Advertisement

ಮುಲ್ಕಿಯಲ್ಲಿ ಪಾರ್ಕಿಂಗ್‌ ಚಿಂತೆ

10:50 AM Sep 09, 2018 | Team Udayavani |

ಮುಲ್ಕಿ: ಹೆದ್ದಾರಿ ಕಾಮಗಾರಿ ವಿಸ್ತರಣೆಯಿಂದ ಮೂಲ್ಕಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಲು ನಗರ ಪಂಚಾಯತ್‌ ನಿವೇಶನದ ಕೊರತೆ ಅನುಭವಿಸುತಿದೆ. ಈಗ ಕಾರು ಪಾರ್ಕಿಂಗ್‌ ಮಾಡುತ್ತಿದ್ದ ಹೆದ್ದಾರಿಯ ಸರ್ವಿಸ್‌ ರಸ್ತೆ ಪಕ್ಕದ ಜಾಗದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಪಾರ್ಕಿಂಗ್‌ಗೂ ಸಮಸ್ಯೆಯಾಗಿದೆ.

Advertisement

ಕೆಲವು ದಿನಗಳ ಹಿಂದೆ ಹೆದ್ದಾರಿ ಗುತ್ತಿಗೆದಾರ ಸಂಸ್ಥೆ ಅಧಿಕಾರಿಗಳು ಚರಂಡಿ ಕಾಮಗಾರಿ ನಡೆಸಿದ ಅನಂತರ ಕಾರು ನಿಲ್ಲಿಸಲು ಸೂಕ್ತ ಜಾಗ ಮಾಡಿಕೊಡುವುದಾಗಿ ನ.ಪಂ. ಅಧ್ಯಕ್ಷರ ಸಮಕ್ಷಮದಲ್ಲಿ ತಿಳಿಸಿದ್ದರೂ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಕಾರು ಚಾಲಕರು ತಿಳಿಸಿದ್ದಾರೆ. 

ರಸ್ತೆಯಲ್ಲೇ ಪಾರ್ಕಿಂಗ್‌
ಮೂಲ್ಕಿಯಿಂದ ಸರ್ವಿಸ್‌ ರೋಡ್‌ ಮೂಲಕ ಕಿನ್ನಿಗೋಳಿ ಮಾರ್ಗಕ್ಕೆ ಹೋಗುತ್ತಿದ ವಿಜಯ ಬ್ಯಾಂಕ್‌ ಎದುರಿನ ರಸ್ತೆ ಈಗ ಪಾರ್ಕಿಂಗ್‌ ಸ್ಥಳವಾಗಿ ಪರಿವರ್ತನೆಯಾಗಿದೆ. 

ಜಮೀನು ಸಿಗದೆ ಸಮಸ್ಯೆ
ಬಸ್‌ ನಿಲ್ದಾಣಕ್ಕೆ ಸರಕಾರದಿಂದ ಹಣ ಬಿಡುಗಡೆಯಾಗಿದೆ. ಈಗಿರುವ ಬಸ್‌ ನಿಲ್ದಾಣದ ಸಮೀಪ ಮತ್ತೂಂದು ನಿಲ್ದಾಣ ನಿರ್ಮಾಣಕ್ಕೆ ಜಮೀನು ಸಿಗದೇ ತೊಂದರೆಯಾಗಿದೆ. ಬಸ್‌ ನಿಲ್ದಾಣ ಸ್ಥಳಾಂತರಿಸುವ ಬಗ್ಗೆ ತೀರ್ಮಾನ ನಡೆದಿಲ್ಲ.
ಸುನಿಲ್‌ ಆಳ್ವ ಅಧ್ಯಕ್ಷರು, ನಗರ ಪಂಚಾಯತ್‌ ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next