Advertisement

ವೃತ್ತಿ ಕೌಶಲ ಪ್ರೋತ್ಸಾಹಿಸುವುದು ಅಗತ್ಯ : ಶಾಸಕ ಅಪ್ಪಚ್ಚು ರಂಜನ್‌

01:00 AM Mar 11, 2019 | Harsha Rao |

ಮಡಿಕೇರಿ: ಸಮಾಜದ ಎಲ್ಲ ರಂಗದಲ್ಲಿಯೂ ಪ್ರಮಾಣ ಪತ್ರ ನೀಡಲಾಗುತ್ತಿದೆ. ಅವರವರ ಕೌಶಲ್ಯತೆ, ನೈಪುಣ್ಯತೆಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ. ಅದೇ ರೀತಿ ಚಿನ್ನದ ವ್ಯಾಪಾರಸ್ಥರಿಗೂ ಪ್ರಮಾಣ ಪತ್ರ ನೀಡುವ ಮೂಲಕ ಅವರ ವೃತ್ತಿ ಕೌಶಲ್ಯತೆಗೆ ಗೌರವ ನೀಡಿದಂತಾಗುತ್ತದೆ ಎಂದು ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್‌ ಅವರು ಅಭಿಪ್ರಾಯಪಟ್ಟರು.

Advertisement

ಪ್ರಧಾನಮಂತ್ರಿ ಕೌಶಲಾಭಿವೃದ್ದಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಅಕ್ಕಸಾಲಿಗ ಕಾರ್ಮಿಕರ ಒಕ್ಕೂಟ ಇವರ ಸಹಭಾಗಿತ್ವದಲ್ಲಿ ಶುಕ್ರವಾರ ನಗರದ ಬಾಲಭವನದಲ್ಲಿ ನಡೆದ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ವಿಧಾನ ಪರಿಷತ್‌ ಸದಸ್ಯೆವೀಣಾ ಅಚ್ಚಯ್ಯ ಮಾತನಾಡಿ ಯಾವುದೇ ವ್ಯಕ್ತಿಗೆ ತನ್ನನ್ನು ತಾನು ಗುರುತಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಉಮೇಶ ಆಚಾರ್ಯ ಅವರು ಪ್ರಧಾನಮಂತ್ರಿ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಯೋಜನೆಯನ್ನು 2014 ರಲ್ಲಿ ಜಾರಿಗೆ ತರಲಾಗಿದ್ದು, ಮೊರಾರ್ಜಿ ದೇಸಾಯಿ ಪ್ರಧಾನಮಂತ್ರಿ ಅವಧಿಯಲ್ಲಿ ಗೋಲ್ಡ್‌ ಕಂಟ್ರೋಲ್‌ ಕಾಯ್ದೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಕುಶಲಕರ್ಮಿಗಳಿಗೆ ಪರವಾನಿಗೆ ನೀಡಲಾಗಿತ್ತು, ನಂತರದಲ್ಲಿ ಗೋಲ್ಡ್‌ ಕಂಟ್ರೋಲ್‌ ಕಾಯ್ದೆ ರದ್ದುಪಡಿಸದ ನಂತರ ಚಿನ್ನದ ಕೆಲಸ ಮಾಡುವವರನ್ನು ಗುರುತಿಸುವ ಕಾರ್ಯ ನಡೆಯಲಿಲ್ಲ. ಈಗ ಅಕ್ಕಸಾಲಿಗರನ್ನು ಗುರುತಿಸುವ ಕಾರ್ಯ ನಡೆದಿದೆ.

ಅಕ್ಕಸಾಲಿಗರಿಗೆ ಆರ್‌.ಪಿ.ಎಲ್‌ (ಪೂರ್ವ ಕಲಿಕೆ ಗುರುತಿಸುವುದು) ಅನ್ವಯವಾಗತ್ತದೆ. ಪೂರ್ವಜರು ಕಲಿತ ವಿದ್ಯೆಯನ್ನು ಈಗೀನ ಯವಕರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು. 

Advertisement

ಕಕೊಡಗು ಜಿಲ್ಲಾ ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ‌ ಶ್ರೀನಿವಾಸ್‌, ಅಕ್ಕಸಾಲಿಗ ಕಾರ್ಮಿಕರ ಒಕ್ಕೂಟದ ಅಧ್ಯಕಕೆ.ರವಿ ಆಚಾರ್ಯ, ಎಂ.ಎ. ಮನೋಹರ್‌, ಬಿ.ಎಸ್‌.ಉಲ್ಲಾಸ್‌ ಶೇಟ್‌, ಸುರೇಶ್‌ ಜಿ.ಆಚಾರ್ಯ –ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next