದಿಸಿದರು.
ಸಮರ್ಪಕವಾಗಿ ತಲುಪಿಸಿ: ತೋಟಗಾರಿಕೆ ಇಲಾಖೆ ಮೂಲಕ ಸರ್ಕಾರ ಕೋವಿಡ್, ಲಾಕ್‌ಡೌನ್‌ಹಿನ್ನೆಲೆಯಲ್ಲಿಹೂವು, ಹಣ್ಣು, ತರಕಾರಿ ಬೆಳೆ ನಷ್ಟವಾದ ರೈತರಿಗೆ ನೀಡಿರುವ ಪರಿಹಾರ ಕುರಿತು ಸಹಾಯ ನಿರ್ದೇಶಕ ಶಿವಕುಮಾರ್ ನೀಡಿದ ವರದಿಗ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಅಲ್ಪಸ್ವಲ್ಪ ಪರಿಹಾರ ನೀಡುತ್ತಿದ್ದರೇ ಅದನ್ನೂ ಅರ್ಹರಿಗೆ ತಲುಪಿಸುತ್ತಿಲ್ಲ ಎಂದು ದೂರಿದರು.
ಕೃಷಿ ಇಲಾಖೆ ಸಹಾಯ ನಿರ್ದೇಶಕ ಆಶೋಕ್ ಮಾಹಿತಿ ನೀಡಿ, ತಾಲೂಕಿನಲ್ಲಿ 26,010 ಹೆಕ್ಟೇರ್‌ನಲ್ಲಿರಾಗಿ, 13,932 ಹೆಕ್ಟೇರ್‌ನಲ್ಲಿ ಜಮೀನಿನಲ್ಲಿ ಮುಸುಕಿನ ಜೋಳ ಸೇರಿ 40,065 ಹೆಕ್ಟೇರ್‌ನಲ್ಲಿ ಏಕದಳ, 7,476 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ, ಎಣ್ಣೆ ಕಾಳು, ವಾಣಿಜ್ಯ ಬೆಳೆ ಸೇರಿ ಒಟ್ಟು48,738ಹೆಕ್ಟೇರ್‌ನಲ್ಲಿ ಬೆಳೆ ಬೆಳೆಯಲಾಗಿದೆ. ಯೂರಿಯಾ, ರಸಗೊಬ್ಬರ ದಾಸ್ತಾನು ಇದ್ದು, ಯಾವುದಕ್ಕೂಕೊರತೆ ಇಲ್ಲ ಎಂದು ತಿಳಿಸಿದರು.
ತಾಪಂ ಉಪಾಧ್ಯಕ್ಷೆ ಶೋಭಾ ಶಿವಣ್ಣ, ಇಒ ಎಸ್.ಪಿ.ನಟರಾಜು, ಸದಸ್ಯರಾದ ವಿಜಯಕುಮಾರ್, ಕರಗುಂದ ಪ್ರಕಾಶ್, ಮಂಜುಳಾಬಾಯಿ, ಕೊಳಗುಂದ ಬಸವರಾಜು, ಬೋಜನಾಯ್ಕ ಚರ್ಚೆಯಲ್ಲಿ ಭಾಗವಹಿಸಿದ್ದರು.