Advertisement

ಸಂಶೋಧನೆಗೆ 100 ದಿನ ನೀರಲ್ಲೇ ವಾಸ್ತವ್ಯ !

12:25 AM Apr 05, 2023 | Team Udayavani |

ವಿಜ್ಞಾನ -ತಂತ್ರಜ್ಞಾನದ ಅರಿವಿಗಾಗಿ ಸಂಶೋಧಕರು ಅನೇಕ ಸಾಹಸಗಳಿಗೆ ಮುಂದಾಗುವುದನ್ನು ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ, ತನ್ನ ದೇಹ-ಆರೋಗ್ಯವನ್ನೂ ಲೆಕ್ಕಿಸದೇ, ಸಂಶೋಧನೆಗಾಗಿ 100 ದಿನಗಳ ವರೆಗೆ ನೀರಿನಲ್ಲೇ ವಾಸಿಸುವ ಸಾಹಸಕ್ಕೆ ಕೈ ಹಾಕಿದ್ದು,ಈ ವಿಚಾರ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಅಮೆರಿಕ ನೌಕಾಪಡೆಯ ಮಾಜಿ ನಾವಿಕ,ಸಂಶೋಧನಾ ಪ್ರಾಧ್ಯಪಕರಾದ 55 ವರ್ಷದ ಜೋಸೆಫ್ ಡಿಟುರಿ, ಭೂಮಿಯ ಮೇಲ್ಮೈ ನಿಂದ 30 ಅಡಿ ಆಳದ ನೀರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಮಾನವನ ದೇಹವು ದೀರ್ಘಾವಧಿಯ ತೀವ್ರ ಒತ್ತಡಕ್ಕೆ ಸಿಲುಕಿದರೆ ಆಗಬಹುದಾದ ಪರಿಣಾಮ.ಹೆಚ್ಚಿನ ಒತ್ತಡದಲ್ಲಿ ಜೀವಕೋಶಗಳು ದ್ವಿಗುಣಗೊಳ್ಳುವ ಮತ್ತು ಅವುಗಳಿಂದ ಅನೇಕ ಖಾಯಿಲೆಯನ್ನೂ ಗುಣಪಡಿಸಬಹುದಾದ ಸಾಧ್ಯತೆಗಳ ಅಧ್ಯಯನಕ್ಕೆ ಈ ಸಂಶೋಧನೆ ಸಹಕಾರಿಯಾಗಲಿದೆ ಎಂದಿದ್ದಾರೆ. ಸಾಹಸ ಕೈಗೂಡಿದರೆ ಡಿಟುರಿ ಹೊಸ ದಾಖಲೆಯನ್ನೇ ಸೃಷ್ಟಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next