ಕಥುವಾ, ಜಮ್ಮು ಕಾಶ್ಮೀರ : ಓರ್ವ ಪ್ರೊಫೆಸರ್ ಮತ್ತು ಅವರ ಪುತ್ರ ವಿದ್ಯುದಾಘಾತಕ್ಕೆ ಗುರಿಯಾಗಿ ಮೃತಪಟ್ಟಿರುವ ದಾರುಣ ಘಟನೆ ಇಲ್ಲಿ ನಡೆದಿದೆ. ಪೊಫೆಸರ್ ಪುತ್ರಿಗೆ ಗಂಭೀರವಾಗಿ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಕ್ಲಸ್ಟರ್ ಯುನಿವರ್ಸಿಟಿಯ ಸಮಾಜ ವಿಜ್ಞಾನ ವಿಭಾಗದ ಡೀನ್ ಆಗಿರುವ ಎನ್ ಕೆ ಗುಪ್ತಾ (52) ಅವರು ಇಲ್ಲಿನ ಶಿವನಗರದಲ್ಲಿರುವ ತಮ್ಮ ಮನೆಯ ಸೂರಿನಿಂದ ಸೋರುತ್ತಿದ್ದ ನೀರನ್ನು ಹೊರ ಹಾಕುವ ಯತ್ನದಲ್ಲಿದ್ದಾಗ ಅವರು ಸಜೀವ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದು ಶಾಕ್ ತಗುಲಿ ಬಿದ್ದರು. ಅವರ ನೆರವಿಗೆ ಧಾವಿಸಿ ಬಂದ ಪುತ್ರ ಜತಿನ್ (30) ಮತ್ತು ಪುತ್ರಿ ಪ್ರೀತಿ (22) ಕೂಡ ವಿದ್ಯುತ್ ಶಾಕ್‌ಗೆ ಗುರಿಯಾದರು.
ಇದನ್ನು ಕಂಡ ಗುಪ್ತಾ ಅವರ ಪತ್ನಿ ಒಡನೆಯೇ ಮನೆಯ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದರು. ವಿದ್ಯುದಾಘಾತಕ್ಕೆ ಗುರಿಯಾದ ಮೂವರನ್ನೂ ನೆರೆಕರೆಯವರ ನೆರವಿನಿಂದ ಆಸ್ಪತ್ರೆಗೆ ಒಡನೆಯೇ ಒಯ್ಯಲಾಯಿತು. ಆದರೆ ಪ್ರೊ. ಗುಪ್ತಾ ಮತ್ತು ಪುತ್ರ ನಿತಿನ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ಗಂಭೀರ ಸ್ಥಿತಿಯಲ್ಲಿರುವ ಪುತ್ರಿ ಪ್ರೀತಿಯನ್ನು ಜಮ್ಮುವಿನಲ್ಲಿನ ಸರಕಾರಿ ವೈದ್ಯಕೀಯ ಕಾಎಈಜು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಒಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಪೂರ್ತಿ ಸುರಿದ ಜಡಿ ಮಳೆಯಿಂದಾಗಿ ನೀರಿನ ಸೂರಿನಲ್ಲಿ ನೀರು ಬ್ಲಾಕ್ ಆಗಿತ್ತು. ಅಲ್ಲೇ ಇದ್ದ ಏರ್ ಕಂಡೀಶನರ್ ಕಂಪ್ರಸರ್ ನೀರಿನಲ್ಲಿ ಮುಳುಗಿದ ಕಾರಣ ಮನೆಯಲ್ಲಿ ಶಾರ್ಟ್ ಸರ್‌ಕ್ಯೂಟ್ ಆಗಿತ್ತು.