Advertisement

ವೃತಿಪರತೆಯ ಬೇಬಿಸಿಟ್ಟಿಂಗ್‌ ಇಂಟರ್ನ್ ಶಿಪ್

09:35 AM Sep 11, 2019 | mahesh |

ಅಕ್ಟೋಬರ್‌ ರಜೆಯಲ್ಲಿ ಯುರೋಪ್‌ ಪ್ರವಾಸ ಹೋಗೋಣ, ರೆಡಿಯಾಗು ಎಂದು ಹೇಳಿದಾಗ ಇಂಜಿನಿಯರಿಂಗ್‌ನ ಅಂತಿಮ ವರ್ಷದಲ್ಲಿರುವ ಮಗ ಏನು ಹೇಳಬೇಕು? “ನಾನ್‌ ಬರೋದಿಲ್ಲ. ನನಗೆ ಇಂಟರ್ನ್ ಶಿಪ್ ಮಾಡೋದಿದೆ. ನೀವು ಹೋಗಿಬನ್ನಿ ‘ ಅಂದ. ಇಂಜಿನಿಯರಿಂಗ್‌ ಓದುವ ವಿದ್ಯಾರ್ಥಿಗಳಿಗೆ ಅದು ಅತೀ ಮುಖ್ಯ ಎಂದು ಗೊತ್ತಿತ್ತು. ಆದರೂ “ಮುಂದೆ ಮಾಡಬಹುದಲ್ವಾ’ ಎಂದದ್ದ‌ಕ್ಕೆ “ಈಗ ಒಳ್ಳೆ ಕಂಪನಿಯಲ್ಲಿ ಅವಕಾಶ ಸಿಕ್ಕಿದೆ, ಮುಂದೆ ಹೇಳಕ್ಕಾಗಲ್ಲ, ನಾನು ಇಂಟರ್ನ್ ಶಿಪ್ ಗೆ ಹೋಗಲೇಬೇಕು ನಾನ್‌ ಬರಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದ.

Advertisement

ಏನಿದು ಇಂಟರ್ನ್ ಶಿಪ್ ?
ಇಂದು ತಾಂತ್ರಿಕ ಶಿಕ್ಷಣದ ಅವಿಭಾಜ್ಯ ಅಂಗವೇ ಆಗಿರುವ ಇಂಟರ್ನ್ ಶಿಪ್ , ವಿದ್ಯಾರ್ಥಿ ತರಗತಿಯಲ್ಲಿ ಓದಿದ್ದನ್ನು ಪ್ರಾಯೋಗಿಕವಾಗಿ ಬಳಸುವುದು ಹೇಗೆ ಎಂಬುದನ್ನು ಸಮಗ್ರವಾಗಿ ಕಲಿಸಿಕೊಡುತ್ತದೆ. ದಿನವೂ ಬದಲಾಗುತ್ತಿರುವ ತಂತ್ರಜ್ಞಾನದ ಹೊಸ ಕಾಣ್ಕೆಗಳು ಸಿಲಬಸ್‌ನಲ್ಲಿ ಇರುವುದಿಲ್ಲ. ಆದರೆ, ತರಗತಿಯಲ್ಲಿ ಕಲಿಸಲಾಗುವ ಮೂಲಭೂತ ಅಂಶಗಳಿಗೂ ಹೊಸ ಆವಿಷ್ಕಾರ, ಅಭಿವೃದ್ಧಿಗಳಿಗೂ ಸಂಬಂಧವಿರುತ್ತದೆ. ಉದಾಹರಣೆಗೆ, ಮೆಶೀನ್‌ ಲರ್ನಿಂಗ್‌ನ ಸಿಲಬಸ್‌ನಲ್ಲಿ, ನಿಗದಿ ಪಡಿಸಿದ ಕೆಲವೇ ಗಂಟೆಗಳ ಲ್ಯಾಬ್‌ ತರಬೇತಿ ಇರುತ್ತದೆ. ಆದರೆ, ತಂತ್ರಜ್ಞಾನ ಸಂಸ್ಥೆಗಳಲ್ಲಿ ಮೆಶೀನ್‌ ಲರ್ನಿಂಗ್‌ನ ಉತ್ಪನ್ನಗಳನ್ನು ಕೈಯ್ನಾರೆ ಸೃಷ್ಟಿಸಬಹುದು. ಅಂತಹ “ಹ್ಯಾಂಡ್ಸ್‌ ಆನ್‌’ ಅನುಭವ ನೀಡಿ, ವಿದ್ಯಾರ್ಥಿಗಳ ಒಣಕಲಿಕೆಗೆ ಹಸಿ ಹೂರಣ ತುಂಬಿ ಅವರನ್ನು ಉದ್ಯೋಗರಂಗದಲ್ಲಿ ದುಡಿಯಲು ರೆಡಿ ಮಾಡುವುದಲ್ಲದೆ, ಪುಸ್ತಕಗಳಲ್ಲಿರುವುದನ್ನು ಕೆಲಸದ ರೂಪಕ್ಕಿಳಿಸಿ, ತಾವು ಕಲಿಯುವುದನ್ನು ಅಪ್ಲೆ„ ಮಾಡುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ನೀಡುತ್ತದೆ. ಜೊತೆಗೆ ಕಲಿಕೆಯ ಆತ್ಮ ವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಭಾರತದಲ್ಲಿ ತಾಂತ್ರಿಕ ಶಿಕ್ಷಣ ನಿರ್ದೇಶಿಸುವ ಅಐಇಖಉ ಇಂಟರ್ನ್ಶಿಪ್‌ ಅನ್ನು ಇಂಜಿನಿಯರಿಂಗ್‌ ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿದೆ. ಪ್ರತೀ ವರ್ಷ ಜುಲೈ 26 ಅನ್ನು ಇಂಟರ್ನ್ಶಿಪ್‌ ಡೇ ಎಂದು ಆಚರಿಸಲಾಗುತ್ತದೆ. NACE – National Association of Colleges and Employees ನ ಸಮೀಕ್ಷೆ ಪ್ರಕಾರ ಪದವಿ ಶಿಕ್ಷಣ ಪೂರೈಸುವ ಶೇ.56 ರಷ್ಟು ವಿದ್ಯಾರ್ಥಿಗಳು ಒಂದಲ್ಲಾ ಒಂದು ಇಂಟರ್ನ್ ಶಿಪ್

ಮಾಡುತ್ತಾರೆ. ಹಾಗೇ ವಿದ್ಯಾರ್ಥಿಗಳು ಕಾರ್ಖಾನೆಗಳಲ್ಲಿ, ಸಂಶೋಧನಾ ಕೇಂದ್ರ, ಕಂಪನಿಗಳಲ್ಲಿ ಮಾಡುವ ಇಂಟರ್ನ್ಶಿಪ್‌ಗ್ಳಲ್ಲಿ ಶೇ. 60ಕ್ಕೆ ಸ್ಟೈಪೆಂಡ್‌ ನೀಡಲಾಗುತ್ತದೆ. ಪುಕ್ಕಟೆಯಾಗಿ ಮತ್ತು ಹಣ ಪಡೆದುಕೊಂಡು ಇಂಟರ್ನ್ಶಿಪ್‌ ನೀಡುವ ಅನೇಕ ತಾಂತ್ರಿಕ ಸಂಸ್ಥೆಗಳು, ಕಾಲೇಜುಗಳು, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳು, ಸಂಶೋಧನಾ ಕೇಂದ್ರಗಳೂ ಇವೆ. ಹಲವು ಪ್ರತಿಷ್ಟಿತ ಇಂಜಿನಿಯರಿಂಗ್‌ ಕಾಲೇಜುಗಳು ಇಂಟರ್‌°ಶಿಪ್‌ಗಾಗಿ ತಮ್ಮಲ್ಲಿ ಬೋಧಿಸುವ ಕೋರ್ಸ್‌ಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಬಳಸುವ ಪ್ರಸಿದ್ಧ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಫೈನಲ್‌ ಇಯರ್‌ನಲ್ಲಿರುವ ವಿದ್ಯಾರ್ಥಿಗಳನ್ನು ನೇರ ಕಂಪನಿಗೇ ಕಳಿಸಿಕೊಡುತ್ತವೆ. ಕೆಲವು ಕಂಪನಿಗಳು ಕಾಲೇಜಿನಲ್ಲೇ ತಮ್ಮ ಇನ್‌ಕುಬೇಶನ್‌ ಸೆಂಟರ್‌ ತೆರೆದು, ಅಲ್ಲೇಇಂಟರ್ನ್ ಶಿಪ್ ನೀಡುವುದೂ ಇದೆ.

ಇಂಟರ್ನ್ ಶಿಪ್ ಯಾಕೆ?
ಓದು ಮುಗಿದ ತಕ್ಷಣ ಕೆಲಸ ಪಡೆದುಕೊಳ್ಳಲು ಓದಿನ ಜೊತೆ ವಿದ್ಯಾರ್ಥಿ ಕಲಿತಿರುವ ಇತರ ಕೌಶಲಗಳೇನು ಎಂಬುದೂ ಮುಖ್ಯವಾಗುತ್ತದೆ. ಲಿಂಕ್ಡ್ಇನ್‌ ಕಂಪನಿಯ ಸರ್ವೆಯ ಪ್ರಕಾರ ವಿದ್ಯಾರ್ಥಿಯ ಹಲವು ಕೌಶಲಗಳಲ್ಲಿ “ಸಾಫ್ಟ್ಸ್ಕಿಲ್‌’ ಕೌಶಲಕ್ಕೆ ಹೆಚ್ಚು ಬೇಡಿಕೆ ಇದ್ದು ಅದು ಶೇ.57 ರಷ್ಟು ಎಂಬುದು ಬಹಿರಂಗಗೊಂಡಿದೆ. ಅಲ್ಲದೆ ಸಂವಹನ ಕಲೆ, ನಾಯಕತ್ವದ ಗುಣ, ತಂಡದಲ್ಲೊಬ್ಬನಾಗಿ ದುಡಿಯುವ ತಾಳ್ಮೆ ಮತ್ತು ಸಮಸ್ಯೆ ಬಿಡಿಸುವ ತಾಕತ್ತುಗಳಿಗೆ ಹೆಚ್ಚಿನ ಆದ್ಯತೆ ಇದೆ. ಇವುಗಳನ್ನೆಲ್ಲಾ ಕಲಿಸುವ ಇಂಟರ್ನ್ ಶಿಪ್ ಉದ್ಯೋಗಾಕಾಂಕ್ಷಿಗಳ ಬೇಬಿ ಸಿಟ್ಟಿಂಗ್‌ ಎಂದೇ ಪ್ರಸಿದ್ಧವಾಗಿದೆ. ವಿದೇಶ ವಿದ್ಯಾಭ್ಯಾಸದ ಕನಸು ಕಾಣುವ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಬಹಳ ಮುಖ್ಯ. ಹಾಗಾಗಿ GRE, TOEFL, IELTS ಪರೀಕ್ಷೆ ಬರೆದು ದೇಶದ ಗಳಲ್ಲಿ ಸೀಟು ಗಿಟ್ಟಿಸುವವರು ಇಂಟರ್ನ್ಶಿಪ್‌ ಗೆ ಹೆಚ್ಚು ಬೆಲೆ ನೀಡುತ್ತಾರೆ. ಎರಡಕ್ಕಿಂತ ಹೆಚ್ಚು ಇಂಟರ್ನ್ಶಿಪ್‌ ಹೊಂದಿದವರಿಗೆ ಹಲವು ಅವಕಾಶಗಳ ಬಾಗಿಲು ತೆರೆಯುತ್ತವೆ.

Advertisement

ಯಾವ್ಯಾವ ವಿಷಯಗಳು?
ಎಲ್ಲ ಕಂಪನಿಗಳೂ ಇಂಟರ್ನ್ ಶಿಪ್ ನೀಡುವುದಿಲ್ಲ. ಕೆಲವು ಕಂಪನಿಗಳು ಲಿಖೀತ ಪರೀಕ್ಷೆ ಇಲ್ಲವೆ ಸಂದರ್ಶನ ನಡೆಸಿ, ನೀವು ಅವರ ಕಂಪನಿಯ ಕೆಲಸಕ್ಕೆ ಹೊಂದಿಕೆಯಾಗುತ್ತೀರ ಅಥವಾ ಅ ಸತ್ವ ನಿಮ್ಮಲ್ಲಿದೆ ಅನ್ನಿಸಿದರೆ ಮಾತ್ರ ನಿಮ್ಮನ್ನು ಆಯ್ಕೆ ಮಾಡುತ್ತವೆ. ನಾಲ್ಕು ವಾರಗಳಿಂದ ಹಿಡಿದು ಆರು ತಿಂಗಳವರೆಗಿನ ಇಂಟರ್ನ್ ಶಿಪ್ ಲಭ್ಯವಿರುತ್ತದೆ. ಇಂಜಿನಿಯರಿಂಗ್‌, ಮಾರ್ಕೆಟಿಂಗ್‌, ವೈದ್ಯಕೀಯ ಸೇವೆ… ಹೀಗೆ, ಯಾವುದೇ ರಂಗವಿರಲಿ, ಈಗ ಇಂಟರ್ನ್ಶಿಪ್‌ ಕಡ್ಡಾಯವೇ ಆಗಿದೆ. ಪ್ರತಿಷ್ಠಿತ ಕಂಪನಿಗಳ ಇಂಟರ್ನ್ ಶಿಪ್ ದೊರೆತು, ನೀವು ಬುದ್ಧಿವಂತರಾಗಿದ್ದರೆ ಓದು ಮುಗಿದ ನಂತರ ನೀವು ಅದೇ ಕಂಪನಿಯಲ್ಲಿ ಕೆಲಸ ಗಿಟ್ಟಿಸಬಹುದು. ಸದಾ ಹೊಸ ತಂತ್ರಜ್ಞಾನದ ಅನ್ವೇಷಣೆ ಮತ್ತು ಅಭಿವೃದ್ಧಿಯ ಉಮೇದಿನಲ್ಲಿರುವ ಎಲೆಕ್ಟಾನಿಕ್ಸ್‌ ಉತ್ಪನ್ನ, ಸಾಫ್ಟ್ವೇರ್‌ ಉತ್ಪನ್ನ, ರೊಬಾಟಿಕ್ಸ್‌, ವರ್ಚುಯಲ್‌ ರಿಯಾಲಿಟಿ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಗೆ ಸಂಬಂಧಿಸಿದ ಕ್ಷೇತ್ರಗಳು, ಕೆಲಸ ಮಾಡಲು ಉತ್ತಮ ಓದು ಮತ್ತು ಕೌಶಲದ ಜೊತೆಗೆ ಇಂಟರ್ನ್ಶಿಪ್‌ ಪ್ರಮಾಣ ಪತ್ರವೂ ಇರಬೇಕು ಎಂದು ಬಯಸುತ್ತವೆ. ಸ್ನಾತಕೋತ್ತರ ಶಿಕ್ಷಣಕ್ಕಾಗಿ ತನ್ನ ನೆಲಕ್ಕೆ ಕಾಲಿಡುವ ಪ್ರತೀ ವಿದ್ಯಾರ್ಥಿಯ ಇಂಟರ್ನ್ಶಿಪ್‌ ಗಮನಿಸುವ ಅಮೆರಿಕ, ಅದಕ್ಕಾಗಿ ಕೆಲವು ವಿಶೇಷ ಸವಲತ್ತುಗಳನ್ನೂ ನೀಡುತ್ತದೆ.

ಎಲ್ಲೆಲ್ಲಿ ಇಂಟರ್ನ್ ಶಿಪ್ ?
ಇಂಟೆಲ್‌, ಹ್ಯಾಟ್‌ ಹೋಟೆಲ್ಸ್‌, ಅತಿಥಿ ಸತ್ಕಾರ ಉದ್ಯಮದ ಮ್ಯಾರಿಯಟ್‌ ಇಂಟರ್‌ನ್ಯಾಷನಲ್‌ ಯುಟ್ಯೂಬ್‌, ಲಿಂಕ್ಡ್ಇನ್‌, ಫೋರ್ಡ್‌, ಸಿಸ್ಕೊ, ಐಬಿಎಮ್‌, ಫೇಸ್‌ಬುಕ್‌, ಬ್ಲಾಕ್‌ ಬೆರ್ರಿ, ಆ್ಯಪ‌ಲ್‌, ಅಮೆರಿಕನ್‌ ಎಕ್ಸ್‌ಪ್ರೆಸ್‌, ಅಮೆಜಾನ್‌, ಅಕ್ಸೆಂಚರ್‌, ಕಾರ್‌ ಮ್ಯಾಕ್ಸ್‌, ಚಾನೆಲ್‌ 4, ಗೂಗಲ್‌, ಡಿಸ್ಕವರಿ ಕಮ್ಯುನಿಕೇಶನ್ಸ್‌, ಜನರಲ್‌ ಮಿಲ್ಸ್‌ಗಳು ಅಂತಾರಾಷ್ಟ್ರೀಯ ವೇದಿಕೆಯ ಬೇಡಿಕೆಯ ಇಂಟರ್ನ್ಶಿಪ್‌ ತಾಣಗಳಾಗಿವೆ. ಕಾಮರ್ಸ್‌ ಓದಿದವರಿಗೆ ಇಂಟರ್ನ್ಶಿಪ್‌ ಅವಕಾಶ ನೀಡುವ HPJE ತಿಂಗಳಿಗೆ 15 ಸಾವಿರ ರೂ.ಗಳ ವರೆಗೆ ಸಹಾಯ ಧನ ನೀಡಿದರೆ ಹ್ಯಾಟ್‌ ಹೋಟೆಲ್‌ ಗಂಟೆಗೆ 12 ಡಾಲರ್‌ ನೀಡುತ್ತದೆ. ಫೋರ್ಡ್‌ ಕಂಪನಿ ಇಂಟರ್ನ್ಸ್ಗೆ ಬರುವ ವಿದ್ಯಾರ್ಥಿಗಳನ್ನು ತನ್ನ ನೌಕರರಷ್ಟೇ ಸಮಾನವಾಗಿ ನಡೆಸಿಕೊಳ್ಳುತ್ತದೆ. ಅಕ್ಸೆಂಚರ್‌ನಲ್ಲಿ ಇಂಟರ್ನ್ಶಿಪ್‌ ಪಡೆಯಲು ನೀವು ಕಾಲೇಜಿನ ಪದವೀಧರರೇ ಆಗಬೇಕೆಂದಿಲ್ಲ. ಶಾಲಾ ವಿದ್ಯಾಭ್ಯಾಸ ಪಡೆದಿದ್ದರೂ ನಿಮ್ಮಲ್ಲಿ ಸಾಫ್ಟ್ವೇರ್‌, ಮಾಹಿತಿ ತಂತ್ರಜ್ಞಾನ, ಮಾನವ ಸಂಪನ್ಮೂಲ ನಿರ್ವಹಣೆಗಳಲ್ಲಿ ಆಸಕ್ತಿ ಮತ್ತು ಅಲ್ಪ ಪರಿಣಿತಿ ಇದ್ದರೂ ಸಾಕು, ನೀವು ಆಕ್ಸೆಂಚರ್‌ನಲ್ಲಿ ಇಂಟರ್ನ್ಶಿಪ್‌ಗೆ ಸೇರಬಹುದು. ಎಂಬಿಎ ಮಾಡಿದ ವಿದ್ಯಾರ್ಥಿಗಳು ಮೆಕಿನ್ಸಿ, ಗೋಲ್ಡ್‌ ಮನ್‌ ಸಾಚ್‌, ಜೆ ಪಿ ಮೋರ್ಗನ್‌ ಚೇಸ್‌, ಬೇನ್‌ ಅಂಡ್‌ ಕಂಪನಿ, ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌, ಗೂಗಲ್‌ಗ‌ಳಲ್ಲಿ ಇಂಟರ್ನ್ಗೆ ಸೇರಬಹುದು.

‘ವಿಂಗ್ಸ್‌’ (MKET) ಯೋಜನೆಯ ಅಡಿ ಇಂಟ್‌ರ್ನ್ಶಿಪ್‌ ನೀಡುವ ಅಮೆರಿಕನ್‌ ಎಕ್ಸ್‌ಪ್ರೆಸ್‌ ಸಂಸ್ಥೆ ತಿಂಗಳಿಗೆ 68,000 ರೂ ಸ್ಟೆಪೆಂಡ್‌ ನೀಡುತ್ತದೆ. ಇದು ಎಷ್ಟೋ ಇಂಜಿನಿಯರ್‌ಗಳ ಸಂಬಳಕ್ಕಿಂತ ಹೆಚ್ಚು. ಬೆಂಗಳೂರು ಹಾಗೂ ಗುರ್‌ಗಾಂವ್‌ನ ಕಚೇರಿಗಳಿಂದ ವಿದ್ಯಾರ್ಥಿಗಳನ್ನು ಆನ್‌ಲೈನ್‌ನಲ್ಲಿ ಪರೀಕ್ಷೆ ಮತ್ತು ಗುಂಪು ಚರ್ಚೆಯ ಮೂಲಕ ಇಂಟರ್‌°ಗೆ ಆಯ್ಕೆಮಾಡಲಾಗುತ್ತದೆ. ಭಾರತದ ಹದಿನಾರು ಮುಖ್ಯ ನಗರಗಳಲ್ಲಿ ಶಾಖೆ ಹೊಂದಿರುವ ಜರ್ಮನ್‌ ಮೂಲದ ಡಾಯc ಬ್ಯಾಂಕ್‌ ತಿಂಗಳಿಗೆ 57,000 ರೂ ವರೆಗೆ ಸ್ಟೆಪೆಂಡ್‌ ನೀಡುತ್ತದೆ. ಪೇ ಪಲ್‌, ಐಟಿಸಿ, ಕ್ಯಾಡ್‌ಬರಿ, ಅರಿಸ್ಟಾ ಕಂಪ್ಯೂಟರ್‌ ಕಂಪನಿ, ಮೈಕ್ರೋಸಾಫ್ಟ್, ಅಡೋಬ್‌, ಬಿಎಮ್‌ಡಬ್ಲೂ, ಶೆಲ್‌, ಮೋರ್ಗನ್‌ ಸ್ಟಾನ್ಲಿ, ಫ್ಲಿಪ್‌ಕಾರ್ಟ್‌, ನೆಟ್‌ ಆ್ಯಪ್‌, ಟಾಟಾ ಮೋಟಾರ್, ಯಾಹೂ. ಓರಾಕಲ್‌, ಸ್ಯಾಪ್‌, ಎಮ್‌ವೇರ್‌ಗಳು ಸಹಾ ಕನಿಷ್ಠ 35 ಸಾರ ರೂ.ಸ್ಟೆಪೆಂಡ್‌ ನೀಡುವುದರ ಜೊತೆ ಕೆಲಸವನ್ನೂ ಕಲಿಸುತ್ತವೆ. ರಾಜಕೀಯಕ್ಕೆ ಸೇರುವವರಿಗೆ ಆಮ್‌ ಆದ್ಮಿ ಪಾರ್ಟಿ ಎರಡು ತಿಂಗಳ ಇಂಟರ್‌°ಶಿಪ್‌ ನೀಡುತ್ತದೆ. ಟೆಕ್‌ ಮಹೀಂದ್ರ, ಥಾಮಸ್‌ ಕುಕ್‌, ಔಟ್‌ಲುಕ್‌ ಮ್ಯಾಗಜಿನ್‌, ಟೈಟನ್‌ ಕಂಪನಿ, ಬುಕ್‌ ಮೈ ಶೋ ಕಂಪನಿಗಳು ಭಾರತದ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಸೌಲಭ್ಯ ಕಲ್ಪಿಸುವ ಪ್ರಮುಖ ಸಂಸ್ಥೆಗಳಾಗಿವೆ.

ಇಂಟರ್‌ ಶಿಪ್‌ಗೆ ಸೇರಲು ಸಹಾಯ ಮಾಡುವ ಅನೇಕ ವೆಬ್‌ಸೈಟ್‌ಗಳು ನಮ್ಮಲ್ಲಿವೆ. ಅವುಗಳಲ್ಲಿ ಪ್ರಮುಖವಾದವು internshala.com, unistaleducation.com, mentormind.in, letsintern.com, twenty19.com, wayup.com, hellointern.com, worldinternships.org, global experiences.com, xcelcorp.com, nyinst.com.

ಗುರುರಾಜ್‌ ಎಸ್‌ ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next