ಮುಂಬಯಿ: ಭಾಂಡೂಪ್ ಪಶ್ಚಿಮದ ಭಟ್ಟಿಪಾಡಾದ ಶ್ರೀ ಶನೀಶ್ವರ ಮಂದಿರದ 37ನೇ ವಾರ್ಷಿಕ ಮಹಾಪೂಜೆಯು ಫೆ. 4ರಿಂದ ಫೆ. 6ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಫೆ. 6ರಂದು ಬೆಳಗ್ಗೆ ಸ್ವಸ್ತಿ ಪುಣ್ಯಾಹ ವಾಚನ, ಪ್ರಧಾನ ಹೋಮ, ಪಂಚ ವಿಂಶತಿ, ಕಲಶಾರಾಧನೆ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಕಲೊ³àಕ್ತ ಪೂಜೆ, ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು. ಬಳಿಕ ಮುಲುಂಡ್ ಅಮರ್ ನಗರದ ಶ್ರೀ ಮಹಾಕಾಳಿ ಕ್ಷೇತ್ರದ ಪ್ರಧಾನ ಅರ್ಚಕ ಜಯಂತ್ ಪೂಜಾರಿ ಅವರು ದೀಪಪ್ರಜ್ವಲಿಸಿ ಶ್ರೀ ಶನೀಶ್ವರ ಗ್ರಂಥ ಪಾರಾಯಣಕ್ಕೆ ಚಾಲನೆ ನೀಡಿದರು.
ರಾತ್ರಿಯವರೆಗೆ ನಡೆದ ಶನಿಗ್ರಂಥ ಪಾರಾಯಣದಲ್ಲಿ ಭಟ್ಟಿಪಾಡಾ ಶ್ರೀ ಶನೀಶ್ವರ ಸೇವಾ ಸಮಿತಿಯವರಲ್ಲದೆ ನಗರದ ವಿವಿಧೆಡೆಯ ಶ್ರೀ ಶನೀಶ್ವರ ಮಂದಿರದ ಸದಸ್ಯರು, ಸಮಿತಿಯ ಸದಸ್ಯರು, ಅರ್ಥದಾರಿಗಳು, ವಾಚಕರು ಪಾಲ್ಗೊಂಡು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪಾರಾಯಣನ್ನು ನಡೆಸಿಕೊಟ್ಟರು. ಕೊನೆಯಲ್ಲಿ ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ಸರಳ ರೀತಿಯಲ್ಲಿ ನಡೆದ ವಾರ್ಷಿಕ ಮಹಾಪೂಜೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಕೊರೊನಾ ಮಾರ್ಗಸೂಚಿಗಳಿಗೆ ಅನುಸಾರವಾಗಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಆಡಳಿತ ಮಂಡಳಿಯ ಗೌರವಾಧ್ಯಕ್ಷ ಕೆ. ಎಸ್. ಹೆಗ್ಡೆ, ಅಧ್ಯಕ್ಷ ದಯಾನಂದ ಡಿ. ಶೆಟ್ಟಿ, ಉಪಾಧ್ಯಕ್ಷ ಬಿ. ಎ. ಕುಂದರ್, ಗೌರವ ಪ್ರಧಾನ ಕಾರ್ಯದರ್ಶಿ ಸದಾನಂದ ಎಂ. ಅಮೀನ್, ಗೌರವ ಪ್ರಧಾನ ಕೋಶಾಧಿಕಾರಿ ಸುಂದರ ಆರ್. ಅಂಚನ್, ಜತೆ ಕಾರ್ಯದರ್ಶಿಗಳಾದ ಜಯ ಎ. ಸಾಲ್ಯಾನ್, ಪ್ರಸಾದ್ ಎಂ. ಉದ್ಯಾವರ, ಪ್ರಧಾನ ಅರ್ಚಕ ಸೀತಾರಾಮ್ ಜಿ. ಕರ್ಕೇರ, ಅರ್ಚಕರಾದ ಸತೀಶ್ ವಿ. ಪೂಜಾರಿ, ಪುಷ್ಪರಾಜ್ ಪೂಜಾರಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಕರಾವಳಿಯ ಹತ್ತು ಸ್ಪೆಶಲ್ ಫುಡ್ ನಿಮಗಾಗಿ : ಮೈಂಡ್ ಫುಲ್ ಈಟಿಂಗ್ ನಿಮ್ಮದಾಗಲಿ
ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಚ್. ಜಿ. ಕರ್ಕಿ, ರಮೇಶ್ ಪೂಜಾರಿ, ಶೇಖರ ಕೋಟ್ಯಾನ್, ನಾರಾಯಣ ಬಿ. ಪೂಜಾರಿ, ಅಶೋಕ್ ಸಾಲ್ಯಾನ್, ಬಾಬು ಜೆ. ಸುವರ್ಣ, ಪದ್ಮನಾಭ ಆರ್. ಅಮೀನ್, ಜಯಂತ್ ಶೆಟ್ಟಿಗಾರ್, ಗೋಪಾಲ್ ಎಸ್. ಕೋಟ್ಯಾನ್, ಅರುಣ್ ಸುವರ್ಣ, ನಾರಾಯಣ ಪೂಜಾರಿ, ರೋಹಿಣಿ ಆರ್. ಪುತ್ರನ್, ಸುಧಾಕರ ಅಂಚನ್, ಜಯ ಸಿ. ಪೂಜಾರಿ, ಶಾರದಾ ಆರ್. ಸುವರ್ಣ, ರಾಜು ಎನ್. ಪೂಜಾರಿ, ಪ್ರವೀಣ್ ಟಿ. ಕರ್ಕೇರ, ನಾರಾಯಣ ಜಿ. ಕೋಟ್ಯಾನ್, ಆಶಾಲತಾ ಡಿ. ಕೋಟ್ಯಾನ್, ಜಯಂತ್ ವಿ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಮಹಾಪೂಜೆಯ ಯಶಸ್ಸಿಗೆ ಸಹಕರಿಸಿದರು.