Advertisement

ಪಾಕ್‌ ಪರ ಪೋಸ್ಟ್‌: ಇಬ್ಬರ ವಿರುದ್ಧ  ದೂರು

12:30 AM Mar 03, 2019 | Team Udayavani |

ಬೆಳಗಾವಿ: ಫೇಸ್‌ಬುಕ್‌ನಲ್ಲಿ ಪಾಕಿಸ್ತಾನ ಪರ ಘೋಷಣೆಯುಳ್ಳ ಬರಹ ಹಾಕಿದ್ದ ಆರೋಪದ ಮೇಲೆ ಕಾಂಗ್ರೆಸ್‌ ಕಾರ್ಯಕರ್ತನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಜೈ ಪಾಕಿಸ್ತಾನ ಹಮಾರಾ, ಜೈ ಅಶೋಕ ಅಣ್ಣಾ ಹಮಾರಾ, ರಾಮದುರ್ಗ ಡಾನ್‌ ಹಮಾರಾ ಎಂಬ ಬರಹವುಳ್ಳ ಪೋಸ್‌ rಅನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆಂದು ರಾಮದುರ್ಗ ಪಟ್ಟಣ ನಿವಾಸಿ ಶಫಿ ಬೆಣ್ಣಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Advertisement

ಶುಕ್ರವಾರ ರಾತ್ರಿ ಠಾಣೆಗೆ ಮುತ್ತಿಗೆ ಹಾಕಿದ ಸಾರ್ವಜನಿಕರು ಶಫಿ ಬಂಧನಕ್ಕೆ ಆಗ್ರಹಿಸಿದ್ದರು. ಈ ವೇಳೆ ಮುತ್ತಿಗೆ ಹಾಕಿದವರ ಮೇಲೆ ಕಲ್ಲು ತೂರಾಟ ನಡೆದಿದ್ದು, ಯುವಕ ಗಾಯಗೊಂಡಿದ್ದಾನೆ. ಈ ಬಗ್ಗೆ ಎಸ್ಪಿ ಸುಧೀರ್‌ಕುಮಾರ ರೆಡ್ಡಿ ಮಾತನಾಡಿ, ಪಾಕ್‌ ಪರ ಘೋಷಣೆಗಳನ್ನು ಫೇಸ್‌ ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆಂದು ಶಫಿ ಬೆಣ್ಣಿ ವಿರುದಟಛಿ ದೂರು ದಾಖಲಾಗಿದೆ. ಅಲ್ಲದೆ, ಶಫಿ ಕೂಡ ತನ್ನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಆಗಿದೆ ಎಂದು ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪಾಸ್‌ವರ್ಡ್‌ ಕದ್ದು, ಬೇರೆ ಮೊಬೈಲ್‌, ಡಿವೈಸ್‌ನಿಂದ ಬರಹವನ್ನು ಅಪ್‌ಲೋಡ್‌ ಮಾಡಿರುವುದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ಎಫ್ಬಿನಲ್ಲಿ ಘೋಷಣೆ ಹಾಕಿದ್ದವನ ಸೆರೆ: ಪಾಕಿಸ್ತಾನ ಪರ ಪೋಸ್ಟ್‌ಅನ್ನು ಫೇಸ್‌ಬುಕಲ್ಲಿ ಶೇರ್‌ ಮಾಡಿದ್ದ ಕುಷ್ಟಗಿ ತಾಲೂಕಿನ ತಾವರಗೇರಾದ ಮಹಮದ್‌ ರಫಿ ಗಂಗಾವತಿ ವಿರುದ್ಧ ದೂರು ದಾಖಲಾಗಿದೆ. ರಫಿ ಪಾಕಿಸ್ತಾನ ಪರ ಪೋಸ್ಟ್‌ಅನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿ, ವಾಟ್ಸ್‌ಆ್ಯಪ್‌ ಡಿಪಿಗೆ ಹಾಕಿಕೊಂಡಿದ್ದರು. ಇದನ್ನು ಗಮನಿಸಿ ಸಾರ್ವಜನಿಕರು ತಾವರಗೇರಾ ಠಾಣೆಗೆ ದೂರು ಸಲ್ಲಿಸಿದ್ದರು. ಈಗ ರಫಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next