Advertisement

ಆದರ್ಶ ದಂಪತಿಗಳಿಗೆ ನಗೆ ಹಬ್ಬ

01:38 PM May 05, 2021 | Team Udayavani |

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎಂಬ ಬೇಂದ್ರೆಯವರ ಸಾಲುಗಳಂತೆ ರೈನ್‌ ಮೈನ್‌ ಕನ್ನಡ ಸಂಘ ಹೊಸ ವರ್ಷಕ್ಕೆ ಮತ್ತೂಂದು ಹೊಸ ಕಾರ್ಯಕ್ರಮದೊಂದಿಗೆ ಜರ್ಮನಿ ಕನ್ನಡಿಗರಿಗೆ ಹೊಸ ಹರ್ಷವನ್ನು ನೀಡಲು “ಯುಗಾದಿ ಸಂಭ್ರಮ’ ವನ್ನು  ಎ. 25ರಂದು ಏರ್ಪಡಿಸಿತ್ತು.

Advertisement

ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಗಂಗಾವತಿ ಪ್ರಾಣೇಶ್‌, ಬಸವರಾಜ ಮಹಾಮನಿ, ನರಸಿಂಹ ಜೋಶಿ ಅವರಿಂದ ನಗೆಹಬ್ಬ ಮತ್ತು ರೈನ್‌ಮೈನ್‌ ಕನ್ನಡ ಸಂಘದ ಜೋಡಿಗಳಿಗಾಗಿ “ಆದರ್ಶ ದಂಪತಿ’ಗಳು ಕಾರ್ಯ ಕ್ರಮವನ್ನು ಹಮ್ಮಿಕೊಂಡಿತ್ತು.

870 ಕ್ಕೂ ಹೆಚ್ಚು ಟಿ.ವಿ., ಲೈವ್‌ ಹಾಗೂ ಸ್ಟೇಜ್‌ ಶೋಗಳನ್ನು ತಮ್ಮ ಅರಳು ಹುರಿದಂತೆ ಮಾತನಾಡುವ ಶೈಲಿಯಿಂದ ಯಶಸ್ವಿಯಾಗಿ ನಡೆಸಿ ಕೊಟ್ಟಿರುವ ಮತ್ತು ಹಲವಾರು ಧಾರಾವಾಹಿಗಳಲ್ಲಿಯೂ ನಟಿಸಿರುವ, ಹಲವು ಜಾಹೀರಾತುಗಳಿಗೆ ಕಂಠದಾನ ಮಾಡಿರುವ ನಿರೂಪಕಿ ಭಾನುಪ್ರಿಯಾ ಅವರು ವಿಶಿಷ್ಟವಾಗಿ ನಡೆಸಿಕೊಟ್ಟರು. ಡಾ| ನವ್ಯದರ್ಶನ್‌ ಅವರು ಗಜಾನನ ಹಾಡನ್ನು ಭಕ್ತಿಪೂರ್ವಕವಾಗಿ ಹಾಡುವುದರ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.

ನಗುವ ನಗಿಸುವ ನಗೆ ಹಬ್ಬ

ಜ್ಯೂನಿಯರ್‌ ಬೀಚಿ ಎಂದೇ ಪ್ರಸಿದ್ಧರಾಗಿರುವ ಗಂಗಾವತಿ ಪ್ರಾಣೇಶ ಅವರು ನಗೆಹಬ್ಬದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದು, ಜರ್ಮನಿಯ ಎಲ್ಲ ಕನ್ನಡಿಗರಿಗೆ ಯುಗಾದಿಯ ಶುಭಾಶಯಗಳನ್ನು ಕೋರಿದರು. ಕೋವಿಡ್‌ನಿಂದಾಗಿ ಭಾರತದಲ್ಲಿ ಈ ಬಾರಿಯ ಯುಗಾದಿ ಯಾವುದೇ ಸಂತೋಷವನ್ನು ಕೊಡಲಿಲ್ಲ. ಪ್ರತಿದಿನ ಟಿವಿ, ರೇಡಿಯೋ ಮತ್ತು ಅಕ್ಕ-ಪಕ್ಕದವರಿಂದ ದುಃಖಕರ, ವಿಷಾದನೀಯ ವಿಷಯಗಳೇ ಕೇಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಗಿಸುವುದು ನಮಗೂ ಬಹಳ ಹಿಂಸೆಯಾಗಿದೆ. ಆದರೆ ಅನಿವಾರ್ಯ ಕಾರಣಗಳಿಂದ ದೂರದಲ್ಲಿರುವ ಕನ್ನಡಿಗರ ಅಪೇಕ್ಷೆಯಿಂದ ಎಲ್ಲರನ್ನು ರಂಜಿಸಲು ಬಂದಿದ್ದೇವೆ. ನಾವು ಯುದ್ಧವನ್ನು ನೋಡಿರಲಿಲ್ಲ ಯುದ್ಧವೆಂದರೆ ಹೀಗೆ ಇರುತ್ತದೇನೋ ಎನ್ನುವ ಹಾಗಾಗಿದೆ. ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಈ ಕೋವಿಡ್‌ ಜಗತ್ತನ್ನು ಬಿಟ್ಟು ಹೋಗಲಿ ಮತ್ತೆಂದೂ ಬಾರದಿರಲಿ ಎಂದು ಹಾರೈಸೋಣ ಎಂದು ಹೇಳುತ್ತಾ ಕೊರೊನಾದ ಬಗೆಗೇ ಒಂದಿಷ್ಟು ನಗೆ ಚಟಾಕಿ ಹಾರಿಸಿದರು.

Advertisement

ಕೊರೊನಾದಿಂದ ಇಡಬಹುದಾದ ಒಂದಿಷ್ಟು ಸಿನೆಮಾ ಹೆಸರುಗಳು, ವಚನ, ಕೊರೊನಾದ ಗಾದೆಗಳನ್ನು ಹೇಳುತ್ತಾ ಎಂತಹ ಸಂಕಷ್ಟದ ಸಮಯದಲ್ಲೂ ಹಾಸ್ಯವನ್ನು ಹುಡುಕಬೇಕು ಏಕೆಂದರೆ ಇದು ಅನಿವಾರ್ಯ. ಜೀವನದಲ್ಲಿ ಎಲ್ಲವನ್ನು ನಗುನಗುತ್ತಾ ಎದುರಿಸಬೇಕು. ಕವಿಯಾದವನು ಎಲ್ಲದರಲ್ಲೂ ಸಾಹಿತ್ಯ, ಹಾಸ್ಯವನ್ನು ಕಾಣುತ್ತಾನೆ. ಮೊದಲು ಎಲ್ಲವೂ ಪಾಸಿಟಿವ್‌ ಆಗಲಿ ಎನ್ನುತ್ತಿದ್ದವರು ಈಗ ಎಲ್ಲ ನೆಗೆಟಿವ್‌ ಆಗಲಿ ಎನ್ನುತ್ತಿ¨ªಾರೆ. ಇದು ಕಾಲನ ವಿರುದ್ಧ ಹೋದರೆ ಎಲ್ಲವೂ ವಿರುದ್ಧವಾಗುತ್ತದೆ ಎನ್ನುವುದರ ಸೂಚನೆ ಎಂದರು.

“ದೇಶ ಸುತ್ತಬೇಕು ಕೋಶ ಓದಬೇಕು’ ಎಂದು ಅವರು, ಹಲವಾರು ಭಾಗಗಳಲ್ಲಿ ಕಾರ್ಯಕ್ರಮಕ್ಕೆ ಹೋದಾಗ ಸಿಗುವ ವಿಭಿನ್ನ ಪ್ರೇಕ್ಷಕರ ಪ್ರತಿಕ್ರಿಯೆಗಳ ಬಗೆಗೆ ಮಾತನಾಡಿದರು. ಎಲ್ಲರನ್ನೂ ಆಕರ್ಷಿಸುವಂತ ಅದ್ಭುತವಾದ ಮಾಧ್ಯಮವೆಂದರೆ ಅದು ಹಾಸ್ಯ. ಅದನ್ನು ನಾನು ಕಳೆದ 30 ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಊರುಗಳ ಹೆಸರುಗಳಿಂದಾಗುವ ಹಾಸ್ಯ, ಸತ್ತ ಮನೆಯಲ್ಲಿಯ ಹಾಸ್ಯ, ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಎನ್ನುವ ಸಿದ್ಲಿಂಗನ  ಕಾಮನ್‌ಸೆನ್ಸ್‌ ಜೋಕುಗಳೊಂದಿಗೆ ಎಲ್ಲರಿಗೂ ಮಾತಿನÇÉೇ ಕಚಗುಳಿ ಇಟ್ಟರು.

“ನಹಿ ಜ್ಞಾನೇನ ಸದೃಶಂ’ ಎಲ್ಲರೂ ಉತ್ತಮ ಮಾತುಗಾರರಾಗಬೇಕು, ಹಾಸ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದರೆ, ಶಬ್ಧ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕೆಂದರೆ, ಜನ ಗೌರವಿಸಬೇಕು. ಹೆಚ್ಚು ಸ್ನೇಹಿತರು ಬೇಕು ಎಂದರೆ ಬಿಡುವಿನ ವೇಳೆಯಲ್ಲಿ ಕನ್ನಡ ಪುಸ್ತಕಗಳನ್ನು ಓದಿ. ನಗುವಿನಿಂದಲೇ ಆರೋಗ್ಯ ಹ್ಯೂಮರ್‌ ಇಸ್‌ ದಿ ಬೆಸ್ಟ್‌ ಥೆರಪಿ ಎಂದು ಹೇಳುತ್ತಾ ರೈನ್‌ಮೈನ್‌ ಕನ್ನಡ ಸಂಘದಿಂದ ಎಲ್ಲ ಕನ್ನಡಿಗರೂ ಒಂದಾಗಿದ್ದೀರಿ, ಸಂಗೀತವಿರಲಿ ಸಾಹಿತ್ಯವಿರಲಿ ಹೀಗೆ ಜನ ಸೇರುತ್ತಿರಿ, ಎಲ್ಲರೂ ಒಗ್ಗಟ್ಟಾಗುವುದೇ ಒಂದು ಹಬ್ಬ ಎಂದು ಹೇಳಿದರು.

ಬಸವರಾಜ ಮಹಾಮನಿ ಅವರು ಮಾತನಾಡಿ, ಹಾಸ್ಯಕ್ಕೆ ಇಂತಹದ್ದೇ ವಸ್ತು ಎಂದು ಏನಿಲ್ಲ. ಒಂದು ಮಾತು ಹೆಚ್ಚು ಕಮ್ಮಿಯಾದರೂ ಹಾಸ್ಯ ಸಿಗುತ್ತದೆ. ಯಾವುದೇ ಸಮಸ್ಯೆಯಾದರೂ ಹಾಸ್ಯದಿಂದಲೇ ಬಗೆಹರಿಸಿಕೊಳ್ಳಬೇಕು ಎನ್ನುತ್ತಾ ಭಾಷಾ ಕೊರತೆಯಿಂದ ಆಗುವ ಹಾಸ್ಯ, ಬಡತನದಲ್ಲೂ ಸಿಗುವ ಹಾಸ್ಯ ಹಾಗೂ ಗಂಡ- ಹೆಂಡತಿಯರ ನಡುವೆ ನಡೆಯುವ ಹಾಸ್ಯ ಪ್ರಸಂಗದೊಂದಿಗೆ ಶಾಯರಿಯನ್ನು ಹೇಳಿ ಎಲ್ಲರನ್ನು ಮನರಂಜಿಸಿದರು. ನಗು ಮುಖದೊಂದಿಗೆ ಎಲ್ಲರೂ ಕೊಡುವ ಚಪ್ಪಾಳೆ ಕಲಾವಿದರಿಗೆ ಖುಷಿ ಕೊಡುತ್ತದೆ. ಹಾಸ್ಯ ಕಲಾವಿದರು ಎಂದೂ ಸ್ವರ್ಗಕ್ಕೆ ಹೋಗುವುದಿಲ್ಲ. ಏಕೆಂದರೆ ಅವರು ಇದ್ದ ಜಾಗವನ್ನೇ ಸ್ಪರ್ಗವನ್ನಾಗಿ ಮಾಡಿಕೊಳುತ್ತಾರೆ ಎಂದರು.

ನರಸಿಂಹ ಜೋಶಿ ಅವರು ಹಲವು ರಾಜಕಾರಣಿಗಳ ಧ್ವನಿಯನ್ನು ಮಿಮಿಕ್ರಿ ಮಾಡುತ್ತಾ, ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಉತ್ತರ ಕರ್ನಾಟಕದಲ್ಲಿ ಹೆಂಡತಿಯರು, ಗಂಡನ ಹೆಸರನ್ನು ಒಡಪು ಹಾಕಿ ಹೇಳುವ ಉದಾಹರಣೆಗಳನ್ನು ಹೇಳಿದರು. ದೇಶ ಬಿಟ್ಟು ಹೋಗಿಯೂ ಕನ್ನಡಾಂಬೆಯ ಪೂಜೆಯನ್ನು ಮಾಡುತ್ತಾ, ಕನ್ನಡ ಬಾವುಟ ಹಾರಿಸುತ್ತಾ ಇರುವ ನಿಮ್ಮ ಸೇವೆ ದೊಡ್ಡದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಡಾ| ರಾಜ್‌ ಕುಮಾರ್‌ ಅವರ ಭಕ್ತ ಪ್ರಹ್ಲಾದ ಸಿನೆಮಾದ ಸಂಭಾಷಣೆಯನ್ನು ನಿರರ್ಗಳವಾಗಿ ಹೇಳುತ್ತಾ ಅವರ ಜನ್ಮ ದಿನವೆಂದು ನೆನಪಿಸಿಕೊಂಡರು. ಹಾಸ್ಯದ ಮೂಲಕ ವಾಗ¾ಯ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟವರಿಗೆ ಧನ್ಯವಾದ ಸಲ್ಲಿಸಿದರು.

ಬೀಚಿ ಅವರ ಮಾತಿನಂತೆ ವಾರದಲ್ಲಿ 3 ದಿನವಾದರೂ ನಗುತ್ತಿರಬೇಕು. ನಿನ್ನೆ, ಇವತ್ತು ಹಾಗೂ ನಾಳೆ. ಹಾಸ್ಯ ತ್ರಿಮೂರ್ತಿಗಳ ವಾಗ್ಝರಿಯಿಂದ ಇಂತಹ ಆತಂಕ, ಕಳವಳದ ಪರಿಸ್ಥಿತಿಯಲ್ಲೂ ಎಲ್ಲರೂ ಎಲ್ಲವನ್ನೂ ಮರೆತು ಒಂದಿಷ್ಟು ಸಮಯ ನಕ್ಕು ಹಗುರಾದರು.

ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಜರ್ಮನಿಯ ವಿಸ್ತಾರ ಟಾಟಾ ಏರ್‌ಲೈನ್ಸ್‌ ಲಿಮಿಟೆಡ್‌ನ‌ ಜನರಲ್‌ ಮ್ಯಾನೇಜರ್‌ ನಟಾಲಿಯವ ಮಾತನಾಡಿ, 2013 ರಲ್ಲಿ ಪ್ರಾರಂಭವಾದ ವಿಸ್ತಾರ ಏರ್‌ಲೈನ್‌ನಿಂದ ಪ್ರತಿದಿನ 200ಕ್ಕೂ ಹೆಚ್ಚು ವಿಮಾನಗಳು

30ಕ್ಕೂ ಹೆಚ್ಚಿನ ಪ್ರದೇಶಗಳನ್ನು ತಲುಪುತ್ತಿದೆ. ವಾರಕ್ಕೆ 2 ದಿನ ಫ್ರಾಂಕ್‌ಫ‌ರ್ಟಿನಿಂದ ದಿಲ್ಲಿಗೆ ವಿಮಾನ ಸೌಲಭ್ಯಗಳಿವೆ ಎಂದು ತಿಳಿಸಿದರು. ಇಂತಹ ಸಂದರ್ಭದಲ್ಲಿ ಎಲ್ಲರೂ ಆನ್‌ಲೈನ್‌ ಮೂಲಕ ಒಂದಾಗಿರುವುದು ಒಳ್ಳೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

 

 ಶೋಭಾ ಚೌಹಾನ್‌, ಫ್ರಾಂಕ್‌ಫ‌ರ್ಟ್‌

ಫಾಂಕ್‌ಫ‌ರ್ಟ್‌

 

 

Advertisement

Udayavani is now on Telegram. Click here to join our channel and stay updated with the latest news.

Next