Advertisement
ನವಗ್ರಾಮ ಅತೀ ಎತ್ತರದ ಪ್ರದೇಶದಲ್ಲಿದ್ದು, ಸುಮಾರು 60-70 ರಷ್ಟು ಮನೆಗಳಿವೆ. ಇಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕದ ಮೂಲಕ ಪಂಚಾಯತನಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಅದು ಕೂಡ ಶೇಡಿ ಮಣ್ಣು ಮಿಶ್ರಿತ ನೀರು. ಇದೇ ನೀರನ್ನು ಇಲ್ಲಿನ ಜನ ನಂಬಿದ್ದಾರೆ. ಆದರೆ ಹಲವು ಬಾರಿ ವಿದ್ಯುತ್ ಸಮಸ್ಯೆ, ಪೈಪ್ ಸೋರುವಿಕೆ, ಪಂಪ್‌ಸೆಟ್ ದುರಸ್ತಿ ಸೇರಿದಂತೆ ಅನೇಕ ಕಾರಣಗಳಿಂದ ಕೆಲವೊಮ್ಮೆ ನೀರು ಪೂರೈಸುವುದಿಲ್ಲ. ಈ ವೇಳೆ ಗ್ರಾಮಸ್ಥರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಇದೆ. ಇನ್ನು ಕೆಲವರು 400 ರಿಂದ 450 ರೂ.ಗಳನ್ನು ನೀಡಿ ವಾಹನದ ಮೂಲಕ ನೀರನ್ನು ತರಿಸಿಕೊಳ್ಳುತ್ತಾರೆ. ಆದರೆ ಇದು ಬಹುತೇಕ ಬಡವರಿಂದ ಸಾಧ್ಯವಿಲ್ಲದ ಮಾತು. ಹೀಗಾಗಿ ದೂರದ ಬಾವಿಗಳಿಂದ ನೀರು ತರುವ ಪರಿಸ್ಥಿತಿ ಇದೆ. ಆ ನಂತರ ಸೂಚನೆ ಮೇರೆಗೆ ಮನೆಗೆ ತಲಾ 5 ಕೊಡ ನೀರು ಪೂರೈಸಿದ್ದಾರೆ.
Related Articles
Advertisement
ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಂತೆ ಕುಡಿಯುವ ನೀರಿಗಾಗಿ ಟ್ಯಾಂಕ್‌ಗೆ ಪ್ರತಿದಿನ ನೀರನ್ನು ಪೂರೈಕೆ ಮಾಡಿ ಮನೆ ಸಂಪರ್ಕದ ನಲ್ಲಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಸುವಂತೆ ಸೂಚಿಸಿದರು.
ಓಟ್ಟಾರೆ ನಾಲ್ಕು ದಿನಗಳಿಂದ ನೀರಿಗಾಗಿ ಪರದಾಡುತ್ತಿದ್ದ ನವಗ್ರಾಮದ ಗ್ರಾಮಸ್ಥರಿಗೆ ತಾತ್ಕಾಲಿಕ ಪರಿಹಾರ ದೊರೆತಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂಬುದು ಕಾದು ನೋಡಬೇಕಿದೆ.
ಬೊರ್‌ವೆಲ್‌ನಿಂದ ನೀರನ್ನು ಪಂಪ್ ಮಾಡಿ ಓವರ್ ಹೆಡ್ ಟ್ಯಾಂಕ್ ಮೂಲಕ ಮನೆಗಳಿಗೆ ನೀರು ಸರಬರಾಜಾಗುತ್ತದೆ. ಆದರೆ ಪಂಪ್ ಕೆಟ್ಟು ಹೋದ ಕಾರಣ ನೀರು ಪೂರೈಕೆಯಾಗಿರಲಿಲ್ಲ. ಇದೀಗ ಸರಿಪಡಿಸಲಾಗಿದ್ದು ಎಂದಿನಂತೆ ನೀರು ಪೂರೈಕೆಯಾಗಲಿದೆ. -ರೇಖಾ ನಾಯಕ, ಗ್ರಾಪಂ ಅಭಿವೃದ್ಧಿ ಅಧಿಕಾರಿ