Advertisement

ಸೈನಿಕನ ವಿರುದ್ಧ ತನಿಖೆಗೆ ಆಕ್ರೋಶ

11:51 AM Jan 13, 2017 | |

ದಾವಣಗೆರೆ: ಸೈನಿಕರಿಗೆ ನೀಡಲಾಗುವ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂಬುದನ್ನು ಮೊಬೈಲ್‌ನಲ್ಲಿ ಚಿತ್ರಿಸಿ, ಜಾಹೀರು ಮಾಡಿದ್ದ ಸೈನಿಕನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಕೇಂದ್ರ ಸರ್ಕಾರದ ನಡೆ ಖಂಡಿಸಿ, ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. 

Advertisement

ಪಾಲಿಕೆ ಆವರಣದ ಗಾಂಧಿ ಪ್ರತಿಮೆ ಮುಂದೆ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಳಲು ತೋಡಿಕೊಂಡ ಸೈನಿಕನ ವಿರುದ್ಧ ಕ್ರಮಕ್ಕೆ ಮುಂದಾಗುವ ಕೇಂದ್ರ  ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಬಿಜೆಪಿ ತಾನು ದೇಶ ಪ್ರೇಮಿ, ಸೈನಿಕರ ಪರ ಎಂಬುದಾಗಿ ಹೇಳಿಕೊಳ್ಳುತ್ತದೆ.

ಪ್ರತೀ ಬಾರಿ ಸೈನಿಕರು ಹುತಾತ್ಮರಾದಾಗ ನಮನ ಸಲ್ಲಿಸುತ್ತದೆ. ಇಂತಹ ಪಕ್ಷ ಇದೀಗ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ದೇಶ  ಕಾಯುವ ಯೋಧನೋರ್ವ ತಮಗೆ ನೀಡುವ ಊಟ ಕಳಪೆಯಾಗಿದೆ ಎಂಬುದನ್ನು ಬಯಲಿಗೆಳೆದ ಎಂಬ ಕಾರಣಕ್ಕಾಗಿ ಆತನ ವಿರುದ್ಧ ತನಿಖೆ ನಡೆಸಲು ಆದೇಶ ಮಾಡಿದೆ.

ಆ  ಮೂಲಕ ತನ್ನ ಸೈನಿಕ ಪ್ರೇಮ ಕೇವಲ ರಾಜಕೀಯಕ್ಕೆಎಂಬುದನ್ನು ಸಾಬೀತು ಪಡಿಸಿದೆ ಎಂದರು. ದೇಶ ಕಾಯುವ ಸೈನಿಕರಿಗೆ ಎಲ್ಲಾ ರೀತಿಯ ಸವಲತ್ತು ಕೊಡಬೇಕು. ಬೇರೆ ಯಾವುದರಲ್ಲಿ ಲೋಪವಾದರೂ ಸರಿ, ಆದರೆ, ಸೈನಿಕರ ವಿಷಯದಲ್ಲಿ ಇಂತಹ ಲೋಪ ಆಗಬಾರದು. ಸೈನಿಕರು ಹಗಲಿರುಳು ದೇಶದ ಗಡಿ ಕಾಯುತ್ತಾರೆ. 

ಅಂತಹವರ  ಆರೋಗ್ಯ ಸರಿಯಾಗಿ ಇರಬೇಕಾದುದು ಅನಿವಾರ್ಯ. ಚಳಿ, ಮಳೆ, ಬಿಸಿಲು ಎನ್ನದೆ ದುಡಿಯುವ ಸೈನಿಕರಿಗೆ ಉತ್ತಮ ಗುಣಮಟ್ಟದ ಆಹಾರ ನೀಡಲು ಕೂಡಲೇ ಕೇಂದ್ರ  ಸರ್ಕಾರ ಕ್ರಮ ಕೈಗೊಳ್ಳಬೇಕು. ಅವರಿಗೆ ನೀಡುವ ಆಹಾರದ ಗುಣಮಟ್ಟವನ್ನು ಆಗಿಂದಾಗ್ಗೆ ಪರೀಕ್ಷೆ ಮಾಡಬೇಕು ಎಂದು ಅವರು ಆಗ್ರಹಿಸಿದರು. 

Advertisement

ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ.  ಬಸವರಾಜ್‌, ಪಾಲಿಕೆ ಸದಸ್ಯರಾದ ದಿನೇ ಶೆಟ್ಟಿ, ಎಂ. ಹಾಲೇಶ್‌, ಮಖಂಡರಾದ ಬಿ.ಎಚ್‌. ವೀರಭದ್ರಪ್ಪ, ಆಯೂಬ್‌ಪೈಲ್ವಾನ್‌, ಜಯಣ್ಣ, ಅಜ್ಜಂಪುರ ಶೆಟ್ರಾ ಮೃತ್ಯುಂಜಯ,  ಕೇರಂ ಗಣೇಶ್‌, ಎ. ನಾಗರಾಜ, ಮಹಾದೇವಮ್ಮ, ಮೊಹಮದ್‌ ಮುಜಾಹೀದ್‌ ಪಾಷ, ಶ್ರೀಕಾಂತ ಬಗರೆ ಪ್ರತಿಭಟನೆ ನೇತೃತ್ವ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next