Advertisement

ಮಕ್ಕಳ ಬಾಲ್ಯ-ಹಕ್ಕು ರಕ್ಷಣೆ ಎಲ್ಲರ ಕರ್ತವ್ಯ: ಪಾಟೀಲ

04:42 PM Nov 21, 2020 | Suhan S |

ಧಾರವಾಡ: ಮಕ್ಕಳ ಬಾಲ್ಯ, ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸುವುದುಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಹೇಳಿದರು.

Advertisement

ಉಪನಗರ ಹಾಗೂ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಜಿಲ್ಲಾಡಳಿತ, ಮಕ್ಕಳ ಸಹಾಯವಾಣಿ 1098 ಸಿಐಎಫ್‌ ಹಾಗೂ ಇತರೆ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ “ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ’ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್‌ ನಿಯಂತ್ರಣಕ್ಕಾಗಿ ಪ್ರಸಕ್ತ ವರ್ಷದಲ್ಲಿ ಮಕ್ಕಳುಶಾಲಾ ಪಾಠಗಳಿಂದ ವಂಚಿತರಾಗಿದ್ದಾರೆ. ಅನೇಕರು ಆನ್‌ಲೈನ್‌ ಮೂಲಕ ಪಾಠಗಳನ್ನು ಆಲಿಸುತ್ತಿದ್ದರೆ, ಈ ಅವಕಾಶವಿಲ್ಲದ ಬಹಳಷ್ಟು ಮಕ್ಕಳಿದ್ದಾರೆ. ಯಾವುದೇ ಮಕ್ಕಳೂ ಬಾಲ್ಯ, ಶಿಕ್ಷಣದಿಂದ ವಂಚಿತರಾಗಬಾರದು. ಕೋವಿಡ್‌ ಕಾರಣದಿಂದ ಆರ್ಥಿಕ ಬೆಳವಣಿಗೆಗೆ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಅನೇಕ ಮಕ್ಕಳು ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅಂತಹಮಕ್ಕಳನ್ನು ರಕ್ಷಿಸಲು ಕ್ರಮ ವಹಿಸಲಾಗಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡುಬಂದರೆ ಕೂಡಲೇ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.

ಬಿಡಿಎಸ್‌ಎಸ್‌ ಸಂಸ್ಥೆ ನಿರ್ದೇಶಕ ಫಾ| ಯುಜಿಬಿಯೋ ಫರ್ನಾಂಡೀಸ್‌ ಸಾನ್ನಿಧ್ಯ ವಹಿಸಿದ್ದರು. ವಾಕರಸಾಸಂ ವಿಭಾಗೀಯ ನಿಯಂತ್ರಕ ಬಸವಲಿಂಗಪ್ಪ ಬೀಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ, ಡಿಡಿಪಿಐ ಮೋಹನ ಹಂಚಾಟೆ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಜಿಲ್ಲಾ ಮಕ್ಕಳ ರಕ್ಷಣಾಧಿ ಕಾರಿ ಡಿ.ಎಚ್‌. ಲಲಿತಾ, ಡಾ| ಉಮೇಶ ಹಳ್ಳಿಕೇರಿ ಇದ್ದರು. ಶಿವಲೀಲಾ ಗಾಯಕವಾಡ ಸ್ವಾಗತಿಸಿದರು.

ಪೀಟರ್‌ ಆಶೀರ್ವಾದ ಪ್ರಾಸ್ತಾವಿಕ ಮಾತನಾಡಿದರು. ರವಿ ಭಂಡಾರಿ, ಚಂದ್ರಶೇಖರ ರಾಹುತರ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next