Advertisement
ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಬಯೋಟೆಕ್ ಸಭಾಭವನದಲ್ಲಿ ಆಯೋಜಿಸಿದ್ದ ಡಿಜಿಟಲ್ ಯುಗದ ಅವಕಾಶಗಳು ಹಾಗೂ ತಂತ್ರಗಾರಿಕೆ ಕುರಿತ ಉಪನ್ಯಾಸ ನೀಡಿ ಮಾತನಾಡಿದ ಅವರು, ನವೋದ್ಯಮ ಬೆಳವಣಿಗೆ ಸವಾಲಾಗಿರುತ್ತದೆ. ಆದರೆ ಹಿಂದಿನ ಹಲವು ಉದ್ಯಮಗಳ ಗುಣಾತ್ಮಕ ಹಾಗೂ ಋಣಾತ್ಮಕ ಅಂಶಗಳು, ಸಾಧನೆ-ವೈಫಲ್ಯಗಳನ್ನು ತುಲನೆ ಮಾಡುವ ಮೂಲಕ ಋಣಾತ್ಮಕ ಅಂಶಗಳನ್ನು ಮೆಟ್ಟಿ ನಿಂತರೆ ಯಶಸ್ಸು ದೊರೆಯಲಿದೆ ಎಂದರು.
ಕೆಲವೊಂದು ಉದ್ಯಮಗಳು ಉತ್ತಮ ಹಾಗೂ ವಿಭಿನ್ನ ರೀತಿಯಲ್ಲಿಆರಂಭವಾದರೂ ಬೆಳವಣಿಗೆ ನಿರ್ವಹಣೆ ಸಾಧ್ಯವಾಗದೆ ಫಲವಾಗುತ್ತವೆ. ಇದಕ್ಕೆ ಕ್ಯಾ| ಗೋಪಿನಾಥನ್ ಅವರ ಡೆಕ್ಕನ್ ವಿಮಾನಯಾನ ಉದ್ಯಮ ಸಾಕ್ಷಿಯಾಗಿದೆ. ಉದ್ಯಮದಲ್ಲಿ ರಿಸ್ಕ್ ಅವಶ್ಯ ಎನ್ನುತ್ತಾರೆ. ಆದಷ್ಟು ರಿಸ್ಕ್ನ್ನು ಕನಿಷ್ಠಗೊಳಿಸುವ ಯತ್ನ ಮಾಡಿ. ನಮ್ಮದೇ ಸಂಸ್ಕೃತಿಯನ್ನು ವೃದ್ಧಿಸುವುದರ ಜತೆಗೆ ಮೌಲ್ಯ, ಗುಣಮಟ್ಟದೊಂದಿಗೆ ಉತ್ಪನ್ನಗಳು ಜನತೆಯ ಬ್ರಾಂಡ್ ಆಗಿಸಬೇಕು ಎಂದು ಅಭಿಪ್ರಾಯಪಟ್ಟರು. ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಯಾಂತ್ರೀಕರಣ ಹಲವುಉದ್ಯೋಗಗಳಿಗೆ ಕುತ್ತು ತರುತ್ತಿವೆ. ಹತ್ತಾರು ಜನರು ಮಾಡಬಹುದಾದ ಕಾರ್ಯಗಳನ್ನು ಒಂದು ರೋಬೋಟ್ ಮಾಡುತ್ತಿದೆ. ಆದರೆ ಉತ್ಪಾದನೆ, ಕಟ್ಟಡ ನಿರ್ಮಾಣ ಇನ್ನಿತರ ಕಾರ್ಯಗಳಲ್ಲಿ ಮಾನವ ಶಕ್ತಿ ಬಳಕೆಯೇ ಪ್ರಮುಖವಾಗಿದೆ.
Related Articles
Advertisement
ತಾವು ಮೂರು ದಶಕಗಳಿಗೂ ಹೆಚ್ಚು ಕಾಲ ಸಿಇಒ ಸೇರಿದಂತೆ ವಿವಿಧ ಹುದ್ದೆ ನಿರ್ವಹಿಸಿ 58ನೇ ವಯಸ್ಸಿನಲ್ಲಿಉದ್ಯಮ ಆರಂಭಿಸಿದ್ದು, ಉದ್ಯಮ ಆರಂಭಕ್ಕೆ ವಯೋಮಿತಿ ಅಡ್ಡಿಯಲ್ಲ ಎಂದರು. ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಕ ಶೆಟ್ಟರ, ಕುಲಸಚಿವ ಪ್ರೊ| ಬಿ.ಎಲ್. ದೇಸಾಯಿ, ಬಿವಿಬಿ ಕಾಲೇಜು ಪ್ರಾಂಶುಪಾಲ ಪ್ರೊ| ತೇವಡಿ, ಸಿಐಟಿಇ ಮುಖ್ಯಸ್ಥ ನಿತಿನ್ ಕುಲಕರ್ಣಿ, ಎಂಬಿಎ ವಿಭಾಗದ ಮುಖಸ್ಥ ಡಾ| ಎಸ್.ವಿ. ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.