Advertisement
ಬೆಳ್ತಂಗಡಿ: ರಾಷ್ಟ್ರೀಯ ಉದ್ಯಾನ ದಂಚಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಬಹುತೇಕ ಗ್ರಾಮಗಳ ಅನೇಕರು ವಿದ್ಯುತ್, ರಸ್ತೆ, ಹಕ್ಕುಪತ್ರಗಳಿಗಾಗಿ ಜೀವನಯಾತ್ರೆಯ ಅರ್ಧ ಆಯುಷ್ಯವನ್ನ ಕಂದಾಯ, ಅರಣ್ಯ ಇಲಾಖೆಯನ್ನೇ ಸುತ್ತಿ ಕಳೆದಿದ್ದಾರೆ. ಮಕ್ಕಳ ಜೀವನವಾದರೂ ಸುಖಮಯವಾಗಲಿ ಎಂಬ ಆಶಯದಿಂದ ಮೂಲಸೌಕರ್ಯಕ್ಕಾಗಿ ಹಾತೊರೆ ಯುತ್ತಿರುವ ಗ್ರಾಮಗಳಲ್ಲೊಂದಾದ, ತಾಲೂಕು ಕೇಂದ್ರದಿಂದ 12ಕಿ.ಮೀ. ದೂರವಿರುವ ನಾವೂರು ಗ್ರಾಮವಾಸಿಗಳ ಕಣ್ಣಾಮಚ್ಚಾಲೆ ಬದುಕಿನ ವರದಿಯಿದು.
Related Articles
Advertisement
13-14ನೇ ಬ್ಲಾಕ್ ಸಂಪರ್ಕವೇ ಇಲ್ಲ :
ನಾವೂರು ಗ್ರಾಮದಲ್ಲಿ ಒಟ್ಟು ಎರಡೇ ಬ್ಲಾಕ್‌ಗಳು. 13ನೇ ಬ್ಲಾಕ್ ಮಂದಿ 14ನೇ ಬ್ಲಾಕ್ ಅಂದರೆ ನಾವೂರು ಪೇಟೆಗೆ ಬರಲು 3 ಕಿ.ಮೀ. ಸುತ್ತಿ ಬಳಸಿ ಬರುವ ಪರಿಸ್ಥಿತಿ. ಆದರೆ ಅಬ್ಬನ್‌ಕೆರೆಯಿಂದ ಬಡೆಕಾವುಗುತ್ತು ಮಾರ್ಗವಾಗಿ ಕುಮರಾಜೆ ಯಿಂದ ನಾವೂರು ಗುತ್ತು ಗೋಪಾಲಕೃಷ್ಣ ದೇವಸ್ಥಾನ ರಸ್ತೆಯಾಗಿ ರಸ್ತೆ ಅಭಿವೃದ್ಧಿಯಾಗಬೇಕಿದೆ. ಇದೇ ರಸ್ತೆಯಲ್ಲಿ ಕುಮರಾಜೆ ಬಳಿ ಸೇತುವೆ ನಿರ್ಮಾಣವಾಗದೆ ಪ್ರತೀ ಮಳೆಗಾಲದಲ್ಲಿ ಸಂಪರ್ಕ ಕಡಿತಗೊಳ್ಳುತ್ತಿದೆ. ಹೀಗಾಗಿ ಸೇತುವೆ ಅವಶ್ಯವಾಗಿ ನಿರ್ಮಾಣವಾಗಬೇಕಿದೆ. ಮತ್ತೂಂದೆಡೆ ಕುಂಡಡ್ಕದಿಂದ ನನೊìಟ್ಟು ರಸ್ತೆ, ಬೂರುಮೇಲು ರಸ್ತೆ ಹಾಗೂ ಸುಳೊÂàಡಿ ಬಳಿ ಸೇತುವೆ ನಿರ್ಮಾಣವಾದಲ್ಲಿ ಸುಮಾರು 15 ಮನೆಗಳಿಗೆ ವರದಾನವಾಗಲಿದೆ.
ರುದ್ರಭೂಮಿ ಅಭಿವೃದ್ಧಿ :
ಪ.ಜಾತಿ, ಪ.ಪಂಗಕ್ಕೆ 70 ಸೆಂಟ್ಸ್ ಮೀಸಲಾದ ರುದ್ರಭೂಮಿ ಜಾಗ ಈವರೆಗೆ ಅಭಿವೃದ್ಧಿ ಕಂಡಿಲ್ಲ. ಇದರ ಅಭಿವೃದ್ಧಿಯಾಗಬೇಕಿದ್ದಲ್ಲಿ ಕೈಕಂಬದಿಂದ ನಾವೂರು ಪ.ಜಾತಿ/ಪ.ಪಂಗಡದ ಕಾಲನಿಗೆ ರಸ್ತೆ ನಿರ್ಮಾಣವಾಗಬೇಕಿದೆ. ಹಾಗಾದಲ್ಲಿ ಮುಂದಿನ ಪ್ರಗತಿ ಸಾಧ್ಯವಾಗಲಿದೆ.
ಕಿರ್ನಡ್ಕ ಘನತ್ಯಾಜ್ಯ ಘಟಕ :
ಗ್ರಾಮ ಬೆಳೆದಂತೆ ತ್ಯಾಜ್ಯ ಸಂಗ್ರಹಣೆ ಹಾಗೂ ಅದರ ನಿರ್ವಹಣೆ ಸವಾಲಾಗಿದೆ. ಹೀಗಾಗಿ ಭವಿಷ್ಯದಲ್ಲಿ ಸಮಸ್ಯೆ ತಲೆದೋರದಂತೆ ಕಿರ್ನಡ್ಕದಲ್ಲಿ 1 ಎಕ್ರೆ ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಆದರೆ ಅಲ್ಲಾಜೆಯಿಂದ ಕರ್ನಿನಡ್ಕಕ್ಕ ತೆರಳುವ 2 ಕಿ.ಮೀ. ರಸ್ತೆ ಕಾಂಕ್ರೀಟ್ ರಸ್ತೆಯ ಬೇಡಿಕೆ ಹಾಗೆ ಇದೆ. ಇದರೊಂದಿಗೆ ಸಮೀಪದ ಹೊಡಿಕ್ಕಾರು-ಮನ್ನಲಿಕೆ ರಸ್ತೆ, ನಾವೂರು ಪಲಿಕೆ ಎಸ್ಸಿ-ಎಸ್ಟಿ ಕಾಲನಿ ರಸ್ತೆ ಹಾಗೂ ದಾರಿದೀಪ ನಿರ್ಮಾಣವಾಗಬೇಕಿದೆ. ಕಿರ್ನಡ್ಕ ಕಾಲನಿ ರಸ್ತೆ, ಜನತಾ ಕಾಲನಿ ರಸ್ತೆಗಳು ಅಭಿವೃದ್ಧಿಗಾಗಿ ಕಾಯುತ್ತಿವೆ. ಬಹುತೇಕ ಮಣ್ಣಿನ ರಸ್ತೆಗಳಾಗಿದ್ದು ಕಾಂಕ್ರೀಟ್ ಅಳಡಿಸಿದರಷ್ಟೆ ಸಮಸ್ಯೆ ನೀಗಲಿದೆ. ಕಿರ್ನಡ್ಕ ಕಾಲನಿಯಿಂದ ಕೋಡಿ ಹಡೀಲು ರಸ್ತೆಯಾಗಿ ಕನ್ಯಾಡಿ ಗ್ರಾಮದ ನೇರೋಲ್ದ ಪಲ್ಕೆ ಎಸ್ಸಿ-ಎಸ್ಟಿ ಕಾಲನಿ ಸಂಪರ್ಕಕ್ಕೆ 3 ಕಿ.ಮೀ. ರಸ್ತೆಯಾದಲ್ಲಿ ಎರಡು ಗ್ರಾಮ ಸಂಪರ್ಕವಾಗಲಿದೆ.
25 ವರ್ಷ ಹಳೇ ಅಂಗನವಾಡಿ ಕಟ್ಟಡ :
ಕುಂಡಡ್ಕ ಪರಿಶಿಷ್ಟ ಪಂಗಡ ಕಾಲನಿಯಲ್ಲಿರುವ ಅಂಗನವಾಡಿ ಕಟ್ಟಡ 25 ವರ್ಷ ಪೂರೈಸಿದೆ. 18 ಮಕ್ಕಳಿರುವ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡದ ಆವಶ್ಯಕತೆಯಿದೆ.
ಕುಂಡಡ್ಕದಿಂದ ನನೊìಟ್ಟು ಕಾರಿಂಜ ರಸ್ತೆಯ ನನೊìಟ್ಟು ಬಳಿ ಸೇತುವೆಯಾದಲ್ಲಿ ಕಾರಿಂಜ ಬೈಲಿಗೆ ಸಂಪರ್ಕಕ್ಕೂ ಅನುಕೂಲವಾಗಲಿದೆ. ಅಂಗನವಾಡಿ ಮಕ್ಕಳಿಗೆ ಅನುಕೂಲವಾಗಲಿದೆ.
ಸಾರ್ವಜನಿಕ ಆಸ್ಪತ್ರೆ :
ಗ್ರಾಮದಲ್ಲಿರುವ ಎಎನ್‌ಎಂ ಕೇಂದ್ರ ಶಿಥಿಲಾವಸ್ಥೆಯಲ್ಲಿದ್ದು ಆವರಣಗೋಡೆಯಿಲ್ಲ. ತುರ್ತು ಸಂದರ್ಭಗಳಲ್ಲಿ 12 ಕಿ.ಮೀ. ದೂರುದ ಬೆಳ್ತಂಗಡಿ ಆಸ್ಪತ್ರೆ ಇಲ್ಲವೇ 5 ಕಿ.ಮೀ. ದೂರದ ಇಂದಬೆಟ್ಟು ಪ್ರಾ.ಆ.ಕೇಂದ್ರಕ್ಕೆ ತೆರಳಬೇಕಿದೆ.
25 ಮನೆಗಳಿಗೆ ಸಿಕ್ಕಿಲ್ಲ ಹಕ್ಕುಪತ್ರ :
ಎರ್ಮೆಲೆ ಸಮೀಪ ಕುದುರೇಮುಖ ರಾಷ್ಟ್ರೀಯ ಉದ್ಯಾನದಂಚಿನಲ್ಲಿರುವ ಪ.ಜಾತಿ/ಪಂಗಡದ 25 ಮನೆಗಳಿವೆ. ಇವರಿಗೆ ಮೂಲಸೌಕರ್ಯವಿಲ್ಲ ಜತೆಗೆ ಹಕ್ಕುಪತ್ರವೂ ಸಿಕ್ಕಿಲ್ಲ. ಅಪಘಾತ ವಲಯ
ನಾವೂರು ಗ್ರಾಮಕ್ಕೆ ತೆರಳುವ ಪಿ.ಡಬ್ಲ್ಯುಡಿ ಇಲಾಖೆಯ ಮುಖ್ಯ ರಸ್ತೆಯ ಮುರ ಎಂಬಲ್ಲಿ ಕಿರು ಸೇತುವೆ ಅಪಘಾತವಲಯವಾಗಿದೆ.ಸುಸಜ್ಜಿತ ಸೇತುವೆಯ ಬೇಡಿಕೆ ವ್ಯಕ್ತವಾಗಿದೆ.
ಎರಡು ಗ್ರಾಮ ಸಂಪರ್ಕಕ್ಕೆ ಬೇಕಿದೆ ರಸ್ತೆ :
ಸುಳ್ಯೋಡಿ ಶಾಲೆಯಿಂದ ಬರಮೇಲು ಲಾವುದಡಿಯಾಗಿ ನಡ ಗ್ರಾಮದ ಮೂಡಾಯಿಬೆಟ್ಟು ಶಾಲೆಗೆ ಸಂಪರ್ಕ ಕಲ್ಪಿಸುವ 5 ಕಿ.ಮೀ. ರಸ್ತೆ ತೀರ ಹದಗೆಟ್ಟಿದೆ. ಹೀಗಾಗಿ ಡಾಮರು ರಸ್ತೆ ನಿರ್ಮಾಣವಾದಲ್ಲಿ ನಾವೂರು ಮತ್ತು ನಡ ಗ್ರಾಮ ಸಂಪರ್ಕಕ್ಕೆ 8 ಕಿ.ಮೀ. ಸುತ್ತಿಬಳಸುವ ಸಂಕಷ್ಟ ತಪ್ಪಲಿದೆ.
ಗ್ರಾಮದ ಅಗತ್ಯಗಳು :
- ಗ್ರಾಮದ 10ಕ್ಕೂ ಅಧಿಕ ರಸ್ತೆಗಳಿಗೆ ದಾರಿದೀಪ
- ನಾವೂರು ಪ್ರೌಢಶಾಲೆಗೆ ಹೆಚ್ಚುವರಿ ಕೊಠಡಿ
- ನಾವೂರು ಪ್ರಾಥಮಿಕ, ಪ್ರೌಢ ಶಾಲೆಗೆ ಶೌಚಾಲಯ
- ರಾಷ್ಟ್ರೀಕೃತ ಬ್ಯಾಂಕ್ ಎಟಿಎಂ
- ಸಾರ್ವಜನಕ ಆಟದ ಮೈದಾನ