Advertisement

ATC ತಪ್ಪು ಸೂಚನೆ: ಒಂದೇ ರನ್‌ವೇನಲ್ಲಿ ಎರಡು ವಿಮಾನ

01:44 AM Jun 10, 2024 | Team Udayavani |

ಮುಂಬೈ: ವಾಯು ಸಂಚಾರ ನಿಯಂ ತ್ರಣ (ಎಟಿಸಿ) ಅಧಿಕಾರಿಗಳ ಅಚಾತುರ್ಯದಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದೇ ರನ್‌ವೇನಲ್ಲಿ ಇಂಡಿಗೋ ವಿಮಾನ ಭೂಸ್ಪರ್ಶ ಮಾಡಿ, ಏರ್‌ ಇಂಡಿಯಾ ವಿಮಾನ ಟೇಕ್‌ ಆಫ್ ಮಾಡಿದೆ.

Advertisement

ಶನಿವಾರ ಈ ಘಟನೆ ನಡೆದಿದ್ದು, ಇಂದೋರ್‌ನಿಂದ ಆಗಮಿ ಸಿದ ಇಂಡಿಗೋ ವಿಮಾನ ಲ್ಯಾಂಡ್‌ ಆಗುವ ಸಮಯಕ್ಕೆ ಅದೇ ರನ್‌ವೇನಿಂದ ತಿರುವನಂತಪುರಕ್ಕೆ ಹೋಗುತ್ತಿದ್ದ ಏರ್‌ ಇಂಡಿಯಾ ವಿಮಾನ ಟೇಕ್‌ ಆಫ್ ಮಾಡಿದೆ. ಹೀಗಾಗಿ ಒಂದೇ ರನ್‌ವೇನಲ್ಲಿ 2 ವಿಮಾನಗಳು ಕಂಡಿವೆ.

ಕೆಲಕಾಲ ಗೊಂದಲ ಸೃಷ್ಟಿಯಾ ಗಿತ್ತು. ಆದರೆ ಘಟನೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ. ಎಟಿಸಿ ಅಧಿಕಾರಿಗಳ ಸೂಚನೆಯಂತೆ ಕಾರ್ಯನಿರ್ವಹಿಸಲಾಗಿದೆ ಎಂದು 2 ವಿಮಾನಗಳ ಪೈಲಟ್‌ಗಳು ಹೇಳಿಕೊಂಡಿದ್ದಾರೆ. ಎಟಿಸಿಯ ತಪ್ಪು ಸೂಚನೆಯಿಂದ ಈ ಅವಾಂತರ ಸೃಷ್ಟಿಯಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ಘಟನೆ ಕುರಿತು ತನಿಖೆ ನಡೆಸಲು ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next