Advertisement

ಟೋಲ್‌ ಬರೆ  ಡಿ. 7ರ ಕೋಟ ಬಂದ್‌ಗೆ ಸರ್ವತ್ರ ಬೆಂಬಲ

10:57 AM Dec 04, 2018 | Team Udayavani |

ಕೋಟ: ಸ್ಥಳೀಯ ವಾಹನಗಳಿಂದ ಟೋಲ್‌ ವಸೂಲಿ ವಿರೋಧಿಸಿ ಹಾಗೂ ಕಾಮಗಾರಿಗಳನ್ನು ಸಮರ್ಪಕ
ವಾಗಿ ನಿರ್ವಹಿಸುವಂತೆ ಆಗ್ರಹಿಸಿ ಡಿ. 7ರಂದು ಕರೆ ನೀಡಿರುವ ಕೋಟ ಬಂದ್‌ಗೆ ಭಾರೀ ಬೆಂಬಲ ವ್ಯಕ್ತವಾಗಿದೆ.

Advertisement

ರಾ.ಹೆ. ಜಾಗೃತಿ ಸಮಿತಿ ಸೋಮವಾರ ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಪ್ರತಾಪ್‌ ಶೆಟ್ಟಿ ಬಂದ್‌ ಕುರಿತು ಮಾಹಿತಿ ನೀಡಿದರು. ಮಾಬುಕಳ, ಐರೋಡಿ, ಪಾಂಡೇಶ್ವರ, ಯಡಬೆಟ್ಟು, ಸಾಸ್ತಾನ, ಕೋಡಿ ಕನ್ಯಾಣ, ಗುಂಡ್ಮಿ, ಸಾಲಿಗ್ರಾಮ, ಚಿತ್ರಪಾಡಿ, ಕೋಟ ಮೂರುಕೈ, ಕೋಟತಟ್ಟು, ಕೋಟ, ಮಣೂರುಗಳ ಅಂಗಡಿ ಹಾಗೂ ಇನ್ನಿತರ ವ್ಯವಹಾರಸ್ಥರು ಬಂದ್‌ಗೆ ಪೂರ್ಣ ಬೆಂಬಲ ನೀಡಿದ್ದಾರೆ ಎಂದರು.

20 ಕಿ.ಮೀ. ವ್ಯಾಪ್ತಿಯಲ್ಲಿ ಟೋಲ್‌ ಸ್ವೀಕರಿಸದಂತೆ ಆಗ್ರಹಿಸುವುದು ನಮ್ಮ ಆದ್ಯತೆಯಾಗಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಜಿಲ್ಲೆಯ ಜನಪ್ರತಿನಿಧಿಗಳನ್ನೊಳಗೊಂಡು ಟೋಲ್‌ ಪ್ಲಾಜಾ ಸಮೀಪ ಬೃಹತ್‌ ಪ್ರತಿಭಟನೆ ಜರಗಲಿದೆ. ಸಂಜೆ 4 ಗಂಟೆ ತನಕ ಬಂದ್‌ ನಡೆಯಲಿದೆ ಎಂದರು.

ಜಾಗೃತಿ ಸಮಿತಿಯ ಕಾನೂನು ಸಲಹೆಗಾರ ಶ್ಯಾಮಸುಂದರ್‌ ನಾೖರಿ ಮಾತನಾಡಿ, ಯಾವುದೇ ಕಾರಣಕ್ಕೂ ಪಾಸ್‌ ಪಡೆಯಬೇಡಿ. ಒಮ್ಮೆ ಪಾಸ್‌ ಪಡೆದರೆ 30 ವರ್ಷಗಳವರೆಗೆ ಪಡೆಯುತ್ತಲೇ ಇರಬೇಕಾಗುತ್ತದೆ. ಜತೆಗೆ ಕಂಪೆನಿಯು ಆಗಾಗ ಸುಂಕವನ್ನು ಹೆಚ್ಚಿಸುತ್ತಿರುತ್ತದೆ. ನಾವು ಪಾವತಿಸು ತ್ತಿರಬೇಕಾದೀತು ಎಂದು ಎಚ್ಚರಿಸಿದರು.

ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ರಾಜೇಶ್‌ ಕಾವೇರಿ, ವಿಠಲ ಪೂಜಾರಿ, ಆಲ್ವಿನ್‌ ಅಂದ್ರಾದೆ, ತಿಮ್ಮ
ಪೂಜಾರಿ, ಡೆನ್ನಿಸ್‌, ಶ್ರೀಪತಿ ಅಧಿಕಾರಿ,ನಾಗರಾಜ ಗಾಣಿಗ ಸಾಲಿಗ್ರಾಮ, ಪ್ರಶಾಂತ್‌ ಶೆಟ್ಟಿ ಸಾಸ್ತಾನ ಮಾತನಾಡಿದರು.
ಸ್ಥಳೀಯ ಮುಖಂಡರಾದ ಗೋವಿಂದ ಪೂಜಾರಿ, ಮೊಸೇಸ್‌ ರೋಡ್ರಿಗಸ್‌, ಶೈಲಾ ಡಿ’ಸೋಜಾ, ಕಾರ್ಕಡ ರಾಜು ಪೂಜಾರಿ, ಶಂಭು ಪೂಜಾರಿ, ರತ್ನಾ ಜೆ. ರಾಜ್‌, ವಂ| ಡೇವಿಡ್‌ ಕ್ರಾಸ್ತಾ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next