ಹೊಳೆನರಸೀಪುರ: ರಾಜ್ಯದ 224 ವಿಧಾನಸಭಾಕ್ಷೇತ್ರಗಳಲ್ಲಿರುವ ಶಾಸಕರಲ್ಲಿ ಹೊಳೆನರಸೀಪುರಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಶ್ರೀಸಾಮಾನ್ಯನಿಗೆಸುಲಲಿತವಾಗಿ ಕೈಗೆಟುಕುವ ಏಕೈಕ ಶಾಸಕರೆಂದುಹಾಸನ ಸಂಸದ ಪ್ರಜ್ವಲ್ ರೇವಣ್ಣ ನುಡಿದರು.ತಾಲೂಕಿನ ಕಡವಿನಕೋಟೆ ಗ್ರಾಮದಲ್ಲಿತಾಲೂಕು ಆಡಳಿತ ಆಯೋಜಿಸಿದ್ದ ಹಕ್ಕು ಪತ್ರವಿತರಣೆ ಕಾರ್ಯಕ್ರಮದಲ್ಲಿ ಹಕ್ಕು ಪತ್ರ ವಿತರಣೆಮಾಡಿ ಮಾತನಾಡಿದರು.
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟುಮಂದಿ ಸೂರು ಇಲ್ಲದೆ ಇದ್ದಾರೆ. ಜತೆಗೆ ಮತ್ತಷ್ಟುಮಂದಿ ಸೂರು ಇದ್ದರೂ ಅದಕ್ಕೆ ಯಾವುದೇ ಹಕ್ಕುಪತ್ರವಾಗಲಿ, ಏನೊಂದು ಇಲ್ಲದೆ ವಾಸವಾಗಿರುವುದು ತಮ್ಮ ಗಮನಕ್ಕೆ ಬಂದಿತ್ತು. ಈ ಬಗ್ಗೆ ಕಳೆದವಿಧಾನಸಭಾ ಚುನಾವಣೆ ವೇಳೆ ಬಹಳಷ್ಟು ಮಂದಿತಮ್ಮ ಅಳಲು ತೋಡಿಕೊಂಡಿದ್ದರು.ಗ್ರಾಮಸ್ಥರ ಅಳಲನ್ನು ಗಮನಿಸಿದ ತಾವು ಅಂದೇನಿರ್ಧಾರ ಮಾಡಿದೆ. ಮುಂದೊಂದು ದಿನ ಶಾಶ್ವತನೆಲೆ ದೊರಕಿಸಿಕೊಡುವ ಸಲುವಾಗಿ ಪ್ರತಿಜ್ಞೆಮಾಡಿದ್ದೆ.
ಈ ಹಿನ್ನೆಲೆಯಲ್ಲಿ 2 ವರ್ಷಗಳ ನಂತರ ಆನಿವಾಸಿಗಳಿಗೆ ಹಕ್ಕು ಪತ್ರ ತಾಲೂಕು ಆಡಳಿತ ಆಯಾನಿವಾಸಿಗಳಿಗೆ ಹಕ್ಕು ಪತ್ರ ನೀಡುವ ಮೂಲಕ ತಮ್ಮಅಂದಿನ ಪ್ರತಿಜ್ಞೆ ಇಂದು ಸಫಲತೆ ಕಂಡಿದೆ ಎಂದುಸಂತಸ ವ್ಯಕ್ತ ಪಡಿಸಿದರು.ಎರಡು ವರ್ಷ ಬೇಕಾಯಿತು:ಕಾರ್ಯಕ್ರಮಕ್ಕೆಚಾಲನೆ ನೀಡಿದ ಮಾತನಾಡಿದ ಶಾಸಕ ಎಚ್.ಡಿ.ರೇವಣ್ಣ, ಈ ನಿವೇಶನಗಳಿಗೆ ಹಕ್ಕು ಪತ್ರಕೊಡಿಸುವುದಕ್ಕೆ ಅನೇಕ ತಾಂತ್ರಿಕ ತರಕಾರು ಇದ್ದರೂಅವುಗಳೆಲ್ಲವನ್ನೂ ತಾವು ಜಿಲ್ಲಾ ಮಟ್ಟದಅಧಿಕಾರಿಗಳಲ್ಲಿ ಚರ್ಚಿಸಿ ರಾಜ್ಯ ಸರ್ಕಾರದಿಂದಪರಿಹರಿಸಿಕೊಂಡು ಹಕ್ಕು ಪತ್ರ ನೀಡಲಾಗುತ್ತಿದೆ.
ಇದೇ ರೀತಿ ತಾಲೂಕಿನ ಹಲವು ಗ್ರಾಮಗಳಲ್ಲಿನಸಮಸ್ಯೆಯನ್ನು ಸರಿಪಡಿಸಿ ಸುಮಾರು 500ಕ್ಕೂಹೆಚ್ಚು ಮಂದಿಗೆ ಹಕ್ಕು ಪತ್ರ ನೀಡಿದ್ದೇವೆ. ಈ ಹಕ್ಕುಪತ್ರ ನೀಡುವ ಸಲುವಾಗಿ ತಮಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ, ಸಂಸದ ಪ್ರಜ್ವಲ್‌ರೇವಣ್ಣ ಅವರ ಅತೀ ಹೆಚ್ಚಿನ ಒತ್ತಡವಿತ್ತು.
ಅದನ್ನುಪರಿಹರಿಸಲು 2 ವರ್ಷ ಬೇಕಾಯಿತು ಎಂದರು.ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಮಾತನಾಡಿ,ಮಾಜಿ ಸಚಿವ ಹಾಗೂ ಕ್ಷೇತ್ರದ ಶಾಸಕ ರೇವಣ್ಣಅವರನ್ನು ಹಾಡಿ ಹೊಗಳಿದರು. ಕಾರ್ಯಕ್ರಮದಲ್ಲಿಕಡವಿನಕೋಟೆ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿಅಕ್ರಮವಾಗಿ ಮನೆ ನಿರ್ಮಿಸಿಕೊಂಡ 52 ಮಂದಿಗೆಹಕ್ಕು ಪತ್ರ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಕಡವಿನಕೋಟೆಗ್ರಾಮಸ್ಥರು ಸಂಸದ ಪ್ರಜ್ವಲ್ ರೇವಣ್ಣ, ಶಾಸಕರೇವಣ್ಣ ಅವರನ್ನು ಬೃಹತ್ ಗಾತ್ರದ ಹೂವಿನ ಹಾರಹಾಕಿ ಗೌರವಿಸಿದರು.ಕಾರ್ಯಕ್ರಮದಲ್ಲಿ ತಾಪಂ ಇಒ ಕೆ.ಯೋಗೇಶ್,ಗ್ರೇಡ್-2 ತಹಶೀಲ್ದಾರ್ ರವಿ, ಉಪ ತಹಶೀಲ್ದಾರ್‌ಶಿವಕುಮಾರಸ್ವಾಮಿ, ರಾಜಸ್ವ ನಿರೀಕ್ಷಕ ಕುಮಾರಸ್ವಾಮಿ, ಗ್ರಾಮ ಲೆಕ್ಕಿಗರಾದ ರಶ್ಮಿ, ಸಿಬ್ಬಂದಿಗಳಾದಹರೀಶ್, ಸತೀಶ್, ಕಂದಾಯ ಇಲಾಖೆ ಸಿಬ್ಬಂದಿ,ಗ್ರಾಮದ ನೂರಾರು ಮಂದಿ ಇದ್ದರು.