ಮುಂಬಯಿ: ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ತರುವಂತಹ ಮತ್ತು ಸವಾಲೆನಿಸುವ ವಿದ್ಯಮಾನವೊಂದರಲ್ಲಿ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಶೆಹಜಾದ್ ಪೂನಾವಾಲಾ ಅವರು ರಾಹುಲ್ ಗಾಂಧಿ ಅವರನ್ನು ಆಧ್ಯಕ್ಷರನ್ನಾಗಿ ಆಯ್ಕೆ ಮಾಡುವುದಕ್ಕೆ ವಿರೋಧ ವ್ಯಕ್ತ ಪಡಸಿದ್ದಾರೆ ಮಾತ್ರವಲ್ಲದೆ ಅಭ್ಯರ್ಥಿಯಾಗುವುದಾಗಿ ಘೋಷಿಸಿದ್ದಾರೆ.
ಎಎನ್‌ಐನೊಂದಿಗೆ ಮಾತನಾಡಿದ ಪೂನಾವಾಲಾ ‘ಮುಂದೆ ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಎನ್ನುವುದು ಸೆಲೆಕ್ಷನ್ ಅದು ಎಲೆಕ್ಷನ್ ಅಲ್ಲ,ಸಂವಿಧಾನ ಬದ್ಧವಾಗಿ ನಡೆಯುತ್ತಿಲ್ಲ’ಎಂದಿದ್ದಾರೆ.
‘ನನ್ನ ಪ್ರಕಾರ ಒಂದು ಕುಟುಂಬದಿಂದ ಓರ್ವನಿಗೆ ಮಾತ್ರ ಟಿಕೇಟ್ ನೀಡಬೇಕು. ಅದು ರಾಹುಲ್ ಆಗಲಿ ನಾನಾಗಲಿ ಎಲ್ಲರಿಗೂ ಒಂದೇ ನ್ಯಾಯ ಇರಬೇಕು’ ಎಂದರು.
‘ನನ್ನ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅರಿವಿದೆ. ಆದರೆ ನನಗೆ ಯಾವುದು ತಪ್ಪಿದೆ ಅದರ ವಿರುದ್ಧ ಮಾತನಾಡಿದ ಬಗ್ಗೆ ಹೆಮ್ಮೆ ಇದೆ’ ಎಂದರು.
ಪೂನಾವಾಲಾ ಮಹಾರಾಷ್ಟ್ರ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿರುವ ಪೂನಾವಾಲಾ ಬುಧವಾರ ರಾಹುಲ್ ಗಾಂಧಿಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಎಂದು ಪತ್ರವನ್ನೂ ಬರೆದಿದ್ದರು.
ಸರಿಯಾದ ಕ್ರಮದಲ್ಲಿ ಅಧ್ಯಕ್ಷ ಗಾದಿಗೆ ಚುನಾವಣೆ ನಡೆದರೆ ನಾನು ಸ್ಪರ್ಧಿಸುವುದಾಗಿ ಪೂನಾವಾಲಾ ಹೇಳಿದ್ದಾರೆ.