Advertisement

ಸರಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಬೇಸರ

04:31 PM Nov 01, 2021 | Team Udayavani |

ಸಿಂಧನೂರು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬರೋಬ್ಬರಿ ಹದಿನೇಳು ವೈದ್ಯರಿದ್ದರೂ ಕೂಡ ಬಡವರು ವೈದ್ಯಕೀಯ ಸೇವೆಗೆ ಪರದಾಡುವಂತಾಗಿದೆ. ಯಾವುದಕ್ಕೂ ಕಡಿಮೆ ಇಲ್ಲವೆಂಬಂತೆ ಅತ್ಯಾಧುನಿಕ ಸೌಲಭ್ಯ ಇದ್ದರೂ ಬಡ ರೋಗಿಗಳಿಗೆ ದೊರೆಯದಾಗಿದೆ.

Advertisement

ಐಸಿಯು ವೆಂಟಿಲೇಟರ್‌ ಒಳಗೊಂಡ ಸೇವೆ ಕಲ್ಪಿಸುವ ಏಕೈಕ ಆಸ್ಪತ್ರೆ ಎಂಬ ಹಿರಿಮೆ ಕೂಡ ಸರಕಾರಿ ಆಸ್ಪತ್ರೆಗಿದ್ದು, ಒಂದು ಕೋಟಿ ರೂ. ಹೆಚ್ಚಿನ ವೈದ್ಯಕೀಯ ಉಪಕರಣಗಳು ಇಲ್ಲಿ ಲಭ್ಯ ಇವೆ. ಆದರೂ ಸಮರ್ಪಕ ಸೇವೆ ದೊರೆಯುತ್ತಿಲ್ಲವೆಂಬ ಕೊರಗು ಜನರಲ್ಲಿದೆ.

ಎಲ್ಲ ವೈದ್ಯರೂ ಲಭ್ಯ

ಕಿವಿ, ಮೂಗು ಗಂಟಲು ತಜ್ಞರು, ಚರ್ಮರೋಗ, ಲೈಂಗಿಕ ತಜ್ಞರು, ಎಲುಬು ಮತ್ತು ಕೀಲು ಮೂಳೆ ತಜ್ಞರು, ದಂತ ವೈದ್ಯರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಕಣ್ಣಿನ ತಜ್ಞರು, ಶಸ್ತ್ರ ಚಿಕಿತ್ಸಕರು, ಮಧುಮೇಹ ಮತ್ತು ಹೃದಯರೋಗ ತಜ್ಞರು, ಐಸಿಯು ಘಟಕಕ್ಕೆ ಬೇಕಾದ ಎಂಬಿಬಿಎಸ್‌ ವೈದ್ಯರು ಸೇರಿದಂತೆ ಅಸಾಂಕ್ರಾಮಿಕ ಕಾಯಿಲೆ ತಪಾಸಣೆಗೂ ಕೂಡ ಇಲ್ಲಿ ವೈದ್ಯರಿದ್ದಾರೆ. ಈ ಎಲ್ಲ ವಿಭಾಗ ಸೇರಿ 17 ವೈದ್ಯರು ಸದ್ಯ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಇನ್ನುಳಿದಂತೆ 42 ಡಿ ಗ್ರೂಪ್‌ ನೌಕರರು, 18 ಕಾಯಂ ಸ್ಟಾಫ್ ನಸ್‌ ìಗಳು, ಗುತ್ತಿಗೆ ಆಧಾರಿತ ಎಂಟು ನರ್ಸ್‌ಗಳನ್ನು ಒಳಗೊಂಡು ಇಲ್ಲಿನ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ವೈದ್ಯಕೀಯ ಸಿಬ್ಬಂದಿ, ಉಪಕರಣ ಕೊರತೆ ಇಲ್ಲದಿದ್ದರೂ ಸೇವೆಗೆ ಅಭಾವ ಸೃಷ್ಟಿಯಾಗಿದೆ.

ಚಿಕಿತ್ಸೆಗೆ ಹಿಂದೇಟು

Advertisement

ಇನ್ನು ವೈದ್ಯರು ತಮ್ಮ ಜವಾಬ್ದಾರಿ ಅರಿತು ಚಿಕಿತ್ಸೆ ನೀಡುತ್ತಿಲ್ಲ. ಮಕ್ಕಳ ತುರ್ತು ಚಿಕಿತ್ಸಾ ಘಟಕ ಇಲ್ಲಿ ಮುನ್ನಡೆಸಬಹುದು. ಅದಕ್ಕೂ ಮನಸ್ಸು ಮಾಡಿಲ್ಲ. ಇನ್ನು ಚರ್ಮರೋಗ ತಜ್ಞರು, ಎಲುಬು ಮೂಳೆ ತಜ್ಞರು ಸೇರಿ ಇತರೆ ವೈದ್ಯರು ಹೊರರೋಗಿಗಳ ತಪಾಸಣೆಗೆ ಸೀಮಿತವಾಗಿದ್ದಾರೆ. ಇರುವ ವೈದ್ಯಕೀಯ ಉಪಕರಣ ಬಳಸಿ ಶಸ್ತ್ರಚಿಕಿತ್ಸೆ ಸೌಲಭ್ಯ ಕಲ್ಪಿಸುವ ಮನಸ್ಸು ಮಾಡಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಎಲ್ಲ ವೈದ್ಯರನ್ನು ಸರಕಾರ ಕೊಟ್ಟಿರುವುದರಿಂದ ಬಡವರಿಗೆ ಉಚಿತ ಚಿಕಿತ್ಸೆ ದೊರೆಯಬೇಕು. ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡುವ ಪ್ರವೃತ್ತಿಯನ್ನು ನಿಯಂತ್ರಿಸಲು ಮೇಲಾಧಿಕಾರಿಗಳು ಗಮನಹರಿಸಬೇಕು. -ಎಚ್‌.ಎನ್‌. ಬಡಿಗೇರ್‌, ಪ್ರಗತಿಪರ ಹೋರಾಟಗಾರ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next