ಹೊಳಲ್ಕೆರೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ತಾಲೂಕಿನ ಹಿರೇಕಂದವಾಡಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ಸಾಮಾಜಿಕ ಸೇವೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಧರ್ಮಸ್ಥಳ ಸಂಸ್ಥೆ ಕಾರ್ಯದ ಬಗ್ಗೆ ನಾಡಿನೆಲ್ಲೆಡೆ ಮೆಚ್ಚುಗೆ ವÏಕ್ತವಾಗುತ್ತಿದೆ.
ಧರ್ಮಸ್ಥಳ ಸಂಸ್ಥೆ ಸಂಸ್ಥೆ ಕೆರೆ ಹೂಳೆತ್ತುವ ಕಾರ್ಯ ಮಾಡಿದರೆ, ಸರಕಾರದಿಂದ ಕೆರೆಯಲ್ಲಿ ನೀರು ತುಂಬಿಸುವ ಕಾರ್ಯವನ್ನು ಶಾಸಕ ನಾಗಿ ತಾವು ಮಾಡುವುದಾಗಿ ಭರವಸೆ ನೀಡಿದರು. ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಂ. ದಿನೇಶ್ ಮಾತನಾಡಿ, ರಾಜÏದಲ್ಲಿ ಒಟ್ಟು 300 ಕೆರೆಗಳ ಅಭಿವೃದ್ಧಿಗೆ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿಯಲ್ಲಿ ಮಂಜೂರಾತಿ ದೊರೆತಿದೆ. ಕೆರೆ ಹೂಳು ತೆಗೆಯಲು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು 25.65 ಕೋಟಿ ರೂ.ಮಂಜೂರು ಮಾಡಿದ್ದಾರೆ.
ಇದನ್ನೂ ಓದಿ:ಕ್ಷೇತ್ರ ಹೊಂದಾಣಿಕೆಯೇ ಸವಾಲು
ಕರ್ನಾಟಕ ಸರಕಾರದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ “ಕೆರೆ ಪುನಶ್ಚೇತನಕ್ಕೆ 11.23 ಕೋಟಿ ರೂ. ಅನುದಾನ ದೊರೆಯಲಿದೆ. ಈ ಎರಡು ಕಾರ್ಯಕ್ರಮಗಳ ಅಡಿಯಲ್ಲಿ ಒಟ್ಟು 393 ಕೆರೆ ಪುನಶ್ಚೇತನಕ್ಕೆ 36 ಕೋಟಿ ರೂ. ಮಂಜೂರಾತಿ ಆಗಿದ್ದು, ಈಗಾಗಲೇ 276ಕೆರೆ ಪುನಶ್ಚೇತನ ಮಾಡಲಾಗಿದೆ. ಹಿರೇಕಂದವಾಡಿ ಕೆರೆ ಹೂಳೆತ್ತಿಸಲು ಸಂಸ್ಥೆಯಿಂದ 15.10 ಲಕ್ಷ ರೂ. ನೀಡಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಪ್ರಭಾಕರ, “ನಮ್ಮೂರು ನಮ್ಮ ಕೆರೆ’ ಯೋಜನೆ ಇಂಜಿನಿಯರ್ ಮಂಜುನಾಥ್, ತಾಪಂ ಸದಸÏರಾದ ಬಿ. ದೇವರಾಜ್, ಗ್ರಾಪಂ ಸದಸÏರಾದ ಡಿ.ಟಿ. ರಮೇಶಪ್ಪ, ಲೋಕೇಶ್ವರಪ್ಪ, ಎಂ.ಸಿ. ದೇವರಾಜ್, ಸುಧಾ ಬಾಬು, ಶಿಲ್ಪಾ ಶಿವಕುಮಾರ್, ಗೀತಮ್ಮ ಮಹಾದೇವಪ್ಪ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಪಿ. ಈಶ್ವರಪ್ಪ, ಒಕ್ಕೂಟದ ಅಧ್ಯಕ್ಷ ಬಿ.ಆರ್.ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.