ಮುಂಬಯಿ: ಬಿಲ್ಲವರ ಅಸೋಸಿ ಯೇಶನ್ ಮುಂಬಯಿಯು ಉತ್ತಮ ಸೇವಾ ಕಾರ್ಯಗಳಿಂದ ಮಾದರಿ ಸಂಸ್ಥೆ ಎನಿಸಿದೆ. ಸಮಾಜದ ಜನರ ಅಭ್ಯುದಯವೇ ಅಸೋಸಿಯೇಶನ್‌ನ ಧ್ಯೇಯ. ಆರೋಗ್ಯವಂತ ಸಮಾಜ ಭಾಂದವರು ಅಸೋಸಿಯೇಶನ್‌ನ ಆಸ್ತಿ. ಎಲ್ಲರೂ ಆರೋಗ್ಯವಂತರಾಗಿ ಬಾಳಿದರೆ ಸಮಾಜಕ್ಕೆ ಉತ್ತಮ ಸೇವೆ ನೀಡಬಹುದು ಎಂದು ಎನ್‌ಸಿಪಿ ನಾಯಕ ಲಕ್ಷ್ಮಣ ಸಿ.
ಪೂಜಾರಿ ತಿಳಿಸಿದರು.
ಎ. 14ರಂದು ತುಳು, ಕನ್ನಡಿಗರಿಗಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್ ನೇತೃತ್ವದಲ್ಲಿ, ಯುವಾಭ್ಯುದಯ ಉಪಸಮಿತಿಯ ಆಶ್ರಯದಲ್ಲಿ ಸ್ಥಳೀಯ ಸಮಿತಿಗಳ ಸಹಕಾರದೊಂದಿಗೆ ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಆಯೋಜಿಸಿದ ಉಚಿತ ಕೋವಿಡ್ ಲಸಿಕೆ ಅಭಿಯಾನದಲ್ಲಿ ಅವರು ಮಾತನಾಡಿ, ಕೋವಿಡ್ ಲಸಿಕೆ ಅಭಿಯಾನದ ಪ್ರಯೋಜನ ಪಡೆಯಬೇಕು ಹಾಗೂ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ತಿಳಿಸಿದರು.
ತುಳು, ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಕಳೆದ 89 ವರ್ಷಗಳ ಇತಿಹಾಸದಲ್ಲಿ ಹಲವಾರು ಉತ್ತಮವಾದ ಸೇವಾ ಕಾರ್ಯಗಳನ್ನು ಸಮಾಜಕ್ಕೆ ನೀಡಿದ್ದು, ಇತ್ತೀಚೆಗೆ ಬಂಟರ ಸಂಘ ಮುಂಬಯಿ ಮತ್ತು ಆಹಾರ್ ಸಹಭಾಗಿತ್ವದಲ್ಲಿ ಸಂಸದ ಗೋಪಾಲ ಶೆಟ್ಟಿಯವರ ಕರೆಗೆ ಓಗೊಟ್ಟು ರಕ್ತದಾನ ಶಿಬಿರದಲ್ಲಿ ಮಾನವೀಯ ಸೇವೆ ನೀಡಿದೆ. ಯಶಸ್ವಿಯಾಗಿ ನಡೆದ ಉಚಿತ ಕೋವಿಡ್ ಲಸಿಕೆ ಅಭಿಯಾನದಲ್ಲಿ ಸುಮಾರು 150ಕ್ಕಿಂತಲೂ ಹೆಚ್ಚಿನ ಸಮಾಜ ಭಾಂದವರು, ತುಳು, ಕನ್ನಡಿಗರು ಲಸಿಕೆಯನ್ನು ಹಾಕಿಸಿಕೊಂಡರು.
ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿ ಯೇಶನ್ ಉಪಾಧ್ಯಕ್ಷ ಶ್ರೀನಿವಾಸ್ ಆರ್. ಕರ್ಕೇರ, ಗೌ. ಪ್ರ. ಕಾರ್ಯದರ್ಶಿ ಧನಂಜಯ ಶಾಂತಿ, ಗೌ. ಕೋಶಾಧಿಕಾರಿ ರಾಜೇಶ್ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಯುವಾಭ್ಯುದಯ ಉಪಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎಂ. ಕೋಟ್ಯಾನ್, ಸಂಯೋಜಕರಾದ ಸದಾಶಿವ ಎ. ಕರ್ಕೇರ, ಮಾಜಿ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು, ಜಿ.ಒ.ಸಿ. ಗಣೇಶ್ ಕೆ. ಪೂಜಾರಿ, ಸಮಿತಿಯ ಸದಸ್ಯರಾದ ನವೀನ್ ಎಲ್. ಬಂಗೇರ, ಶಂಕರ್ ಸುವರ್ಣ, ಭಾರತ್ ಬ್ಯಾಂಕ್‌ನ ನಿರ್ದೇಶಕರಾದ ಭಾಸ್ಕರ್. ಎಂ. ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ, ಸೂರ್ಯಕಾಂತ್ ಜೆ. ಸುವರ್ಣ, ಪುರುಷೋತ್ತಮ ಎಸ್. ಕೋಟ್ಯಾನ್, ಅಂಧೇರಿ ಸ್ಥಳೀಯ ಸಮಿತಿಯ ಗೌ. ಕಾರ್ಯದರ್ಶಿ ಹರೀಶ್ ಶಾಂತಿ, ಘಾಟ್‌ಕೋಪರ್ ಸ್ಥಳೀಯ ಸಮಿತಿಯ ಗೌ. ಕಾರ್ಯದರ್ಶಿ ಯೋಗೇಶ್ ಎನ್. ಪೂಜಾರಿ, ಮಲಾಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ, ವಸಾಯಿ ಸ್ಥಳೀಯ ಸಮಿತಿ ಗೌ. ಕಾರ್ಯದರ್ಶಿ ಲೋಹಿತಾಕ್ಷ ಅಂಚನ್, ನೂರಾರು ಮಂದಿ ಸಮಾಜ ಭಾಂದವರು, ತುಳು-ಕನ್ನಡಿಗರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ರಾಜಕೀಯ ನಾಯಕರಾದ ನಿರಂಜನ್ ಲಕ್ಷ್ಮಣ ಪೂಜಾರಿ, ಕಿರಣ್ ಪೂಜಾರಿ ಮತ್ತು ಸೇವಾದಳದ ಸದಸ್ಯರು ಸಹಕರಿಸಿದರು. ಉಪ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎಂ. ಕೋಟ್ಯಾನ್ ಸ್ವಾಗತಿಸಿ, ಗೌ.ಪ್ರ. ಕಾರ್ಯದರ್ಶಿ ನಿರೂಪಿಸಿದರು. ಯುವ ಸಂಯೋಜಕ ಸದಾಶಿವ ಕರ್ಕೇರ ವಂದಿಸಿದರು.