Advertisement

ಪ್ರಾಧ್ಯಾಪಕರ ಸ್ಟಾರ್ಟಪ್‌! ಇದೇ ಮೊದಲ ಬಾರಿಗೆ ಕೇರಳದಿಂದ ಕ್ರಮ

07:25 AM Oct 22, 2017 | Harsha Rao |

ತಿರುವನಂತಪುರಂ: ಸ್ಟಾರ್ಟಪ್‌ ಆರಂಭಿಸುವ ಕಾಲೇಜು ಪ್ರಾಧ್ಯಾಪಕರಿಗೆ ಕೇರಳದಲ್ಲಿ ಇನ್ನು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ನಿರಾತಂಕವಾಗಿ ರಜಾ ಪಡೆದು ಕೊಳ್ಳಲಡ್ಡಿಯಿಲ್ಲ!

Advertisement

ಈ ಸುದ್ದಿ ಕೇಳಿ ನೀವು ಕಾಲೇಜು ಪ್ರಾಧ್ಯಾಪ ಕರಿಂದ ಸ್ಟಾರ್ಟಪ್‌ ಎಂದು ಹುಬ್ಬೇರಿಸಬಹುದು. ಹೌ‌ದು, ಕೇರಳ ಸರಕಾರವೇ ಈಗ ಇದಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದೆ. ಈಗಾಗಲೇ ಇಂಥದ್ದೊಂದು ಪ್ರಯೋಗಕ್ಕೆ ಮುಂದಾಗಿ, ರಜಾ ನೀಡುವಂತೆ ಮನವಿ ಮಾಡಿಕೊಂಡಿ ರುವ ಹತ್ತುಮಂದಿ ಪ್ರಾಧ್ಯಾಪಕರಿಗೆ ಇಲ್ಲಿನ ಸರಕಾರ ಅವಕಾಶ ಮಾಡಿಕೊಟ್ಟಿದೆ. 

ಉದ್ಯಮ ಶೀಲತೆ ಹಾಗೂ ಪಠ್ಯಕ್ರಮಕ್ಕೆ ಹೊಂದಿಕೊಳ್ಳು ವಂಥ ಜ್ಞಾನಾರ್ಜನೆ ಮಾಡಿಕೊಂಡು ಬೆಳೆಯಲೊಂದು ಅವಕಾಶ ಕಲ್ಪಿಸಿರುವ ಕೇರಳ ಸರಕಾರ, ಇದರಿಂದ ಪ್ರಾಧ್ಯಾಪಕರು ಹೊಸ ಅನ್ವೇಷಣೆ ಮೂಲಕ ಉದ್ಯಮ ಕ್ಷೇತ್ರದಲ್ಲಿಯೂ ಬೆಳೆಯಬಹುದಾಗಿದೆ. ಈ ಕಾರಣಕ್ಕಾಗಿಯೇ ಈ ಪ್ರಸ್ತಾವನೆಗೆ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ ಎಂದು ಹೇಳಿಕೊಂಡಿದೆ.

ಶೈಕ್ಷಣಿಕ ಕ್ಷೇತ್ರಕ್ಕೂ ಇದರಿಂದ ಸಾಕಷ್ಟು ನೆರವಾಗಲಿದೆ ಎಂದು ಹೇಳಿರುವ ಕೇರಳ ಸರಕಾರ, ಸ್ಟಾರ್ಟಪ್‌ ಮಿಷನ್‌ (ಕೆಎಸ್‌ಯುಎಂ) ಯೋಜನೆಯ ಅಡಿಯಲ್ಲಿ ಇದಕ್ಕೆ ಅವಕಾಶ ಕಲ್ಪಿಸಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಜಿ ಗೋಪಿನಾಥ್‌ ತಿಳಿಸಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಕೇರಳ ಸರಕಾರ ಇಂಥದ್ದೊಂದು ಯೋಜನೆಯಡಿ ಪ್ರಾಧ್ಯಾಪಕರಿಗೂ ಅವಕಾಶ ನೀಡಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next