Advertisement

Mysore: ಪ್ರಾಧ್ಯಾಪಕರ ಪ್ರತಿಷ್ಠೆಗೆ ಬಡವಾದ ಸ್ನಾತಕೋತ್ತರ ವಿದ್ಯಾರ್ಥಿಗಳು

03:15 PM Sep 05, 2023 | Team Udayavani |

ಮೈಸೂರು: ಪ್ರಾಧ್ಯಾಪಕರ ನಡುವಿನ ಪ್ರತಿಷ್ಠೆಯ ಜಗಳಕ್ಕೆ ವಿದ್ಯಾರ್ಥಿಗಳು ಬಡವಾದ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.

Advertisement

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರ ಆಂತರಿಕ ಕಚ್ಚಾಟದಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ನೆಲದಲ್ಲಿ ಕುಳಿತು ಪಾಠ ಕೇಳಬೇಕಾಗಿದೆ.

ಪತ್ರಿಕೋದ್ಯಮ ವಿಭಾಗವನ್ನು ರಾತ್ರೋರಾತ್ರಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ವಿಭಾಗ ಮುಖ್ಯಸ್ಥೆ ‘ಸ್ಥಳಾಂತರ ಮಾಡಲಾಗಿದೆ’ ಎಂದು ಬಾಗಿಲಿಗೆ ಚೀಟಿ ಅಂಟಿಸಿ ಹೋಗಿದ್ದರು. ಆದರೆ ನಮಗೆ ವಿಭಾಗ ಬದಲಾಗಿರುವ ಬಗ್ಗೆ ಮೈಸೂರು ವಿವಿಯಿಂದ ಅಧಿಕೃತ ಆದೇಶ ಬಂದಿಲ್ಲ. ಇದರಿಂದ ನಾವು ಇಲ್ಲಿ ಉಳಿದುಕೊಂಡಿದ್ದೇವೆ ಎಂದು ವಿಭಾಗದ ಪ್ರಾಧ್ಯಾಪಕರು ಹೇಳುತ್ತಿದ್ದಾರೆ.  ಪ್ರಾಧ್ಯಾಪಕರಾದ ಸಿ.ಕೆ ಪುಟ್ಟಸ್ವಾಮಿ ಹಾಗೂ‌ ಎನ್.ಮಮತ ಅವರು ಸದ್ಯ ಹಳೆ ಕಟ್ಟಡದಲ್ಲಿ ಉಳಿದುಕೊಂಡಿದ್ದಾರೆ.

ಇದರಿಂದ ಹಳೆ ಕಟ್ಟಡದ ತರಗತಿಯ ಕೊಠಡಿಗಳಿಗೆ ಬೀಗ ಹಾಕಿರುವುದರಿಂದ ಪ್ರಾಧ್ಯಾಪಕರು ಕಾರಿಡಾರ್ ನಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಿತ್ತಾರೆ. ಇದಷ್ಟೆ ಅಲ್ಲದೆ ವಿಭಾಗವನ್ನು ವಿವಿಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳಾಂತರ ಮಾಡಬೇಕಾಗಿತ್ತು. 50 ವರ್ಷಗಳ ಹಳೆಯ ದಾಖಲಾತಿಗಳು ಇಲ್ಲಿ ಇದೆ. ದಾಖಲಾತಿಗಳ ಪಂಚನಾಮೆ ಮಾಡಿದ ಬಳಿಕ ಸ್ಥಳಾಂತರ ಮಾಡಬೇಕಿತ್ತು ಎಂದು ಪ್ರಾಧ್ಯಾಪಕರು ಹೇಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next