Advertisement

ನಗರೇಶ್ವರ ಸ್ವಾಮಿ ಪ್ರಾಕಾರೋತ್ಸವ ಸೇವೆ

01:37 PM Apr 16, 2021 | Team Udayavani |

ದೇವನಹಳ್ಳಿ: ಅಯೋಧ್ಯ ನಗರದ ಶಿವಚಾರ ವೈಶ್ಯ ನಗರ್ತಸಮಿತಿ, ನಗರ್ತ ಯುವಕ ಸಂಘ ಮತ್ತು ನಗರ್ತ ಮಹಿಳಾಸಂಘದ ವತಿಯಿಂದ ಭಕ್ತ ಸಿರಿಯಾಳ ಜಯಂತ್ಯುತ್ಸವದಅಂಗವಾಗಿ ನಗರೇಶ್ವರ ಸ್ವಾಮಿ ಹಾಗೂ ಭಕ್ತ ಸಿರಿಯಾಳದೇವರುಗಳ ಪ್ರಾಕಾರೋತ್ಸವ ಸೇವೆ ಹಾಗೂ ವಿಶೇಷ ಪೂಜಾಕಾರ್ಯಕ್ರಮ ನೆರವೇರಿಸಲಾಯಿತು.

Advertisement

ನಗರದ ನಗರ್ತರ ಬೀದಿಯಲ್ಲಿರುವ ನಗರೇಶ್ವರಸ್ವಾಮಿದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಭಿಷೇಕ, ಹೂವಿನಅಲಂಕಾರವನ್ನು ಮಾಡಲಾಗಿತ್ತು.ಅಯೋಧ್ಯ ನಗರದ ಶಿವಾಚಾರ ವೈಶ್ಯ ನಗರ್ತ ಸಂಘದಅಧ್ಯಕ್ಷ ಬಿ.ವಿ.ನಾಗರಾಜ್‌ ಮಾತನಾಡಿ, ಭಕ್ತಸಿರಿಯಾಳದ ಬಗ್ಗೆಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಭಕ್ತ ಸಿರಿಯಾಳ ಸಮಾಜದಉದ್ಧಾರಕ್ಕೆ ಮತ್ತು ಲೋಕ ಕಲ್ಯಾಣಕ್ಕೆ ಮತ್ತು ಜನಾಂಗದಕ್ಷೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ.

ಮಹಾನ್‌ ದೆ„ವಭಕ್ತರಾಗಿದ್ದರು. ಸಿರಿಯಾಳ ಶೆಟ್ಟರು ನಗರ್ತ ಜನಾಂಗದಉದಯ ಪುರುಷರಾಗಿದ್ದಾರೆ ಎಂದರು.ನಗರ್ತ ಸಂಘದ ಗೌರವ ಕಾರ್ಯದರ್ಶಿ ನಟರಾಜ್‌ಮಾತನಾಡಿ, ಪ್ರತಿ ವರ್ಷವೂ ಸಹ ಭಕ್ತ ಸಿರಿಯಾಳಜಯಂತಿಯನ್ನು ಆಚರಿಸಿಕೊಂಡು ಬರಲಾಗಿದೆ. ಕೊರೊನಾಎರಡನೇ ಅಲೆ ಇರುವುದರಿಂದ ದೇವಸ್ಥಾನದಆವರಣದಲ್ಲಿಯೇ ಮೆರವಣಿಗೆ ಇಲ್ಲದೆ, ಪ್ರಾಕಾರೋತ್ಸವಸೇವೆಯಲ್ಲಿಯೇ ನಗರೇಶ್ವರ ಸ್ವಾಮಿ ಮತ್ತು ಭಕ್ತ ಸಿರಿಯಾಳಭಾವಚಿತ್ರದೊಂದಿಗೆ ಸರಳವಾಗಿ ಆಚರಿಸಲಾಗಿದೆ ಎಂದುತಿಳಿಸಿದರು.

ಅಯೋಧ್ಯ ನಗರ ಶಿವಾಚಾರ ವೈಶ್ಯ ನಗರ್ತ ಸಂಘದಖಜಾಂಚಿ ಎನ್‌.ಮಂಜುನಾಥ್‌, ಉಪಾಧ್ಯಕ್ಷ ವೈ.ಪಿ.ಪ್ರವೀಣ್‌ಕುಮಾರ್‌, ಸಹಕಾರ್ಯದರ್ಶಿ ಎನ್‌.ಮೋಹನ್‌,ನಿರ್ದೇಶಕರಾದ ಎಸ್‌.ಮಲ್ಲಿಕಾರ್ಜುನ್‌, ಬಸವರಾಜು, ಎಸ್‌.ಬಿ.ಕುಮಾರ್‌, ಇ.ಸಿ.ಚೇತನ್‌, ಎನ್‌.ನಟೇಶ್‌, ಎಸ್‌.ಮಹೇಶ್‌, ಮಾಲಾ, ಲೀಲಾ ನಾಗೇಂದ್ರ ಪ್ರಸಾದ್‌, ನಗರ್ತಮಹಿಳಾ ಸಂಘದ ಅಧ್ಯಕ್ಷೆ ಅನ್ನಪೂರ್ಣಮ್ಮ, ಪ್ರಧಾನಕಾರ್ಯದರ್ಶಿ ಮೀನಾಕುಮಾರಿ, ನಗರ್ತ ಯುವಕ ಸಂಘದಖಜಾಂಚಿ ಮಂಜುನಾಥ್‌, ವ್ಯವಸ್ಥಾಪಕ ಪ್ರಭುದೇವ್‌ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next