Advertisement

ಪ್ರೊ ಕಬಡ್ಡಿ: “ಬಿ’ವಲಯದಲ್ಲಿ ತೀವ್ರ ಪೈಪೋಟಿ

06:00 AM Dec 11, 2018 | Team Udayavani |

ವಿಶಾಖಪಟ್ಟಣ: ಕಳೆದ ಎರಡು ತಿಂಗಳಿಂದ ವಿವಿಧ ತಾಣಗಳಲ್ಲಿ ಸಾಗುತ್ತಿರುವ ಪ್ರೊ ಕಬಡ್ಡಿ ಆರನೇ ಆವೃತ್ತಿ ಅಂತಿಮ ಹಂತದತ್ತ ಸಾಗುತ್ತಿದೆ. ಇಷ್ಟರವರೆಗೆ 105 ಪಂದ್ಯಗಳು ಮುಗಿದಿದ್ದು ಲೀಗ್‌ ಹಂತದಲ್ಲಿ ಇನ್ನು ಕೇವಲ 27 ಪಂದ್ಯಗಳು ನಡೆಯಲಿವೆ. “ಎ’ ಬಣದಲ್ಲಿ ಯು ಮುಂಬಾ ಮತ್ತು ಕಳೆದ ಬಾರಿಯ ಫೈನಲಿಸ್ಟ್‌ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ 70 ಪ್ಲಸ್‌ ಅಂಕ ಗಳಿಸುವ ಮೂಲಕ ಪ್ಲೇ ಆಫ್ಗೇರುವುದನ್ನು ಖಚಿತಪಡಿಸಿದೆ. ಆದರೆ “ಬಿ’ ಬಣದಲ್ಲಿ ಇಷ್ಟರ ವರೆಗೆ ಯಾವುದೇ ತಂಡ ಪ್ಲೇ ಆಫ್ಗೆ ತೇರ್ಗಡೆಯಾಗುವುದನ್ನು ಖಚಿತಪಡಿಸಿಲ್ಲ.

Advertisement

ಪ್ರತಿಯೊಂದು ತಂಡವೂ ಲೀಗ್‌ ಹಂತದಲ್ಲಿ 22 ಪಂದ್ಯಗಳನ್ನು ಆಡಬೇಕಾಗಿದೆ. ಹೆಚ್ಚಿನೆಲ್ಲ ತಂಡಗಳಿಗೆ ಇನ್ನು ನಾಲ್ಕು ಅಥವಾ ಐದು ಪಂದ್ಯಗಳು ಬಾಕಿ ಉಳಿದಿವೆ. ಹಾಗಾಗಿ ಮಂಗಳವಾರದಿಂದ ನಡೆಯುವ ಪ್ರತಿಯೊಂದು ಪಂದ್ಯವೂ ತೀವ್ರ ಸೆಣಸಾಟದಿಂದ ಸಾಗುವ ನಿರೀಕ್ಷೆಯಿದೆ. ಮಂಗಳವಾರದ ಮೊದಲ ಪಂದ್ಯದಲ್ಲಿ ಸದ್ಯ “ಎ’ ಬಣದಲ್ಲಿ ಅಗ್ರಸ್ಥಾನದಲ್ಲಿರುವ ಯು ಮುಂಬಾ ತಂಡವು ಮೂರನೇ ಸ್ಥಾನಿ ದಬಾಂಗ್‌ ಡೆಲ್ಲಿ ತಂಡವನ್ನು ಎದುರಿಸಲಿದೆ. ಈ ಎರಡೂ ತಂಡಗಳಿಗೆ ಇನ್ನು ಮೂರು ಪಂದ್ಯ ಬಾಕಿ ಉಳಿದಿದೆ. 77 ಅಂಕ ಹೊಂದಿರುವ ಯು ಮುಂಬಾ ತಂಡ ಅಗ್ರಸ್ಥಾನವನ್ನು ಉಳಿಸಿಕೊಳ್ಳುವ ಸಲುವಾಗಿ ಗೆಲುವು ಸಾಧಿಸಲು ಗರಿಷ್ಠ ಪ್ರಯತ್ನ ನಡೆಸಲಿದೆ. ಯಾಕೆಂದರೆ ವಲಯದ ಅಗ್ರಸ್ಥಾನ ಪಡೆದ ತಂಡ ಪ್ಲೇ ಆಫ್ನ ಪಂದ್ಯದಲ್ಲಿ ಗೆದ್ದರೆ ನೇರ ಫೈನಲಿಗೇರುವ ಅವಕಾಶವಿದೆ. ಇದೇ ವೇಳೆ ಸದ್ಯ 19 ಪಂದ್ಯಗಳಿಂದ 60 ಅಂಕ ಗಳಿಸಿರುವ ದಬಾಂಗ್‌ ಡೆಲ್ಲಿ ತಂಡ ಮೂರನೇ ತಂಡವಾಗಿ ಪ್ಲೇ ಆಫ್ಗೆ ತೇರ್ಗಡೆಯಾಗುವ ಸಾಧ್ಯತೆಯಿದೆ. ಯಾಕೆಂದರೆ ಬಣದ ನಾಲ್ಕನೇ ಸ್ಥಾನಿ ಪುನೇರಿ ಪಲ್ಟಾನ್ಸ್‌ ಕೇವಲ 47 ಅಂಕ ಹೊಂದಿದೆ ಮತ್ತು ಅದಕ್ಕೆ ಕೇವಲ 2 ಪಂದ್ಯ ಬಾಕಿ ಉಳಿದಿವೆ.

“ಬಿ” ವಲಯ 
“ಎ” ವಲಯವನ್ನು ಗಮನಿಸಿದರೆ “ಬಿ’ ವಲಯದಲ್ಲಿ ಎಲ್ಲ ತಂಡಗಳು ಬಲಿಷ್ಠವಾಗಿವೆೆ. ಇಷ್ಟರ ವರೆಗೆ ಯಾವುದೇ ತಂಡ ಪ್ಲೇ ಆಫ್ಗೆ ತೇರ್ಗಡೆಯಾಗಿರುವುದನ್ನು ಖಚಿತಪಡಿಸಿಲ್ಲ. ಸದ್ಯ ಆಡಿದ 17 ಪಂದ್ಯಗಳಿಂದ 59 ಅಂಕ ಪಡೆದಿರುವ ಬೆಂಗಳೂರು ಬುಲ್ಸ್‌ ಅಗ್ರಸ್ಥಾನದಲ್ಲಿದ್ದರೆ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವು 51 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ತೆಲುಗು ಟೈಟಾನ್ಸ್‌ ಮೂರನೇ ಮತ್ತು ಬೆಂಗಾಲ್‌ ವಾರಿಯರ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಈ ನಾಲ್ಕು ತಂಡಗಳಿಗೆ ಪ್ಲೇ ಆಫ್ಗೆ ತೇರ್ಗಡೆಯಾಗಲು ಉಜ್ವಲ ಅವಕಾಶವಿದೆ. ಮಾತ್ರವಲ್ಲದೇ ವಲಯದ ಅಗ್ರಸ್ಥಾನ ಪಡೆಯಲು ಎಲ್ಲ ನಾಲ್ಕು ತಂಡಗಳು ತೀವ್ರ ಪೈಪೋಟಿ ನಡೆಸುವುದು ಗ್ಯಾರಂಟಿ. ಈ ನಾಲ್ಕು ಬಲಿಷ್ಠ ತಂಡಗಳಲ್ಲಿ ಒಂದು ತಂಡ ಹೊರಬೀಳಲೇ ಬೇಕಾಗಿದೆ. ಯಾವ ತಂಡವೆಂಬುದು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next