Advertisement

ಸುರಪುರ ನಗರದ ಪ್ರಗತಿಗೆ ಬದ್ದ: ಶಾಸಕ ರಾಜುಗೌಡ

05:40 PM Aug 14, 2022 | Team Udayavani |

ಸುರಪುರ: ನಗರದ ಹೃದಯ ಭಾಗದಲ್ಲಿ ನಗರಸಭೆಯಿಂದ ನೂತನವಾಗಿ ಪ್ರತಿಷ್ಠಾಪಿಸಿರುವ ಮಹಾತ್ಮ ಗಾಂಧಿ ಅವರ ಧ್ಯಾನ ಬಂಗಿಯಲ್ಲಿರುವ ಪ್ರತಿಮೆಯನ್ನು ಶಾಸಕ ರಾಜುಗೌಡ ಶನಿವಾರ ಅನಾವರಣಗೊಳಿಸಿದರು.

Advertisement

ಈ ವೇಳೆ ಶಾಸಕ ರಾಜುಗೌಡ ಮಾತನಾಡಿ, ನಗರಸಭೆಯ 2017-18ನೇ ಸಾಲಿನ ಎಸ್‌ಎಫ್‌ಸಿ 7.25 ಅನುದಾನದಡಿ 11 ಲಕ್ಷ ವೆಚ್ಚದಲ್ಲಿ ನೂತನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಈ ಮೊದಲು ಇದ್ದ ಪುತ್ಥಳಿ ಚಿಕ್ಕದಾಗಿತ್ತು. ದೊಡ್ಡದಾದ ಪುತ್ಥಳಿ ನಿರ್ಮಾಣಕ್ಕೆ ಅಂದಿನ ನಗರಸಭೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ನಗರಸಭೆ ಎಲ್ಲಾ ಸದಸ್ಯರ ಒಮ್ಮತದ ಮೇರೆಗೆ ಅಮೃತ ಮಹೋತ್ಸವ ಸವಿನೆನಪಿಗಾಗಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ ಎಂದರು.

ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಿದ್ದೇನೆ. ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸುಮಾರು ವರ್ಷಗಳಿಂದ ನಗರದ ಜನತೆಗೆ ಶಾಪವಾಗಿ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳಲಾಗಿದೆ. ದೇವಾಪುರ ಹತ್ತಿರದ ಕಂಪಾಪುರ ಬಳಿಯ ಕೃಷ್ಣಾ ನದಿಯಿಂದ ನೀರು ಸರಬರಜು ಮಾಡುವ ಬೃಹತ್‌ ಯೋಜನೆ ರೂಪಿಸಲಾಗಿದ್ದು, 258 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಡಿಸೆಂಬರ್‌ ಒಳಗಾಗಿ ನೀರು ಸರಬರಾಜು ಆಗಲಿದ್ದು ನಗರದ ಅಭಿವೃದ್ಧಿಗೆ ಬದ್ಧರಿರುವುದಾಗಿ ಹೇಳಿದರು.

ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ, ಉಪಾಧ್ಯಕ್ಷ ಮಹೇಶ ಪಾಟೀಲ, ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಡಿವೈಎಸ್ಪಿ ಡಾ| ಟಿ. ಮಂಜುನಾಥ, ಹುಣಸಗಿ ತಹಶೀಲ್ದಾರ್‌ ಜಗದೀಶ ಚೌರ, ತಾಪಂ ಇಒ ಚಂದ್ರಶೇಖರ ಪವ್ಹಾರ್‌, ತಾಲೂಕು ಆರೋಗ್ಯಾಧಿ ಕಾರಿ ಡಾ| ಆರ್‌.ವಿ. ನಾಯಕ, ಪೌರಾಯುಕ್ತ ಜೀವನಕಟ್ಟಿಮನಿ, ಬಿಜೆಪಿ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ, ತಾಲೂಕು ಅಧ್ಯಕ್ಷ ಮೇಲಪ್ಪ ಗುಳಗಿ, ರಾಜಾ ಹಣಮಪ್ಪ ನಾಯಕ ತತಾ, ಯಲ್ಲಪ್ಪ ಕುರುಕುಂದಿ, ಗ್ಯಾನ್‌ಚಂದ್‌ ಜೈನ್‌, ಡಾ| ಸುರೇಶ ಸಜ್ಜನ್‌, ಎಚ್‌.ಸಿ. ಪಾಟೀಲ, ರಾಜಾ ಮುಕುಂದ ನಾಯಕ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next