Advertisement

ಪಾಕ್‌ ಪರ ಘೋಷಣೆ: ಓರ್ವ ಆರೋಪಿ ಮೊಹಮ್ಮದ್‌ ಶಫಿ ನಾಶಿಪುಡಿ ಮತ್ತೆ ಪೊಲೀಸ್‌ ವಶಕ್ಕೆ

11:40 PM Mar 06, 2024 | Team Udayavani |

ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ಪ್ರಕರಣದ ಆರೋಪಿಗಳ ಪೊಲೀಸ್‌ ಕಸ್ಟಡಿ ಬುಧವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಬ್ಬರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಬ್ಬ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತೆ ಮಾ.7ರ ವರೆಗೆ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ.

Advertisement

ವಿಧಾನಸೌಧ ಠಾಣೆ ಪೊಲೀಸರು ಬುಧವಾರ 39ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಮೂವರನ್ನು ಹಾಜರುಪಡಿಸಿದ್ದರು. ಈ ಪೈಕಿ ಆರ್‌.ಟಿ.ನಗರದ ಮುನಾವರ್‌ ಮತ್ತು ದಿಲ್ಲಿ ಮೂಲದ ಮೊಹಮ್ಮದ್‌ ಇಲ್ತಾಜ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮತ್ತೊಬ್ಬ ಆರೋಪಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಹಮ್ಮದ್‌ ಶಫಿ ನಾಶಿಪುಡಿಯನ್ನು ಗುರುವಾರದವರೆಗೆ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. ಆರ್‌.ಟಿ.ನಗರ ನಿವಾಸಿ ಮುನಾವರ್‌ ಜಯಮಹಲ್‌ ರಸ್ತೆಯಲ್ಲಿರುವ ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next