Advertisement

ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ

07:11 PM Feb 11, 2021 | Team Udayavani |

ಮುಂಬಯಿ: ಖಾರ್‌ ಪೂರ್ವ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಫೆ. 6ರಂದು ಖಾರ್‌ ಪೂರ್ವದ ಸಾಯಿಧಾಮ್‌ ಬಿಲ್ಡಿಂಗ್‌, ಸಾಯಿಬಾಬಾ ರೋಡ್‌ನ‌ಲ್ಲಿ ಸಮಿತಿಯ ಶ್ರೀ ಶನೀಶ್ವರ ಮಂದಿರದಲ್ಲಿ ನಡೆಯಿತು.

Advertisement

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶನಿದೇವರ ಗ್ರಂಥ ವಾಚನ, ಭಜನೆ ಹಾಗೂ ದೇವರಿಗೆ ಮಂಗಳಾರತಿ ಜರಗಿತು. ಸಮಿತಿಯ ಟ್ರಸ್ಟಿನ ಸದಸ್ಯರಾದ ಕಮಲಾಕ್ಷ ಸುವರ್ಣ, ಸೀಮಾ ಸುವರ್ಣ, ಅರ್ಚಕರಾದ ನಾಗೇಶ್‌ ಸುವರ್ಣ, ರವೀಂದ್ರ ಕೋಟ್ಯಾನ್‌, ಕಾರ್ಯಾಧ್ಯಕ್ಷ ಜಯರಾಮ್‌ ಶೆಟ್ಟಿ , ಉಪಾಧ್ಯಕ್ಷ ದೀವೇಂದ್ರ ವಿ. ಬಂಗೇರ, ಭೋಜ ಸಿ. ಪೂಜಾರಿ, ಜತೆ ಕಾರ್ಯದರ್ಶಿ ರಮೇಶ್‌ ಪೂಜಾರಿ, ಮಹಿಳಾ ಮಂಡಳಿಯ ಕಾರ್ಯಾಧ್ಯಕ್ಷೆ ಸರಸ್ವತಿ ಬಿ ಪೂಜಾರಿ, ಟ್ರಸ್ಟಿನ ಸದಸ್ಯರಾದ ನಾರಾಯಣ ಜೆ. ಕೋಟ್ಯಾನ್‌ ವನಜಾ ಕೋಟ್ಯಾನ್‌, ಲೀಲಾವತಿ ವೈ. ಹೆಜಮಾಡಿ, ಜತೆ ಕಾರ್ಯದರ್ಶಿ ರೇವತಿ ಕೆ. ಶೆಟ್ಟಿ , ಶೋಭಾ ಸಾಲ್ಯಾನ್‌ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ:ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

ಶೋಭಾ ಕೋಟ್ಯಾನ್‌,ಶೋಭಾ ಪೂಜಾರಿ, ಶಾರದಾ ಸಾಲ್ಯಾನ್‌, ವಿಮಲಾ ಆರ್‌. ಕೋಟ್ಯಾನ್‌, ಸುರೇಖಾ ಕೋಟ್ಯಾನ್‌, ಸುಗಂದಿ ಕೋಟ್ಯಾನ್‌, ಸುಲೋಚನಾ ಬಂಗೇರ, ಶ್ರದ್ಧಾ ಪೂಜಾರಿ, ಶೀತಲ್‌ ಆರ್‌. ಕೋಟ್ಯಾನ್‌, ನಲಿನಾಕ್ಷೀ, ಹರೀಶ್‌ ಕೋಟ್ಯಾನ್‌. ಜನಾರ್ಧನ ಸಾಲ್ಯಾನ್‌, ವಿನೋದ್‌ ಹೆಜಮಾಡಿ, ಸುಜಿತ್‌ ಸಾಲ್ಯಾನ್‌, ಸಚಿನ್‌, ಸಾಗರ್‌ ಸಾಲ್ಯಾನ್‌, ವಿಶ್ವ ವಿ. ಕುಮಾರ್‌, ಸಚಿನ್‌ ಬಿ. ಪೂಜಾರಿ, ಮೋಹಿನಿ ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ, ಹರೀಶ್‌ ಕೋಟ್ಯಾನ್‌ ಸಂಪೂರ್ಣ ಸಹಕಾರ ನೀಡಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್‌ ಕೆ. ಹೆಜಮಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next