Advertisement

ಹಣ್ಣುಗಳ ಸಂಸ್ಕರಣೆ, ಮೌಲ್ಯವರ್ಧನೆ ಲಾಭದಾಯಕ

07:37 AM Feb 26, 2019 | |

ದೊಡ್ಡಬಳ್ಳಾಪುರ: ಹಣ್ಣುಗಳ ಸೇವನೆ ಆರೋಗ್ಯಕ್ಕೆ ಅಗತ್ಯವಾಗಿದ್ದು, ಪ್ರತಿದಿನ ಲಭ್ಯತೆಗನುಗುಣವಾಗಿ ಒಬ್ಬರು 100 ಗ್ರಾಂ ಹಣ್ಣು ತಿನ್ನಬೇಕೆಂದು ಶಿಫಾರಸು ಮಾಡಲಾಗಿದೆ. ಈ ದಿಸೆಯಲ್ಲಿ ಆಯಾ ಋತುಗಳಲ್ಲಿ ಸಿಗುವ ಹಣ್ಣುಗಳನ್ನು ಸಂಸ್ಕರಿಸಿ, ಮೌಲ್ಯವಸಿದರೆ ಹಣ್ಣಿನ ರುಚಿ ಮತ್ತು ಪರಿಮಳ ಎಲ್ಲ ಕಾಲಗಳಲ್ಲೂ ಲಭ್ಯವಾಗುವಂತೆ ಮಾಡಬಹುದು ಎಂದು ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕಿ ಬಿ.ವಿ.ಮಂಜುಳಾ ತಿಳಿಸಿದರು.

Advertisement

ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನವೀನ ಉದ್ಯಮಗಳ ಮೂಲಕ ಗ್ರಾಮೀಣ ಯುವಜನತೆಗೆ ಉದ್ಯೋಗ ಹಾಗೂ ಜೀವನೋಪಾಯ ಭದ್ರತೆ ಯೋಜನೆಯಡಿ ಸ್ಥಾಪನೆಯಾಗಿರುವ ಮಹಾವೃಕ್ಷ ಹಲಸು ಬೆಳೆಗಾರರ ಸಂಘದ ಸದಸ್ಯರಿಗೆ ನ ಡೆದ ಹಲಸಿನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಆರು ದಿನಗಳ ವೃತ್ತಿಪರ ತರಬೇತಿ ಸಮಾರೋಪದಲ್ಲಿ ಮಾತನಾಡಿದರು.

ಹ ಣ್ಣು ಗಳು ಬೇಗ ಹಾಳಾಗುವ ಸಾಧ್ಯತೆ ಇರುವುದರಿಂದ ಇವನ್ನು ತಾಜಾ ರೂಪದಲ್ಲಿ ಬಹಳ ಕಾಲ ಸಂಗ್ರಹಿಸುವುದು ಕಷ್ಟ ಸಾಧ್ಯ. ಪೋಷಕಾಂಶಗಳಾದ ಖನಿಜಗಳು, ಜೀವಸತ್ವಗಳು ಮತ್ತು ನಾರಿನಂಶ ಅತಿ ಹೆಚ್ಚಾಗಿ ಹೊಂದಿರುವ ಹಣ್ಣುಗಳು ಆಯಾ ಋತುಗಳಲ್ಲಿ ಬಹಳ ಕಡಿಮೆ ಬೆಲೆಗೆ ಸಿಗುತ್ತವೆ. ಇವುಗಳನ್ನು ಸಂಸ್ಕರಿಸಿ, ಮೌಲ್ಯವರ್ದಿಸಿ ಸಂರಕ್ಷಿಸಿದರೆ ದಿನನಿತ್ಯದ ಆಹಾರ ಪೌಷ್ಟಿಕಗೊಳಿಸಿ, ಆ ಹಣ್ಣಿನ ರುಚಿ ಮತ್ತು ಪರಿಮಳ ಎಲ್ಲ ಕಾಲಗಳಲ್ಲೂ ಲಭ್ಯವಾಗುವಂತೆ ಮಾಡಬಹುದು. ಇದರಿಂದ ಲಾಭವನ್ನು ಹೆಚ್ಚಾಗಿ ಪಡೆಯಬಹುದು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಕೆವಿಕೆ ಪ್ರಾಧ್ಯಾಪಕರಾ ದ ಡಾ. ಕಲ್ಪನಾ ಮಾ ತ ನಾಡಿ, ಮೌಲ್ಯವರ್ಧಿತ ಆಹಾರ ಪದಾರ್ಥಗಳನ್ನು ತಯಾರಿಸುವುದರಿಂದ ಉತ್ತಮ ಬೆಲೆ ಮತ್ತು ಉದ್ಯೋಗವಕಾಶಗಳು ದೊರೆಯಲಿದ್ದು, ಈ ದಿಸೆಯಲ್ಲಿ ಹಲಸನ್ನು ಮೌಲ್ಯವ ರ್ದಿತ ಪದಾರ್ಥವಾಗಿ ಬಳಸುವ ಮೂಲಕ ಲಾಭ ಪಡೆಯಬಹುದಾಗಿದೆ ಎಂದೂ ಕರೆಯುತ್ತಾರೆ.

ಇದು ಋತುಕಾಲದಲ್ಲಿ ಎಲ್ಲಾ ವರ್ಗದ ಜನರಿಗೆ ಕಡಿಮೆ ಬೆಲೆಗೆ ಹೇರಳವಾಗಿ ದೊರೆಯುತ್ತದೆ. ಈ ಹಣ್ಣಿನಲ್ಲಿರುವ ಮೂರು ಅಂಗಗಳಾದ ತೊಳೆ, ಬೀಜ ಮತ್ತು ಸಿಪ್ಪೆಯನ್ನು ಸಂಸ್ಕರಿಸಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿದರೆ ಹೆಚ್ಚು ಲಾಭವನ್ನು ಪಡೆಯಬಹುದು ಎಂದು ಹೇಳಿದರು.

Advertisement

ತರಬೇತಿ ಕಾರ್ಯಕ್ರಮದಲ್ಲಿ ಪ್ಯಾಕಿಂಗ್‌, ಲೇಬಲ್ಲಿಂಗ್‌ ವಿಧಾನ ಹಾಗೂ ಹಲಸಿನ ಹಣ್ಣಿನ ಮೌಲ್ಯವ ರ್ದಿತ ಉತ್ಪನ್ನಗಳಾದ ಹಲಸಿನ ಉಪ್ಪಿನಕಾಯಿ, ಚಿಪ್ಸ್‌, ಹಪ್ಪಳ, ಕಟ್ಲೆàಟ್‌, ಹಲಸಿನ ಹಣ್ಣಿನ ಬಜ್ಜಿ, ಪಕೋಡಾ, ಹಲ್ವ, ಜಾಮ್‌, ಹಲಸಿನ ಬೀಜದ ಪಕೋಡಾ ಇನ್ನೂ ಮುಂತಾದ ಪದಾರ್ಥಗಳ ತಯಾರಿಕೆ ವಿಧಾನವನ್ನು ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಲಾಯಿತು. ಸಮಾರೋಪದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಇತರೆ ವಿಜ್ಞಾನಿಗಳು ಹಾಗೂ ಮಹಾವೃಕ್ಷ ಹಲಸು ಬೆಳೆಗಾರರ ಸಂಘದ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next