Advertisement
ನಗರದ ರೈಲ್ವೇ ಆಸ್ಪತ್ರೆಯಲ್ಲಿ ಇ ಅಂಡ್ ಟಿ ಸರ್ಜನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಹೇಮಂತ್ ವಾಮನ್‌ಶಂಕರ್. ಆಸ್ಪತ್ರೆಯ ಕೆಲಸದ ಬಿಡುವಿನ ಸಮಯಚಿತ್ರಕಲೆಬಿಡಿಸುವುದೇ ಇವರ ಹವ್ಯಾಸ. ಉದಯವಾಣಿ ಜತೆ ಮಾತ ನಾಡಿದ ಇವರು, ಚಿಕ್ಕವಯ ಸ್ಸಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ವಿಕೇಂಡ್ ಹಾಬಿ ಕ್ಲಾಸ್‌ಗಳಿಗೆ ತೆರಳಿ, ಮೂಲ ಚಿತ್ರಕಲೆಯ ಕೌಶಲ್ಯಗಳನ್ನು ಕಲಿಯ ಲಾಯಿತು.
Related Articles
Advertisement
ಯಾವ ರೀತಿಯ ಪೇಂಟಿಂಗ್‌ಗಳು: ಸಂಗೀತ ವಾದ್ಯಗಳ ಸರಣಿ, ಪಕ್ಷಿಗಳ ಸರಣಿ, ಕಟ್ಟಡಗಳ ಸರಣಿ, ಲ್ಯಾಂಡ್ ಸ್ಕೇಪ್ ಸರಣಿ, ಮಾನ್ಸೂನ್ ಸರಣಿ, ಫಾಸ್ಟ್ ಲೈಫ್ ಥೆರಪಿಯ ಸರಣಿ ಸೇರಿದಂತೆ ನಾನಾ ಬಗೆಯ ಸರಣಿಯ ಪೇಂಟಿಂಗ್‌ಗಳನ್ನು ಚಿತ್ರಿಸಿದ್ದಾರೆ.
ಪೇಂಟಿಂಗ್ ಮಾಡಲು ತೆಗೆದುಕೊಂಡ ಸಮಯ: ಒಂದೊಂದು ಪೇಂಟಿಂಗ್‌ಗಳು ಗಾತ್ರ ಮತ್ತು ವಿನ್ಯಾಸದ ಮೇಲೆ ಸಮಯ ತೆಗೆದುಕೊಳ್ಳಲಾಗುತ್ತದೆ. ಒಂದು ಚಿತ್ರಕಲೆ ಬಿಡಿಸಲು ಕನಿಷ್ಠ ಐದು ಪದರಗಳ ಬಣ್ಣ ಹಾಕಲಾಗುತ್ತದೆ. ಎರಡು ದಿನಗಳಿಂದ ಹಿಡಿದು ಎರಡು ತಿಂಗಳುಗಳ ಕಾಲ ಒಂದು ಚಿತ್ರಕಲೆಗೆ ಸಮಯ ಬೇಕಾಗುತ್ತದೆ. ರೋಸ್ಟರ್ ಎಂಬ ಪಕ್ಷಿಯ ಸರಣಿ ಬಿಡಿಸಲು ಒಂದು ವಾರದ ಸಮಯವಕಾಶ ಬೇಕಾಯಿತು.
ಪ್ರದರ್ಶನ ಮತ್ತು ಮಾರಾಟ: ಕಸ್ತೂರ್ಬಾ ರಸ್ತೆಯ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಗುರುವಾರದಿಂದ ಭಾನುವಾರ(ಡಿ.19)ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಬೆಳಗ್ಗೆ 11 ರಿಂದ ಸಂಜೆ 6.30 ವರೆಗೆ ಸಾರ್ವಜನಿಕರಿಗೆ ಪ್ರದರ್ಶನಕ್ಕಿಡಲಾಗುವುದು. ಜತೆಗೆ ಪೇಂಟಿಂಗ್ ಖರೀದಿಸಲು ಅವಕಾಶವಿದೆ.
“ಪೇಂಟಿಂಗ್ ಮಾಡುವುದು ನನ್ನ ಹವ್ಯಾಸ. ನನ್ನಕೆಲಸದ ಒತ್ತಡವನ್ನು ಕಡಿಮೆ ಮಾಡಲು ಚಿತ್ರಬಿಡಿಸುವುದು ಹಾಗೂ ನನ್ನಕ್ರಿಯಾತ್ಮಕತೆಯನ್ನು ಬಣ್ಣಗಳ ಮೂಲಕ ಹೊರಹಾಕಲು ಇಚ್ಛಿಸುತ್ತೇನೆ. ಪೇಂಟಿಂಗ್‌ನಲ್ಲಿ ನೈಫ್ ಪೇಂಟಿಂಗ್ ಮಾಡುವುದೆಂದರೆ ನನಗೆ ತುಂಬಾ ಇಷ್ಟ.” ●ಡಾ. ಹೇಮಂತ್ ವಾಮನ್‌ಶಂಕರ್, ವೈದ್ಯ ಮತ್ತು ಚಿತ್ರಕಲಾವಿದ.
“ಕೊರೊನಾ ಸಮಯದಲ್ಲಿ ಮನೆಗೆಲಸ ಜತೆಗೆ ಪೇಂಟಿಂಗ್ ಮಾಡಲು ಹೆಚ್ಚು ಸಮಯ ಸಿಕ್ಕಿತು. ಆದ್ದರಿಂದ ಬಹುತೇಕ ಚಿತ್ರಗಳನ್ನು ಬಿಡಿಸಲಾಯಿತು. ನನ್ನೊಂದಿಗೆ ಮಗನು ಪೇಟಿಂಗ್‌ಕಡೆ ಒಲವು ತೋರಿಸಿ, ವಿಭಿನ್ನ ರೀತಿಯ ಚಿತ್ರಕಲೆಗಳನ್ನು ಬಿಡಿಸಿರುವುದು ಸಂತಸ ವಿಷಯ.” ●ರಾಧಾ ಎಸ್.ಜಿ.ಕಲಾವಿದೆ.