Advertisement

ತಿರುಗೇಟು ನೀಡಲು ಮುಂಬಾ ಪ್ರಯತ್ನ

01:08 PM Aug 29, 2017 | Team Udayavani |

ಮುಂಬಯಿ: ಪ್ರೊ ಕಬಡ್ಡಿ ಲೀಗ್‌ ಐದರಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾದ ಯು ಮುಂಬಾ ಸತತ ಸೋಲಿನಿಂದ ಕಂಗೆಟ್ಟಿದೆ. ತವರಿನಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿ ಮುಂಬಾ ತಂಡ ತೀವ್ರ ಪೈಪೋಟಿ ನಡೆಸಿಯೂ ಸೋಲುತ್ತಿರುವುದು ಮುಂಬಾಗೆ ಆಘಾತ ನೀಡಿದೆ. 

Advertisement

ಮುಂಬಾ ತಂಡ ತವರಿನಲ್ಲಿ ಇನ್ನು ಮೂರು ಪಂದ್ಯ ಆಡಲಿದ್ದು ತಿರುಗೇಟು ನೀಡಲು ಪ್ರಯತ್ನಿಸಲಿದೆ. ಆದರೆ ಮುಂಬಾ ಗೆಲುವು ಸಾಧಿಸಲು ಬಹಳಷ್ಟು ಶ್ರಮ ವಹಿಸುವ ಅಗತ್ಯವಿದೆ. ಮುಂಬಾ ಮಂಗಳವಾರದ ಪಂದ್ಯದಲ್ಲಿ “ಎ’ ವಲಯದ ಅಗ್ರಸ್ಥಾನಿ ಗುಜರಾತ್‌ ತಂಡವನ್ನು ಎದುರಿಸಲಿದೆ. ಗುಜರಾತ್‌ ತಾನಾಡಿದ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು 41 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಮುಂಬಾ ತಾನಾಡಿದ 9 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಗೆದ್ದು 19 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಹಾಗಾಗಿ ಮುಂಬಾ ಗೆಲುವು ಸಾಧಿಸಲು ಗುಜರಾತ್‌ ವಿರುದ್ಧ ಭರ್ಜರಿ ಆಟ ಪ್ರದರ್ಶಿಸಬೇಕಾಗಿದೆ. ಗುಜರಾತ್‌ ಇಷ್ಟರವರೆಗೆ ಸೋಲನ್ನು ಕಾಣದ ಏಕೈಕ ತಂಡವಾಗಿದೆ. 

ತವರಿನ ಮುಂದಿನೆರಡು ಪಂದ್ಯಗಳಲ್ಲಿ ಮುಂಬಾ ಅನುಕ್ರಮವಾಗಿ ಹರಿಯಾಣ ಮತ್ತು ಜೈಪುರ ತಂಡವನ್ನು ಎದುರಿಸಲಿದೆ. ಈ ಎರಡು ತಂಡಗಳು ಅಂಕಪಟ್ಟಿಯಲ್ಲಿ ಅನುಕ್ರಮವಾಗಿ 3 ಮತ್ತು ನಾಲ್ಕನೇ ಸ್ಥಾನದಲ್ಲಿದೆ. ರಕ್ಷಣಾ ಆಟದಲ್ಲಿನ ವೈಫ‌ಲ್ಯದಿಂದ ರವಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ನಾವು ಸ್ವಲ್ಪದರಲ್ಲಿ ಸೋಲು ಕಾಣುವಂತಾಯಿತು ಎಂದು ಅನೂಪ್‌ ಹೇಳಿದ್ದಾರೆ. ನಮ್ಮ ರೈಡಿಂಗ್‌ ಪರವಾಗಿಲ್ಲ. ಆದರೆ ರಕ್ಷಣಾ ಆಟ ಬಿಗುವಾಗಿರಲಿಲ್ಲ. ಕೊನೆ ಕ್ಷಣದಲ್ಲಿ ಮಾಡಿದ ಕೆಲವೊಂದು ತಪ್ಪಿನಿಂದ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು ಎಂದು ಅವರು ತಿಳಿಸಿದರು.

ಇರಾನಿನ ಆಟಗಾರರಾದ ಮಿರಾಜ್‌ ಶೇಖ್‌ (11 ಅಂಕ) ಮತ್ತು ಅಬೋಲ್‌ಫಾಜಲ್‌ ಮಗ್ಸೋಡ್ಲು  (8 ಅಂಕ) ಅವರ ಅಮೋಘ ಆಟದಿಂದಾಗಿ ನಾವು ಮುಂಬಾ ತಂಡವನ್ನು 33-32 ಅಂಕಗಳಿಂದ ಸೋಲಿಸುವಂತಾಯಿತು ಎಂದು ಡೆಲ್ಲಿ ತಂಡದ ಕೋಚ್‌ ಡಾ| ರಮೇಶ್‌ ಭೆಂಡಿಗಿರಿ ಹೇಳಿದ್ದಾರೆ. ನಾವು ಅನೂಪ್‌ ಅವರನ್ನು ಕಟ್ಟಿಹಾಕಲು ಯೋಜನೆ ರೂಪಿಸಿದ್ದೆವು. ಅವರನ್ನು ಸಾಧ್ಯ ವಾದಷ್ಟು ಬೇಗ ಔಟ್‌ ಮಾಡಿಸಿದರೆ ಮುಂಬಾ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತದೆ. ಮಿರಾಜ್‌ ಮತ್ತು ಅಬೋಲ್‌ಫಾಜಲ್‌ ಉತ್ತಮವಾಗಿ ರೈಡ್‌ ಮಾಡಿದರು. ನಮ್ಮ ರಕ್ಷಣಾ ಆಟ ಚೆನ್ನಾಗಿತ್ತು ಎಂದವರು ತಿಳಿಸಿದರು.

ಪ್ರೊ ಕಬಡ್ಡಿ  ಲೀಗ್‌: ಇಂದಿನ ಪಂದ್ಯಗಳು
ಬೆಂಗಳೂರು ಬುಲ್ಸ್‌- ಯುಪಿ ಯೋಧಾಸ್‌
ಆರಂಭ: ರಾತ್ರಿ 8.00

Advertisement

ಯು ಮುಂಬಾ- ಗುಜರಾತ್‌
ಆರಂಭ: ರಾತ್ರಿ 9.00

Advertisement

Udayavani is now on Telegram. Click here to join our channel and stay updated with the latest news.

Next