Advertisement
ಅಷ್ಟೇ ಅಲ್ಲ, ಹೊಸ ವಿಭಾಗದಡಿ ಆಯ್ಕೆಯಾಗುವ ಬೋಧಕ ಸಿಬ್ಬಂದಿಗೆ ಔಪಚಾರಿಕ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಸಂಶೋಧನಾ ಲೇಖನಗಳು ಪ್ರಕಟಗೊಂಡಿರಬೇಕು ಎಂಬ ಅಗತ್ಯತೆಗಳು ಕಡ್ಡಾಯವಾಗಿರುವುದಿಲ್ಲ.
Related Articles
ಕೋರ್ಸ್‌ಗಳು ಮತ್ತು ಪಠ್ಯಕ್ರಮಗಳ ರಚನೆ, ವಿನ್ಯಾಸದಲ್ಲಿ ಭಾಗಿಯಾಗುವುದು, ಸಾಂಸ್ಥಿಕ ನೀತಿಗಳಿಗೆ ಅನುಗುಣವಾಗಿ ಹೊಸ ಕೋರ್ಸ್‌ಗಳನ್ನು ಪರಿಚಯಿಸುವುದು ಮತ್ತು ಉಪನ್ಯಾಸ ನೀಡುವುದು, ನಾವೀನ್ಯತೆ ಮತ್ತು ಉದ್ಯಮಶೀಲತಾ ಯೋಜನೆಗಳನ್ನು ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದು, ಇಂಥ ಚಟುವಟಿಕೆಗಳಿಗೆ ಅಗತ್ಯ ಮಾರ್ಗದರ್ಶನಗಳನ್ನು ನೀಡುವುದು, ಕೈಗಾರಿಕೆ-ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಹೆಚ್ಚಿಸುವಂತೆ ಮಾಡುವುದು, ಕಾರ್ಯಾಗಾರ ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸುವುದು, ವಿಶೇಷ ಉಪನ್ಯಾಸ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಜಂಟಿ ಸಂಶೋಧನಾ ಪ್ರಾಜೆಕ್ಟ್ಗಳನ್ನು ನಡೆಸುವುದು ಮುಂತಾದ ಚಟುವಟಿಕೆಗಳನ್ನು ಈ ಪ್ರೊಫೆಸರ್‌ಗಳು ಕೈಗೊಳ್ಳಬೇಕು.
Advertisement
ಆಯ್ಕೆ ಹೇಗೆ?ಆಯಾ ವಿವಿಗಳ ಕುಲಪತಿಗಳು ಮತ್ತು ನಿರ್ದೇಶಕರು “ಪ್ರೊಫೆಸರ್ ಆಫ್ ಪ್ರಾಕ್ಟೀಸ್’ ಹುದ್ದೆಗೆ ಸಮಾಜದ ಪರಿಣತ ವ್ಯಕ್ತಿಗಳಿಂದ ನಾಮನಿರ್ದೇಶನವನ್ನು ಆಹ್ವಾನಿಸಬಹುದು ಅಥವಾ ಸೇವೆ ಮಾಡಲು ಬಯಸುವ ಪರಿಣತರು ತಮ್ಮ ನಾಮನಿರ್ದೇಶನವನ್ನು ಕುಲಪತಿಗಳಿಗೆ ಕಳುಹಿಸಬಹುದು. ಅದರಲ್ಲಿ ತಮ್ಮ ಕುರಿತಾದ ವಿಸ್ತೃತ ಬಯೋಡೇಟಾ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತಾವು ನೀಡಬಹುದಾದ ಸಂಭಾವ್ಯ ಕೊಡುಗೆಗಳ ಬಗ್ಗೆ ಸಂಕ್ಷಿಪ್ತ ವಿವರವನ್ನು ನೀಡಬೇಕು. ಶಿಕ್ಷಣ ಸಂಸ್ಥೆಯ ಇಬ್ಬರು ಹಿರಿಯ ಪ್ರೊಫೆಸರ್‌ಗಳು ಮತ್ತು ಹೊರಗಿನ ಒಬ್ಬ ಗಣ್ಯ ವ್ಯಕ್ತಿಯನ್ನು ಒಳಗೊಂಡ ಆಯ್ಕೆ ಸಮಿತಿಯು ಈ ನಾಮನಿರ್ದೇಶನಗಳನ್ನು ಪರಿಶೀಲಿಸುತ್ತದೆ. ಈ ಸಮಿತಿಯ ಶಿಫಾರಸಿನ ಆಧಾರದಲ್ಲಿ ಸಂಸ್ಥೆಯ ಶೈಕ್ಷಣಿಕ ಮಂಡಳಿ ಮತ್ತು ಕಾರ್ಯಕಾರಿ ಮಂಡಳಿಯು ಯಾರನ್ನು ನೇಮಕ ಮಾಡಬೇಕು ಎಂಬ ನಿರ್ಧಾರವನ್ನು ಕೈಗೊಳ್ಳುತ್ತದೆ. ಷರತ್ತುಗಳೇನು?
– ಈ ವಿಭಾಗದಡಿ ಆಯ್ಕೆಯಾಗುವವರ ಪ್ರಮಾಣವು ವಿವಿಗಳಿಗೆ ಮಂಜೂರಾದ ಹುದ್ದೆಗಳ ಶೇ.10 ಅನ್ನು ಮೀರಬಾರದು.
– ವಿವಿಗಳಿಗೆ ಮಂಜೂರಾದ ಹುದ್ದೆಗಳ ಸಂಖ್ಯೆ ಮತ್ತು ಸಾಮಾನ್ಯ ಬೋಧಕ ಸಿಬ್ಬಂದಿಯ ನೇಮಕದ ಮೇಲೆ ಇದು ಯಾವ ಪರಿಣಾಮವನ್ನೂ ಬೀರುವಂತಿಲ್ಲ.
– ಇದರಲ್ಲಿ ಆಯ್ಕೆಯಾದ ಪ್ರೊಫೆಸರ್‌ಗಳು ನಿಗದಿತ ಅವಧಿಗಷ್ಟೇ ಕರ್ತವ್ಯದಲ್ಲಿರುತ್ತಾರೆ.
– ಶಿಕ್ಷಕ ವೃತ್ತಿಯಲ್ಲಿರುವವರು ಅಥವಾ ಶಿಕ್ಷಕರಾಗಿ ನಿವೃತ್ತಿ ಹೊಂದಿದವರನ್ನು ಈ ವಿಭಾಗದಡಿ ಆಯ್ಕೆ ಮಾಡುವಂತಿಲ್ಲ
– ಶಿಕ್ಷಣ ಸಂಸ್ಥೆ ಮತ್ತು ಪರಿಣತ ವ್ಯಕ್ತಿಯ ನಡುವೆ ನಡೆದ ಒಪ್ಪಂದದಂತೆ ಸಂಭಾವನೆ ನಿಗದಿಯಾಗಬೇಕು
– ಆರಂಭಿಕ ಸೇವಾವಧಿಯು 1 ವರ್ಷವಾಗಿರುತ್ತದೆ. ಈ ಸೇವಾವಧಿಯನ್ನು ವಿಸ್ತರಿಸಬೇಕೇ, ಬೇಡವೇ ಎಂಬುದನ್ನು ಆಯಾ ಉನ್ನತ ಶಿಕ್ಷಣ ಸಂಸ್ಥೆಗಳು ನಿರ್ಧರಿಸುತ್ತವೆ
– ಪ್ರೊಫೆಸರ್ ಆಫ್ ಪ್ರಾಕ್ಟೀಸ್‌ನ ಗರಿಷ್ಠ ಸೇವಾವಧಿ 3 ವರ್ಷವಾಗಿರುತ್ತದೆ. ವಿಶೇಷ ಪ್ರಕರಣಗಳಲ್ಲಿ ಮಾತ್ರ ಇದನ್ನು ಮತ್ತೂಂದು ವರ್ಷ ವಿಸ್ತರಿಸಬಹುದು. ಆದರೆ, ಒಟ್ಟಾರೆ ಸೇವಾವಧಿ 4 ವರ್ಷ ಮೀರುವಂತಿಲ್ಲ.