ಚಾಮರಾಜನಗರ: ರೈತ ನಾಯಕ, ಅಂತಾರಾಷ್ಟ್ರಿಯ ಮಟ್ಟದಲ್ಲಿ ರೈತಚಳವಳಿಗೆ ಮುನ್ನುಡಿಬರೆದವಿಶ್ವರೈತ ಚೇತನ ದಿ. ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ ಅಂಗವಾಗಿ ನಗರದಲ್ಲಿಫೆ.13 ರಂದು ನಗರದ ರಸ್ತೆ ಮತ್ತು ವೃತ್ತಕ್ಕೆ ಎಂಡಿಎನ್‌ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ರಾಜ್ಯ ರೈತಸಂಘದ ಉಪಾಧ್ಯಕ್ಷ ಎ.ಎಂ. ಮಹೇಶ್ ಪ್ರಭು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಯುವ ವಿಭಾಗದ ಕಾರ್ಯಕ್ರಮ ಹಾಗೂ ವಿಜ್ಞಾನಪರಿಷತ್‌ಉದ್ಘಾಟನಾ ಕಾರ್ಯಕ್ರಮವನ್ನು ರೈತಸಂಘ ರಾಜ್ಯಸಮಿತಿ ಹಾಗೂ ಜಿಲ್ಲಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತಸಂಘವನ್ನು ವೈಚಾರಿಕವಾಗಿ ಮುನ್ನಡೆಸಿ, ಅದನ್ನು ಗಟ್ಟಿಗೊಳಿಸಿದವರು ಪ್ರೊಫೆಸರ್ ನಂಜುಂಡಸ್ವಾಮಿ ಅವರು, ಅವರು ನಮ್ಮನ್ನಗಲಿ19ವರ್ಷಗಳೇ ಸಂದಿದೆ. ಸರ್ಕಾರದ ರೈತವಿರೋಧಿನೀತಿಗಳ ಬಗ್ಗೆ ಎಚ್ಚರಿಸಿ, ರೈತರಧನಿಯಾಗಿ ಹೋರಾಟನಡೆಸಿದ ಅವರ ಆದರ್ಶಗಳನ್ನು ಮುನ್ನಡೆಸಿಕೊಂಡುಹೋಗುವುದು ಪûಾತೀತವಾಗಿ ಎಲ್ಲರ ಜವಾಬ್ದಾರಿಯಾಗಿದೆ. ಈಚಿನ ವರ್ಷಗಳಲ್ಲಿ ದೇಶದ ಯುವಜನತೆ ಕೃಷಿ ಲಾಭದಾಯಕ ಕ್ಷೇತ್ರವಲ್ಲ ಎಂಬ ದೃಷ್ಟಿಯಿಟ್ಟುಕೊಂಡು, ಕೃಷಿಯಿಂದ ವಿಮುಖರಾಗುತ್ತಿದ್ದಾರೆ.
ಇದರಿಂದ ಮುಂದಿನದಿನಗಳಲ್ಲಿ ದೇಶಕ್ಕೆ ಆಹಾರದ ಕೊರತೆಯಾಗಲಿದ್ದು, ಇಂತಹ ಸಮಸ್ಯೆ ಎದುರಾಗದಂತೆ ತಡೆಯಲು ಯುವಜನರನ್ನುಕೃಷಿಯಲ್ಲಿ ತೊಡಗಿಸಿಕೊಳ್ಳುವಂತ ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಅದನ್ನು ಮನಗಂಡು, ಫೆ.13 ರಂದು ರಾಜ್ಯಮಟ್ಟದ ಯುವರೈತ ವಿಭಾಗ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ರಾಜ್ಯಮಟ್ಟದ ಯುವವಿಭಾಗದ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಗ್ಗೆ 10ಕ್ಕೆ ನಗರದಪ್ರವಾಸಿಮಂದಿರದಿಂದ ಎಂಡಿಎನ್ ಅವರಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.ಎತ್ತಿನಗಾಡಿ, ಟ್ರಾಕ್ಟರ್‌ಗಳ ಮೆರವಣಿಗೆ ಪ್ರವಾಸಿಮಂದಿರದ ಆವರಣದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ, ಎಲ್‌ಐಸಿ ಕಚೇರಿ ಬಳಿಸಮಾವೇಶಗೊಂಡು, ರಸ್ತೆ ಅಥವಾ ವೃತ್ತಕ್ಕೆ ಎಂಡಿಎನ್ ಅವರ ಹೆಸರನ್ನು ನಾಮಕರುವ ಕಾರ್ಯಕ್ರಮ ನಡೆಯಲಿದೆ ಎಂದರು.
ಎತ್ತಿನಗಾಡಿ, ಟ್ರಾಕ್ಟರ್ ಸಮೇತ ಭಾಗವಹಿಸಿ:
ಮೆರವಣಿಗೆ ಹಿನ್ನೆಲೆಯಲ್ಲಿ ರೈತರು ತಮ್ಮ ತಮ್ಮ ಗ್ರಾಮಗಳಿಂದ ಎತ್ತಿನಗಾಡಿ, ಟ್ರಾಕ್ಟರ್ ಸಮೇತಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಬೇಕು ಎಂದು ಮಹೇಶ್‌ಪ್ರಭು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಹೆಬ್ಬಸೂರು ಬಸವಣ್ಣ, ಜಿಲ್ಲಾ ಕಾರ್ಯಾಧ್ಯಕ್ಷಶೈಲೇಂದ್ರ, ಜಿಲ್ಲಾ ಗೌರವಾಧ್ಯಕ್ಷ ಚಿನ್ನಸ್ವಾಮಿಗೌಂಡರ್, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮರಿಯಾಲ ಮಹೇಶ್, ಬಾಬು ಉಪಸ್ಥಿತರಿದ್ದರು.
ಮೇಧಾ ಪಾಟ್ಕರ್, ಯೋಗೇಂದ್ರ ಯಾದವ್ ಭಾಗಿ :
ಪ್ರೊ.ಎಂಡಿಎನ್ ನೆನಪಿನ ದಿನಾಚರಣೆ ಅಂಗವಾಗಿ ಫೆ. 13ರಂದು ಮಧ್ಯಾಹ್ನ 2ಕ್ಕೆ ನಗರದ ನಂದಿ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್, ರಾಜ್ಯರೈತಸಂಘದ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಭಾಗವಹಿಸಲಿದ್ದಾರೆ ಎಂದು ಮಹೇಶ್‌ಪ್ರಭು ತಿಳಿಸಿದರು.