Advertisement

ನಿರ್ಮಾಪಕ ಉಮಾಪತಿ ಮಾತು : 100% ಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ ರಾಬರ್ಟ್‌

12:24 PM Nov 30, 2020 | Suhan S |

ಸ್ಟಾರ್ ಸಿನಿಮಾಗಳು ಯಾವಾಗ ರಿಲೀಸ್‌… ಹೀಗೊಂದು ಪ್ರಶ್ನೆಯನ್ನು ಸಿನಿಪ್ರೇಮಿಗಳುಕೇಳುತ್ತಲೇ ಇದ್ದರು. ಆದರೆ, ಅದಕ್ಕೆ ಈವರೆಗೂ ಸರಿಯಾದ ಉತ್ತರ ಸಿಕ್ಕಿಲ್ಲ. ಅದರಲ್ಲೂ ದರ್ಶನ್‌ ಅಭಿಮಾನಿಗಳು “ರಾಬರ್ಟ್‌’ ಚಿತ್ರದ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಿಸಿಕೊಂಡು ಸಿನಿಮಾ ಬಿಡುಗಡೆಗೆ ಎದುರುನೋಡುತ್ತಲೇ ಇದ್ದಾರೆ. ಆದರೆ, ಚಿತ್ರ ಬಿಡುಗಡೆ ಯಾವಾಗ ಎಂದರೆ ಅದಕ್ಕೆ ಉತ್ತರ ಸದ್ಯಕ್ಕಿಲ್ಲ.

Advertisement

ಹೌದು, ಸದ್ಯಕ್ಕೆ “ರಾಬರ್ಟ್‌’ಚಿತ್ರ ಬಿಡುಗಡೆಯಾಗುವುದಿಲ್ಲ. ಅದಕ್ಕೆಕಾರಣ ಚಿತ್ರ ಮಂದಿರಗಳ ಶೇ  50 ಸೀಟು ಭರ್ತಿ ನಿಯಮ. ಈ ನಿಯಮ ಸಡಿಲವಾಗಿ ಶೇಕಡಾ ನೂರಕ್ಕೆ ನೂರು ಸೀಟು ಭರ್ತಿಗೆ ಅವಕಾಶ ಸಿಗುವವರೆಗೆ “ರಾಬರ್ಟ್‌’ ರಿಲೀಸ್‌ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಮಾತನಾಡುವ “ರಾಬರ್ಟ್‌’ ಚಿತ್ರದನಿರ್ಮಾಪಕ ಉಮಾಪತಿ, “ಸದ್ಯಕ್ಕೆ ಸಿನಿಮಾ ಬಿಡುಗಡೆ ಬಗ್ಗೆ ಯಾವುದೇನಿರ್ಣಯಕ್ಕೆ ಬಂದಿಲ್ಲ. ಶೇ 100ರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ ಸಿನಿಮಾ ಬಿಡುಗಡೆಯ ಬಗ್ಗೆ ನಿರ್ಧರಿಸುತ್ತೇವೆ. ಅದಕ್ಕಿಂತ ಮುಂಚೆ ಚಿತ್ರದ ರಿಲೀಸ್‌ ದಿನಾಂಕ ನಿರ್ಧರಿಸೋದು ಸರಿಯಲ್ಲ’ ಎನ್ನುತ್ತಾರೆ. ಅಲ್ಲಿಗೆ 2020ರಲ್ಲಿ “ರಾಬರ್ಟ್‌’ ತೆರೆಕಾಣೋದಿಲ್ಲ ಎಂದಂತಾಯಿತು.

ಸದ್ಯಕ್ಕಿಲ್ಲ ಮದಕರಿ :

“ರಾಬರ್ಟ್‌’ ಚಿತ್ರದ ಬಳಿಕ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ “ರಾಜವೀರ ಮದಕರಿನಾಯಕ’ ಚಿತ್ರದಲ್ಲಿ ಅಭಿನಯಿಸಲಿದ್ದು, ಕೋವಿಡ್ ಲಾಕ್‌ಡೌನ್‌ ನಿಂದಾಗಿ ಈ ಚಿತ್ರದ ಕೆಲಸಗಳು ಅಂದುಕೊಂಡಂತೆ ಶುರುವಾಗಿರಲಿಲ್ಲ. ಆದರೆ ಲಾಕ್‌ಡೌನ್‌ ತೆರವಾದ ನಂತರವೂ ಚಿತ್ರ ಯಾವಾಗ ಚಿತ್ರೀಕರಣ ಆರಂಭಿಸಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ಎಸ್‌.ವಿ ರಾಜೇಂದ್ರ ಸಿಂಗ್‌ ಬಾಬು, “ಸಿನಿಮಾದ ಒಂದಷ್ಟುಕೆಲಸಗಳು ಶುರುವಾಗಿತ್ತಾದರೂ, ಆ ನಂತರ ಶುರುವಾದಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲಸ ಅರ್ಧಕ್ಕೆ ನಿಂತಿದೆ. ಈಗ ಮತ್ತೆ ಸಿನಿಮಾದಕೆಲಸಗಳು ಶುರುವಾಗಬೇಕಿದೆ. ಆದರೆ ಸದ್ಯದ ಮಟ್ಟಿಗೆ ಯಾವಾಗಿನಿಂದ ಶುರುವಾಗುತ್ತದೆ ಅನ್ನೋದು ಸ್ಪಷ್ಟವಿಲ್ಲ’ ಎಂದಿದ್ದಾರೆ. ಸದ್ಯ ದರ್ಶನ್‌ ತಮ್ಮ ಸ್ನೇಹಿತರ ಜೊತೆ ಜಾಲಿ ಟ್ರಿಪ್‌ ಹೋಗುತ್ತಾ, ಖುಷಿಯಾಗಿದ್ದಾರೆ.ಕೆಲ ದಿನಗಳ ಹಿಂದಷ್ಟೇ ತಮ್ಮ ಸ್ನೇಹಿತ ಸಂದೇಶ್‌ ಅವರ ಹೋಟೆಲ್‌ನಲ್ಲಿಕೇಕ್‌ ತಯಾರಿಸುವಲ್ಲಿ ನಿರತರಾಗಿದ್ದು, ಆ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.

ಇದನ್ನೂ ಓದಿ : ಗ್ರಾ.ಪಂ ಸಾರ್ವತ್ರಿಕ ಚುನಾವಣೆಗೆ ಮುಹೂರ್ತ ನಿಗದಿ: ಎರಡು ಹಂತಗಳಲ್ಲಿ ನಡೆಯಲಿದೆ ಮತದಾನ

Advertisement

ಸ‌ದ್ಯಕ್ಕೆ ಸಿನಿಮಾ ಬಿಡುಗಡೆ ಬಗ್ಗೆ ಯಾವುದೇ ನಿರ್ಣಯಕ್ಕೆಬಂದಿಲ್ಲ. ಶೇ 100ರಷ್ಟು ಸೀಟುಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ ಸಿನಿಮಾ ಬಿಡುಗಡೆಯ ಬಗ್ಗೆ ನಿರ್ಧರಿಸುತ್ತೇವೆ. – ಉಮಾಪತಿ ಶ್ರೀನಿವಾಸ್‌ ಗೌಡ, ನಿರ್ಮಾಪಕ

Advertisement

Udayavani is now on Telegram. Click here to join our channel and stay updated with the latest news.

Next