Advertisement

ಪ್ರೊ.ಶರಣಪ್ಪ ವೈಜನಾಥ್‌ ಹಲ್ಸೆ ಕೆಎಸ್‌ಒಯು ನೂತನ ಕುಲಪತಿ

09:03 PM Nov 11, 2022 | Team Udayavani |

ಬೆಂಗಳೂರು: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಶರಣಪ್ಪ ವೈಜನಾಥ್‌ ಹಲ್ಸೆ ಅವರನ್ನು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಕುಲಪತಿಯಾಗಿ ನೇಮಿಸಲಾಗಿದೆ.

Advertisement

ಕೆಎಸ್‌ಒಯುನ ಈ ಹಿಂದಿನ ಕುಲಪತಿಯಾಗಿದ್ದ ಪ್ರೊ.ಎಸ್‌.ವಿದ್ಯಾಶಂಕರ್‌ ಅವರನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿಯಾಗಿ ನೇಮಿಸಲಾಗಿತ್ತು. ಬಳಿಕ ಅವರು ಕೆಎಸ್‌ಒಯು ಕುಲಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ವೇಳೆ ಖಾಲಿಯಿದ್ದ ಸ್ಥಾನಕ್ಕೆ ಅದೇ ವಿವಿಯ ಕುಲಸಚಿವರಾಗಿದ್ದ ಡಾ.ಎ.ಖಾದರ್‌ ಪಾಷ ಅವರನ್ನು ಪ್ರಭಾರ ಕುಲಪತಿಯಾಗಿ ನೇಮಿಸಲಾಗಿತ್ತು.

ಇದೀಗ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಶುಕ್ರವಾರ ಪ್ರೊ.ಎಸ್‌.ವಿ. ಹಲಸೆ ಅವರನ್ನು ನೂತನ ಕುಲಪತಿಯಾಗಿ ನೇಮಿಸಿದ್ದಾರೆ. ಅಕ್ಕಮಹಾದೇವಿ ವಿವಿಯ ಎಲೆಕ್ಟ್ರಾನಿಕ್ಸ್‌ ವಿಭಾಗದ ಪ್ರಾಧ್ಯಾಪಕರಾಗಿರುವ ಹಲಸೆ ಅಧಿಕಾರ ವಹಿಸಿಕೊಂಡ ದಿನದಿಂದ ಮುಂದಿನ ಮೂರು ವರ್ಷಗಳ ವರೆಗೆ ಅಥವಾ 65 ವರ್ಷ ತುಂಬುವವರೆಗೆ ಕೆಎಸ್‌ಒಯು ಕುಲಪತಿಯಾಗಿರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next