Advertisement

ಬಡ ಮಕ್ಕಳಿಗೂ ವೃತ್ತಿಪರ ಶಿಕ್ಷಣ

01:01 PM Jan 11, 2017 | Team Udayavani |

ಚಿಂಚೋಳಿ: 371(ಜೆ)ನೇ ಕಲಂನಡಿ ಮೀಸಲಾತಿ ದೊರೆತು ಬಡವರ ಮಕ್ಕಳಿಗೂ ವೃತ್ತಿಪರ ಶಿಕ್ಷಣಗಳಾದ ವೈದ್ಯರು ಹಾಗೂ ಇಂಜಿನಿಯರ್‌ ಸೀಟುಗಳು ದೊರಕುತ್ತಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ, ಎಚ್‌ಕೆಆರ್‌ಡಿಬಿ ಅಧ್ಯಕ್ಷ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. 

Advertisement

ತಾಲೂಕಿನ ಮೋಘಾ ಗ್ರಾಮದ ಹಜರತ್‌ ಪೀರಾನೆ ಪೀರ ಗೌಸ್‌ ಅಝಮ್‌ ದಸ್ತಗಿರ್‌ ಮಹೆಬೂಬ ಸುಬಾನಿ ಉರುಸ್‌ ಸಮಾರಂಭದಲ್ಲಿ ಅವರು ಮಾತನಾಡಿದರು. ಹೈ.ಕ.ಪ್ರದೇಶದ ಮಕ್ಕಳಿಗೆ ಮೊದಲು ಕೇವಲ 100 ಸೀಟುಗಳು ಸಿಗುತ್ತಿದ್ದವು.

ಈಗ 750 ಸೀಟು ಮೆಡಿಕಲ್‌ ಮತ್ತು ಇಂಜಿನಿಯರಿಂಗ್‌ ಕೋರ್ಸುಗಳಲ್ಲಿ ಮೀಸಲಾತಿ ಸಿಗುತ್ತಿವೆ ಎಂದರು. ಹೈ.ಕ.ಪ್ರದೇಶದ ಮಕ್ಕಳಿಗೆ ಸರಕಾರಿ ಹುದ್ದೆಗಳಲ್ಲಿ 30 ಸಾವಿರ ಯುವ ಜನತೆಗೆ ಉದ್ಯೋಗ ಕೊಡಬೇಕಾಗಿದೆ. ಈಗಾಗಲೇ 12ಸಾವಿರ ಹುದ್ದೆ ಭರ್ತಿಗೊಳಿಸಲಾಗಿದೆ. 

ಈ ಭಾಗದ ಅಭಿವೃದ್ಧಿಗೋಸ್ಕರ ಪ್ರತಿವರ್ಷ ಒಂದು ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 3ಸಾವಿರ ಕೋಟಿ ರೂ. ಖರ್ಚು ಮಾಡಿರುವುದರಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು. 

ಕಲಬುರಗಿ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲಿ ಡಾಂಬರ್‌ ರಸ್ತೆ, ಬಸ್‌ ಸೌಲಭ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಕೊಡುವುದಕ್ಕೆ ವಿಶೇಷ ಗಮನ ಹರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದೇವೆ ಎಂದರು. 

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಮಾತನಾಡಿ, ತಾಲೂಕಿನ ಅಲ್ಪಸಂಖ್ಯಾತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು. 

ಈಶಾನ್ಯ ವಲಯ ಸಾರಿಗೆ ಸಂಸ್ಥೆ ಅಧ್ಯಕ್ಷ ಇಲಿಯಾಸ್‌ ಸೇಠ ಬಾಗವಾನ, ಸಲ್ಮಾಶೇಖ ರುಮ್ಮನಗೂಡ, ಕೆ.ಎಂ. ಬಾರಿ, ರವಿರಾಜ ಕೊರವಿ ಮಾತನಾಡಿದರು. ನಬಿ ಪಟೇಲ್‌, ಅಲ್ಲಾಹ ಪಟೇಲ್‌, ನಿಜಾಮ ಪಟೇಲ್‌, ಫಕೀರ ಪಟೇಲ್‌, ಖಾಜಾ ಪಟೇಲ್‌, 

ಇಮಿ¤ಯಾಜ್‌ ರೇವಗ್ಗಿ, ಡಾ| ಸೈಯದ್‌ ಸಿರಾಜುದ್ದೀನ್‌ ಹುಸೇನಿ ಚಿಸ್ತಿ, ಡಾ| ಅಬ್ದುಲ್‌ ರಹೆಮಾನ ಅಲಿ, ಮಸ್ತಾನ ಅಲಿ ಪಟ್ಟೇದಾರ ಇದ್ದರು. ಹಮೀದ ಪಟೇಲ್‌ ಸ್ವಾಗತಿಸಿದರು. ಮಹೆಬೂಬ ಶಾ ಮುತುವಲ್ಲಿ ಮಹ್ಮದ ಫಾರೂಕ ಹುಸೇನ್‌ ನಿರೂಪಿಸಿದರು. ಹಮೀದ ಪಟೇಲ್‌ ಮಹೆಬೂಬ ಶಾ ಖುರೆಶಿ ವಂದಿಸಿದರು. 

ಅನ್ಯೋನ್ಯ ಜೀವನ ಸಾಗಿಸೋಣ
ದೇಶದಲ್ಲಿ ಜಾತಿ, ಭಾಷೆ, ಸಂಸ್ಕೃತಿ ಬೇರೆಯಾಗಿದ್ದರೂ ನಾವೆಲ್ಲರೂ ಅನ್ಯೋನ್ಯವಾಗಿ ಬಾಳುತ್ತಿದ್ದೇವೆ. ಇದೊಂದು ಪರಂಪರೆ. ಇತಿಹಾಸದ ಪ್ರತೀಕ. ಕೆಲವು ಅಪನಂಬಿಕೆಯಿಂದ ಗ್ರಾಮದಲ್ಲಿ ಸಮಸ್ಯೆಗಳು ಉದ್ಬವಿಸುತ್ತವೆ. ಎಲ್ಲ ಧರ್ಮದವರು ಅನ್ಯೋನ್ಯವಾಗಿ ಜೀವನ ಸಾಗಿಸಬೇಕಾಗಿದೆ.  
-ಡಾ| ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next