Advertisement
ಲೀಗ್, ಎಲಿಮಿನೇಟರ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳೆಲ್ಲವೂ ಇಲ್ಲಿಯೇ ಸಾಗಲಿವೆ. ಹೀಗಾಗಿ, ತನ್ನ ಪ್ರಖರತೆಯನ್ನು ಕಳೆದುಕೊಂಡಿರುವ ಹಾಲಿ ಚಾಂಪಿಯನ್ ಪುಣೇರಿ ಪಲ್ಟಾನ್, ತವರಿನಲ್ಲಿ ಮಿಂಚುವುದೇ ಎನ್ನುವುದೊಂದು ನಿರೀಕ್ಷೆ. ಹರಿಯಾಣ ಸ್ಟೀಲರ್, ಪಾಟ್ನಾ ಪೈರೇಟ್ಸ್, ದಬಾಂಗ್ ಡೆಲ್ಲಿ ಮತ್ತು ತೆಲುಗು ಟೈಟಾನ್ಸ್ ಅಗ್ರಸ್ಥಾನದಲ್ಲಿವೆ. ಆತಿಥೇಯ ಪುಣೇರಿ 5ನೇ, ಜೈಪುರ್ 6ನೇ ಸ್ಥಾನದಲ್ಲಿದೆ.
ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಬೆಂಗಳೂರು ಬುಲ್ಸ್ ಕೊನೆಯ ಸ್ಥಾನಕ್ಕೆ ಕುಸಿದಿದೆ. ಉಳಿದ 7 ಪಂದ್ಯ ಗೆದ್ದರೂ ಬುಲ್ಸ್ ಪ್ಲೇ ಆಫ್ ಪ್ರವೇಶಿಸದು ಎಂದೇ ಹೇಳಬೇಕಾಗುತ್ತದೆ.