Advertisement

6ನೇ ಯಕ್ಷರಂಗಾಯಣ: ಮೂಲ ಕಥೆ 1837ರ ಅಮರ ಕ್ರಾಂತಿಯ ರೈತ ದಂಗೆ!

01:20 PM Jun 14, 2022 | Team Udayavani |

ಕಾರ್ಕಳ: ರಾಜ್ಯದ ಆರನೇ ರಂಗಾಯಣ ಕಾರ್ಕಳ ಕೋಟಿ ಚೆನ್ನಯ ಥೀಮ್‌ ಪಾರ್ಕ್‌ನಲ್ಲಿ ಕಾರ್ಯಾರಂಭ ಮಾಡಿದ್ದು, ಮೊದಲ ವೃತ್ತಿ ನಿರತ ತಂಡ ಈಗ ಸಿದ್ಧಗೊಂಡಿದೆ. ವೃತ್ತಿ ರಂಗಭೂಮಿ ಕಲಾವಿದರು, ಹವ್ಯಾಸಿ ಕಲಾವಿದರನ್ನು ಸೇರಿಸಿ ನಾಟಕ ತರಬೇತಿ ನೀಡಲಾಗುತ್ತಿದೆ. ವೃತ್ತಿನಿತರ 14 ಮಂದಿ ತಂಡ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ. ಯಕ್ಷರಂಗಾಯಣ ನಿರ್ದೇಶಕ ಜೀವನ್‌ ರಾಂ ಸುಳ್ಯ ನಿರ್ದೇಶನದಲ್ಲಿ ಕಲಾವಿದರ ತಾಲೀಮು ನಡೆಯುತ್ತಿದೆ. ಜೂನ್‌ 3ನೇ ವಾರದಲ್ಲಿ ತಂಡ ರಾಜ್ಯಾದ್ಯಂತ ಪ್ರದರ್ಶನ ನೀಡಲಿದೆ.

Advertisement

ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ರೈತ ದಂಗೆ:

ಸ್ವಾತಂತ್ರ್ಯದ 1857ರ ಸಿಪಾಯಿ ದಂಗೆಗಿಂತ ಮೊದಲೇ ದೇಶದಲ್ಲಿ ಪ್ರತಿರೋಧಗಳು ವ್ಯಕ್ತವಾಗಿತ್ತು. ಸ್ವಾತಂತ್ರ್ಯ ಪೂರ್ವದ 110 ವರ್ಷಗಳ ಹಿಂದೆ ಪ್ರತಿರೋಧದ ಬೀಜ ಹುಟ್ಟಿತ್ತು. 1837ರಲ್ಲಿ ಬ್ರಿಟಿಷರ ವಿರುದ್ಧ ದ.ಕ. ಮತ್ತು ಕೊಡಗು ಜಿಲ್ಲೆಗಳ ರೈತರು ದೊಡ್ಡ ರೀತಿಯಲ್ಲಿ ಬಂಡೆದ್ದಿದ್ದರು. ಬಂಡಾಯ ಸಂಭವಿಸಿದ್ದು 1837ರ ಮಾ. 30ರಿಂದ. ಇದರ ಕೇಂದ್ರ ಸ್ಥಾನ ಅಮರ ಸುಳ್ಯದ ಮಾಗಣೆ, ಬಂಡಾಯ ನಡೆದದ್ದು ಕಲ್ಯಾಣ ಸ್ವಾಮಿ ಎಂದು ಘೊಷಿಕೊಂಡ ಪುಟ್ಟ ಬಸವ ಎಂಬ ರೈತನೊಬ್ಬನ ನೇತೃತ್ವದಲ್ಲಿ. ಬಂಡಾಯದ ರೂಪರೇಷೆ ಮಾಡಿದವರು ಹುಲಿಕಡಿದ ನಂಜಯ್ಯ. ಬಂಡಾಯಕ್ಕೆ ರೈತರನ್ನು ಅಮರ ಸುಳ್ಯದಲ್ಲಿ ಕೆದಂಬಾಡಿ ರಾಮ ಗೌಡ, ಕೊಡಗಿನಲ್ಲಿ ಅಪ್ಪಯ್ಯ, ಈ ನಾಲ್ಕು ಮಂದಿ ಬಂಡಾಯದ ಪ್ರಮುಖ ನಾಯಕರು. ಇನ್ನು ಅನೇಕ ಉಪನಾಯಕರು ರೈತರು ಬಂಡಾಯದಲ್ಲಿ ಪಾತ್ರವಹಿಸಿದ್ದರು.

ಜಾತಿ, ಮತ, ಧರ್ಮ, ವರ್ಗ ಬಿಟ್ಟು ಈಸ್ಟ್‌ ಇಂಡಿಯಾ ಕಂಪೆನಿಯ ಶೋಷನಾತ್ಮಕ ಕಂದಾಯ ವ್ಯವಸ್ಥೆಯ ವಿರುದ್ಧ ರೈತರೇ ಹೋರಾಟ ನಡೆಸಿದ್ದರು. 1834ರಲ್ಲಿ ಕೊಡಗಿನ ದೊರೆ ಚಿಕ್ಕವೀರ ರಾಜನನ್ನು ಪದಚ್ಯುತಿಗೊಳಿಸಿದ್ದು, ಸುಳ್ಯ, ಪುತ್ತೂರುಗಳ 110 ಗ್ರಾಮಗಳನ್ನು ಕೊಡಗಿನಿಂದ ಬೇರ್ಪಡಿಸಿದ್ದು, ಭೂ ಕಂದಾಯವನ್ನು 10ರಿಂದ 50ಕ್ಕೆ ಏರಿಸಿ, ನಗದ ರೂಪದಲ್ಲಿ ಕಟ್ಟಬೇಕೆಂದು ಶಾಸನ ಮಾಡಿದ್ದು, ಉಪ್ಪು ಹೊಗೆ ಸೊಪ್ಪುಗಳ ಉತ್ಪಾದನೆಯನ್ನು ರಾಷ್ಟ್ರೀಕರಿಸಿ ಬ್ರಿಟಿಷ್‌ ಸರಕಾರದ ಏಕಸಾಮ್ಯವನ್ನಾಗಿ ಮಾಡಿದ್ದೆ.ರೈತರು ದಂಗೆ ಏಳಲು ಕಾರಣವಾಗಿತ್ತು.

ರೈತರ ಕೆಚ್ಚೆದೆಯ ಕಥೆ ಮೂಲ ವಸ್ತು :

Advertisement

ರೈತ ಬಂಡಾಯದ ಅಮರ ಕ್ರಾಂತಿಯ ರೈತ ದಂಗೆ ಬೆಳ್ಳಾರೆಯ ಮಣ್ಣಿನ ಕೋಟೆಯನ್ನು ಬೇಧಿಸಿ ಖಜಾನೆಯನ್ನು ಮೊದಲು ವಶಕ್ಕೆ ಪಡೆದು ಕೋಟೆ ಮೇಲಿನ ಬ್ರಿಟಿಷ್‌ ಧ್ವಜವನ್ನು ಕೆಳಗಿಳಿಸಿದ್ದರು. ಪುತ್ತೂರಿನ ಕಡೆ ದಿಗ್ವಿಜಯ ಯಾತ್ರೆ ಮುಂದುವರಿಸಿ, ಪುತ್ತೂರನ್ನು ವಶಪಡಿಸಿಕೊಳ್ಳುತ್ತದೆ. 1200ಕ್ಕೂ ಅಧಿಕ ರೈತರಿರುತ್ತಾರೆ.

ಸಾಲಾಗಿ ನೇಣಿಗೇರಿಸಿದ್ದರು :

ರೈತ ನಾಯಕರು ಅಂತರದ ದಿನಗಳಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಗೆ ಬಲಿಯಾಗಿ ಸೋಲುಣ್ಣುತ್ತಾರೆ. ಕೆದಂಬಾಡಿ ರಾಮೇಗೌಡ, ಕಲ್ಯಾಣ ಸ್ವಾಮಿ, ಹುಲಿ ಕಡಿದ ನಂಜಯ್ಯ, ಗುಡ್ಡೆಮನೆ ಅಪ್ಪಯ್ಯ ಮುಂತಾದ ನಾಯಕರು ಸೇರಿದಂತೆ ನೂರಾರು ರೈತ ಹೋರಾಟಗಾರರನ್ನು ನಿರ್ದಾಕ್ಷಿಣ್ಯವಾಗಿ ಬ್ರಿಟಿಷರು ನೇಣಿಗೇರಿಸುತ್ತಾರೆ. ಈ ಹೋರಾಟದ ನೆನಪನ್ನು ಮತ್ತೆ ನಾಟಕದ ಮೂಲಕ ಹುತಾತ್ಮ ಹಿರಿಯರನ್ನು ಸ್ಮರಿಸುವ ಕೆಲಸ ಕಾರ್ಕಳ ಯಕ್ಷ ರಂಗಾಯಣ ಕಲಾವಿದರಿಂದ ಆಗುತ್ತಿದೆ. ಸಾಹಿತಿ ಡಾ| ಪ್ರಭಾಕರ ಶಿಶಿಲ ರಚಿಸಿದ್ದಾರೆ. ನೀನಾಸಂ ಪದವೀಧರರು, ಸ್ಥಳೀಯ ಕಲಾವಿದರು ಅಭಿನಯಿಸುತ್ತಿದ್ದಾರೆ. ಬ್ರಿಟಿಷರ ದಬ್ಬಾಳಿಕೆ, ರೈತ ಹೋರಾಟದ ಕಿಚ್ಚನ್ನು ಪಾತ್ರಧಾರಿಗಳು ಪರಿಣಾಮಕಾರಿಯಾಗಿ ಅಭಿನಯಿಸಲು ಸಜ್ಜಾಗಿದ್ದಾರೆ ಸುಳ್ಯ, ಪುತ್ತೂರು ಮಾರ್ಗವಾಗಿ ಒಂದು ತಂಡ ಕಡಬ ಉಪ್ಪಿನಂಗಡಿ ಕಾರ್ಕಳವಾಗಿ ಇನ್ನೊಂದು ತಂಡ ಮತ್ತೆರಡು ತಂಡಗಳು ಹೀಗೆ ನಾಲ್ಕು ರೈತ ದಂಗೆ ತಂಡಗಳು ಮಂಗಳೂರಿಗೆ ತಲುಪುತ್ತದೆ.

1837ರ ಎ. 5ರಂದು ರೈತರ ದಂಡು ಮಂಗಳೂರು ತಲುಪುತ್ತದೆ. ಆಗ ಅದರ ಸಂಖ್ಯೆ 5 ಸಾವಿರ ದಾಟಿತ್ತು. ಈ ಬ್ರಹತ್‌ ಸೇನೆಯನ್ನು ಬ್ರಿಟಿಷ್‌ ಅಧಿಕಾರಿ ಲೂವಿನ್‌ ತನ್ನ 150 ಮಂದಿ ಸೈನಿಕರಿಂದ ಎದುರಿಸುವಂತಿಲ್ಲ. 1837 ಎ.5 ರಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಹಾರಾಡುತ್ತಿದ್ದ ಬ್ರಿಟಿಷರ ಧ್ವಜವನ್ನು ಅಮರ ಕ್ರಾಂತಿಯ ರೈತ ಹೋರಾಟಗಾರರು ಕೆಳಗಿಳಿಸಿ, ತಮ್ಮ ವಿಜಯ ಧ್ವಜವನ್ನು ಹಾರಿಸುತ್ತಾರೆ. ಮಾತ್ರವಲ್ಲ 13 ದಿನಗಳ ಕಾಲ ಕೆನರಾ ಜಿಲ್ಲೆಯನ್ನು ಬ್ರಿಟಿಷ್‌ ಮುಕ್ತರನ್ನಾಗಿಸಿ ಆಳುತ್ತಾರೆ. ಈ ಅಮರ ಕ್ರಾಂತಿಯ ರೈತ ದಂಗೆಯನ್ನು ನಾಟಕದ ಮೂಲ ವಸ್ತುವಾಗಿಸಿಕೊಳ್ಳಲಾಗಿದೆ.

13 ದಿನ ಬ್ರಿಟಿಷ್‌ ಮುಕ್ತ: ಸುಳ್ಯ, ಪುತ್ತೂರು ಮಾರ್ಗವಾಗಿ ಒಂದು ತಂಡ ಕಡಬ ಉಪ್ಪಿನಂಗಡಿ ಕಾರ್ಕಳವಾಗಿ ಇನ್ನೊಂದು ತಂಡ ಮತ್ತೆರಡು ತಂಡಗಳು ಹೀಗೆ ನಾಲ್ಕು ರೈತ ದಂಗೆ ತಂಡಗಳು ಮಂಗಳೂರಿಗೆ ತಲುಪುತ್ತದೆ. 1837ರ ಎ. 5ರಂದು ರೈತರ ದಂಡು ಮಂಗಳೂರು ತಲುಪುತ್ತದೆ. ಆಗ ಅದರ ಸಂಖ್ಯೆ 5 ಸಾವಿರ ದಾಟಿತ್ತು. ಈ ಬ್ರಹತ್‌ ಸೇನೆಯನ್ನು ಬ್ರಿಟಿಷ್‌ ಅಧಿಕಾರಿ ಲೂವಿನ್‌ ತನ್ನ 150 ಮಂದಿ ಸೈನಿಕರಿಂದ ಎದುರಿಸುವಂತಿಲ್ಲ. 1837 ಎ.5 ರಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಹಾರಾಡುತ್ತಿದ್ದ ಬ್ರಿಟಿಷರ ಧ್ವಜವನ್ನು ಅಮರ ಕ್ರಾಂತಿಯ ರೈತ ಹೋರಾಟಗಾರರು ಕೆಳಗಿಳಿಸಿ, ತಮ್ಮ ವಿಜಯ ಧ್ವಜವನ್ನು ಹಾರಿಸುತ್ತಾರೆ. ಮಾತ್ರವಲ್ಲ 13 ದಿನಗಳ ಕಾಲ ಕೆನರಾ ಜಿಲ್ಲೆಯನ್ನು ಬ್ರಿಟಿಷ್‌ ಮುಕ್ತರನ್ನಾಗಿಸಿ ಆಳುತ್ತಾರೆ. ಈ ಅಮರ ಕ್ರಾಂತಿಯ ರೈತ ದಂಗೆಯನ್ನು ನಾಟಕದ ಮೂಲ ವಸ್ತುವಾಗಿಸಿಕೊಳ್ಳಲಾಗಿದೆ.

6ನೇ ರಂಗಾಯಣ ಕೇಂದ್ರದ ಚೊಚ್ಚಲ ವೃತ್ತಿನಿರತ ತಂಡವಿದು. 18ರಿಂದ 37 ವಯಸ್ಸಿನ 4 ಯುವತಿಯರು, 10 ಯುವಕರನ್ನೊಳಗೊಂಡ 14 ಮಂದಿಯ ತಂಡ 30 ಪಾತ್ರಗಳಲ್ಲಿ ಪಾತ್ರ ವಹಿಸಲಿದ್ದಾರೆ. ತಂಡದಲ್ಲಿ ಡಿಪ್ಲೊಮ ಪಡೆದ ನಿನಾಸಂ ಕಲಾವಿದರು ಇದ್ದಾರೆ. -ಜೀವನ್‌ ರಾಂ ಸುಳ್ಯ, ನಿರ್ದೇಶಕರು

 

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next