ಜಲ್ಪೈಗುರಿ: ಸಾಮಾನ್ಯವಾಗಿ ಆಸ್ಟ್ರೇಲಿಯಾದಲ್ಲಿ ಕಂಡುಬರುವ ಕಾಂಗರೂಗಳು ಭಾರತದ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾಗಿದೆ. ಪಶ್ಚಿಮ ಬಂಗಾಳದ ಜಲ್ಪೈಗುರಿಯ ಗಜೋಲ್ಡೊಬಾ ಬಳಿ ಶುಕ್ರವಾರ ರಾತ್ರಿ ಎರಡು ಗಾಯಗೊಂಡ ಕಾಂಗರೂಗಳನ್ನು ರಕ್ಷಿಸಿದ ಗಂಟೆಗಳ ನಂತರ, ಜಲ್ಪೈಗುರಿಯ ದಬ್ಗ್ರಾಮ್ ಅರಣ್ಯ ವ್ಯಾಪ್ತಿಯ ಫರಾಬರಿ-ನೇಪಾಲಿ ಪ್ರದೇಶದಲ್ಲಿ ಮತ್ತೊಂದು ಕಾಂಗರೂವನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ.
ಬೈಕುಂತಪುರ ಅರಣ್ಯ ವಿಭಾಗದ ವ್ಯಾಪ್ತಿಯ ಬೆಳಕೋಬಾ ಅರಣ್ಯ ವ್ಯಾಪ್ತಿಯ ರೇಂಜರ್ ಸಂಜಯ್ ದತ್ತಾ ಮಾತನಾಡಿ, ಈ ಕಾಂಗರೂಗಳು ಎಲ್ಲಿವೆ, ಯಾರು ಮತ್ತು ಹೇಗೆ ಕಾಡಿಗೆ ಕರೆತಂದರು ಎಂಬುದನ್ನು ಪತ್ತೆಹಚ್ಚಲು ನಾವು ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಅವುಗಳನ್ನು ತಂದ ಹಿಂದಿನ ಕಾರಣವನ್ನು ಕಂಡುಹಿಡಿಯುತ್ತೇವೆ” ಎಂದರು.
ಶುಕ್ರವಾರ ರಾತ್ರಿ ಅರಣ್ಯಾಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ಎರಡು ಕಾಂಗರೂಗಳು ಪತ್ತೆಯಾಗಿದ್ದವು. ಪ್ರಾಣಿಗಳ ದೇಹದ ಮೇಲೆ ಕೆಲವು ಗಂಭೀರವಾದ ಗಾಯಗಳಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವುಗಳನ್ನು ತಕ್ಷಣವೇ ಬೆಂಗಾಲ್ ಸಫಾರಿ ಪಾರ್ಕ್‌ಗೆ ತರಲಾಯಿತು ಎಂದು ದತ್ತಾ ಹೇಳಿದರು.
ಇದನ್ನೂ ಓದಿ:ಶ್ರೀಲಂಕಾದಲ್ಲಿ ಹಿಂಸಾಚಾರ; ಚೀನಾದಲ್ಲಿ ಆಹಾರವಿಲ್ಲದೇ ಲಕ್ಷಾಂತರ ಜನರು ಕಂಗಾಲು
“ಕಾಂಗರೂಗಳ ದೇಹದಲ್ಲಿ ಕೆಲವು ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಾಲ್ ಸಫಾರಿ ಪಾರ್ಕ್‌ಗೆ ಕಳುಹಿಸಲಾಗಿದೆ. ಈ ವಿಷಯವನ್ನು ತನಿಖೆ ಮಾಡಲು ತಂಡವನ್ನು ರಚಿಸಲಾಗಿದೆ” ಎಂದು ದತ್ತಾ ಹೇಳಿದ್ದಾರೆ.
ವಿಶೇಷ ಅಧಿಕಾರಿಗಳ ತಂಡ ಈ ಬಗ್ಗೆ ತನಿಖೆ ಆರಂಭಿಸಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.