Advertisement

ಏನಾಗಿತ್ತು?  ಚಂದ್ರಯಾನ 2 ರಾಕೆಟ್, ಕೊನೇ ಕ್ಷಣದಲ್ಲಿ ದೋಷ ಪತ್ತೆ ಹಚ್ಚಿದ್ದು ನಮ್ಮ ಅದೃಷ್ಟ!

09:41 AM Jul 16, 2019 | Nagendra Trasi |

ನವದೆಹಲಿ:ಇಡೀ ಜಗತ್ತೇ ಕಾತರದಿಂದ ಕಾಯುತ್ತಿದ್ದ ಇಸ್ರೋದ ಚಂದ್ರಯಾನ 2 ಬಾಹ್ಯಾಕಾಶ ಯೋಜನೆ ಮುಂದೂಡಿಕೆಯಾಗಿದೆ. ನಿಗದಿಯಂತೆ ಸೋಮವಾರ ಮುಂಜಾನೆ 2.51 ನಿಮಿಷಕ್ಕೆ ಚಂದ್ರಯಾನ 2 ರಾಕೆಟ್ ನಭೋ ಮಂಡಲಕ್ಕೆ ನೆಗೆಯಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಉಡ್ಡಯನ ಮುಂದೂಡಿಕೆಯಾಗಿದೆ. ಏತನ್ಮಧ್ಯೆ ಉಡ್ಡಯನಕ್ಕೆ ತೊಂದರೆಯಾದ ಅಂಶಗಳೇನು, ಕೊನೇ ಕ್ಷಣದಲ್ಲಿ ದೋಷ ಪತ್ತೆಯಾಗಿದ್ದರಿಂದ ಆದ ಲಾಭವೇನು ಎಂಬಿತ್ಯಾದಿ ಪ್ರಮುಖ ಅಂಶಗಳು ಇಲ್ಲಿವೆ.

Advertisement

  • ಚಂದ್ರಯಾನ 2 ರಾಕೆಟ್ ಮುಂಜಾನೆ 2.51ಕ್ಕೆ ಉಡ್ಡಯನವಾಗುವ ಸುಮಾರು 56 ನಿಮಿಷ 24 ಸೆಕೆಂಡ್ಸ್ ಹೊತ್ತಿನಲ್ಲಿಯೇ ಉಡಾವಣೆ ನಿಲ್ಲಿಸಲಾಯಿತು. ಮೂಲಗಳ ಪ್ರಕಾರ, ರಾಕೆಟ್ ಉಡ್ಡಯನದ ಕೊನೆಯ ಹಂತದ ಮೊದಲು(ಕ್ರಯೋಜೆನಿಕ್) ತಾಂತ್ರಿಕ ದೋಷ ಪತ್ತೆಯಾಗಿತ್ತು.
  • ಚಂದ್ರಯಾನ 2 ರಾಕೆಟ್ ಉಡಾವಣೆಗೂ ಒಂದು ಗಂಟೆ ಮೊದಲು ಲಿಕ್ವಿಡ್ ಹೈಡ್ರೋಜನ್ ಇಂಧನವನ್ನು ತುಂಬಿಸಲಾಗಿದೆ. ಇನ್ನೇನು ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಇಸ್ರೋ ಘೋಷಿಸಿತ್ತು.
  • ಉಡಾವಣೆಗೆ ಒಂದು ಗಂಟೆ ಮುನ್ನ ಚಂದ್ರಯಾನ 2 ಉಪಕರಣ ಹೊತ್ತೊಯ್ಯಬಲ್ಲ ರಾಕೆಟ್ ನಲ್ಲಿ ತಾಂತ್ರಿಕ ದೋಷ ಪತ್ತೆಯಾಗಿತ್ತು. ರಾಕೆಟ್ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದ ಪರಿಣಾಮ ಉಡ್ಡಯನಕ್ಕೆ ಬ್ರೇಕ್ ಹಾಕಲಾಗಿತ್ತು.
  • ರಾಕೆಟ್ ಉಡ್ಡಯನಕ್ಕೂ ಮುನ್ನ ತಾಂತ್ರಿಕ ದೋಷ ಪತ್ತೆಹಚ್ಚಿದ್ದು ನಿಜಕ್ಕೂ ಅದೃಷ್ಟವೆಂದೇ ಹೇಳಬೇಕು ಎಂಬುದಾಗಿ ಇಸ್ರೋ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಉಡ್ಡಯನಕ್ಕೂ ಮುನ್ನ ಅದು ನಮ್ಮ ಕಂಟ್ರೋಲ್ ನಲ್ಲೇ ಇತ್ತು. ಇದರಿಂದಾಗಿ ರಾಕೆಟ್ ಮತ್ತು ಸೆಟಲೈಟ್ ಸುರಕ್ಷಿತವಾಗಿರಲು ಸಹಕಾರಿಯಾಗಿದೆ.
  • ಜಿಎಸ್ ಎಲ್ ವಿ ಮಾರ್ಕ್ ||| ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆರ್ಬಿಟರ್, ಲ್ಯಾಂಡರ್ ಹಾಗೂ ರೋವರ್ ಅನ್ನು 2.51ಕ್ಕೆ ಹೊತ್ತೊಯ್ಯಬೇಕಿತ್ತು.
  • ನಾವು ಹಲವಾರು ತಾಂತ್ರಿಕ ನೆಲೆಯಲ್ಲಿ ಪರಿಶೀಲನೆ ನಡೆಸಬೇಕಾಗಿದೆ. ಹೀಗಾಗಿ ಮುಂದಿನ ದಿನಾಂಕಕ್ಕೆ ಹಲವು ವಾರ ಅಥವಾ ಒಂದು ತಿಂಗಳ ಕಾಲಾವಕಾಶ ಬೇಕಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ತಿಳಿಸಿದ್ದಾರೆ.
  • ಚಂದ್ರಯಾನ 2 ಉಡ್ಡಯನ ಮುಂದೂಡಿಕೆಯಾಗಿದ್ದು, ಸರಿಯಾದ ನಿರ್ಧಾರವಾಗಿದೆ. ನಮಗೆ ಇನ್ನು ಇಂತಹ ಬಹುದೊಡ್ಡ ಯೋಜನೆಯ ಅವಕಾಶ ಯಾವುದೂ ಸಿಗುವುದಿಲ್ಲ ಎಂಬುದು ಡಿಆರ್ ಡಿಒನ ಮಾಜಿ ನಿರ್ದೇಶಕ ರವಿ ಗುಪ್ತಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
  • ತಾಂತ್ರಿಕ ದೋಷ ಕಂಡುಬಂದಿರುವ ರಾಕೆಟ್ ಅನ್ನು ಬೇರ್ಪಡಿಸಿ, ಪ್ರಯೋಗಾಲಯಕ್ಕೆ ಕೊಂಡೊಯ್ದು, ಅದಕ್ಕೆ ತುಂಬಿಸಿದ್ದ ಇಂಧನ ಖಾಲಿಮಾಡಬೇಕು.
  • ಜಿಎಸ್ ಎಲ್ ವಿ ಮಾರ್ಕ್ ||| (ಬಾಹುಬಲಿ) ಭಾರತದ ಅತ್ಯಂತ ಪ್ರಭಾವಶಾಲಿ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದು ಸುಮಾರು 15 ಅಂತಸ್ತಿನ ಕಟ್ಟಡದಷ್ಟು ಎತ್ತರವಾಗಿದೆ.
  • ಚಂದ್ರಯಾನ 2 ಬಾಹ್ಯಾಕಾಶ ನೌಕೆ ರಾಕೆಟ್ ಮೂಲಕ ಉಡ್ಡಯನಗೊಂಡ ಸುಮಾರು 54 ದಿನಗಳ ನಂತರ ಇದು ಚಂದ್ರನನ್ನು ತಲುಪಲಿದೆ. ಭೂಮಿಗೂ, ಚಂದ್ರನಿಗೂ ಯಾವ ಸಂಬಂಧವಿದೆ, ಚಂದ್ರನ ಅಂಗಳದಲ್ಲಿ ನೀರಿದೆಯಾ? ಅಲ್ಲದೇ ಇದುವರೆಗೂ ಯಾರ ಕಣ್ಣಿಗೂ ಕಾಣಿಸದ ದಕ್ಷಿಣ ಧ್ರುವದ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಇಸ್ರೋ ಈ ಚಂದ್ರಯಾನ 2 ಯೋಜನೆಗೆ ಕೈಹಾಕಿತ್ತು.
Advertisement

Udayavani is now on Telegram. Click here to join our channel and stay updated with the latest news.

Next