Advertisement

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ‌ಅಂಗಾರಕ ಸಂಕಷ್ಟಹರ ಚತುರ್ಥಿ ಸಂಭ್ರಮ

04:04 PM Mar 02, 2021 | Team Udayavani |

ತೆಕ್ಕಟ್ಟೆ : ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿಪ್ರಯುಕ್ತ ಸಹಸ್ರ ನಾಲಿಕೇರ ಗಣಯಾಗವು (ಮಾ.2) ಮಂಗಳವಾರದಂದು ಜರಗಿತು.

Advertisement

ಹರಿದುಬಂದ ಭಕ್ತ ಸಮೂಹ : ವಿಶೇಷ ದಿನವಾದ ಮಂಗಳವಾರದಂದು ಅಂಗಾರಕ ಸಂಕಷ್ಟಹರ ಚತುರ್ಥಿ ಬಂದಿರುವ ಹಿನ್ನಲೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಮುಂಜಾನೆಯಿಂದಲೇ ಶ್ರೀಸನ್ನಿಧಿಗೆ ಆಗಮಿಸಿದ ಶ್ರೀದೇವರ ದರ್ಶನ ಪಡೆದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಬೆಂಗಳೂರಿನ ಕುಮಾರಿ ದಿವ್ಯರಾವ್‌ ಮತ್ತು ದೀಕ್ಷಾ ರಾವ್‌ ಅವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.

4ಸಾವಿರ ಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕಾರ : ಅಂಗಾರಕ ಸಂಕಷ್ಟಹರ ಚತುರ್ಥಿ ಹಿನ್ನೆಲೆಯಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಭಕ್ತರ ದಂಡು ಆಗಮಿಸಿದ್ದು , ಸುಮಾರು 4ಸಾವಿರ ಕ್ಕೂ ಅಧಿಕ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ ಎಂದು ದೇವಳದ ಮೂಲಗಳು ತಿಳಿಸಿದೆ.

ಇದನ್ನೂ ಓದಿ:ರೆಡ್ ಮಿ ಡಿಸ್ಪ್ಲೇ 27 ಇಂಚಿನ ಮಾನಿಟರ್ : ವಿಶೇಷತೆಗಳೇನು..?

Advertisement

ಈ ಸಂದರ್ಭದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ , ಹಿರಿಯ ಧರ್ಮದರ್ಶಿಗಳಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ , ಕೆ.ವಿಠಲ ಉಪಾಧ್ಯಾಯ ಹಾಗೂ ಅನುವಂಶಿಕ ಪರ್ಯಾಯ ಅರ್ಚಕರಾಗಿ ಕೆ.ಗಣೇಶ್‌ ಉಪಾಧ್ಯಾಯ ಮತ್ತು ಸಹೋದರ, ಮನೇಜರ್‌ ನಟೇಶ್‌ ಕಾರಂತ್‌ ತೆಕ್ಕಟ್ಟೆ ,ಅರ್ಚಕ ಮಂಡಳಿ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next