Advertisement
ಇದರೊಂದಿಗೆ ದಬಾಂಗ್ ಡೆಲ್ಲಿ ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ತನ್ನ ಗೆಲುವನ್ನು 12ಕ್ಕೆ ಏರಿಸಿಕೊಂಡು ಅಗ್ರಸ್ಥಾನ ವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಇನ್ನೊಂದೆಡೆ ಗುಜರಾತ್ ಫಾರ್ಚೂನ್‌ಜೈಂಟ್ಸ್ 10ನೇ ಸೋಲನುಭವಿಸಿತು.ದಿನದ ದ್ವಿತೀಯ ಪಂದ್ಯದಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಪಾಟ್ನಾ ಪೈರೇಟ್ಸ್ ಆತಿಥೇಯ ಪುನೇರಿ ಪಲ್ಟಾನ್ ಮೇಲೆ ಸವಾರಿ ಮಾಡಿ 55-33 ಅಂತರದಿಂದ ಗೆದ್ದು ಬಂದಿತು. ಪುನೇರಿ ಸೋಲಿನಿಂದ ಅಭಿಮಾನಿಗಳು ತೀವ್ರ ನಿರಾಶರಾದರು.
ಪ್ರತಿ ಪಂದ್ಯದಲ್ಲೂ ಶ್ರೇಷ್ಠ ನಿರ್ವಹಣೆ ನೀಡುತ್ತಿರುವ ದಬಾಂಗ್ ಡೆಲ್ಲಿ, ರವಿವಾರವೂ ಎಂದಿನ ಶೈಲಿಯಲ್ಲೇ ಆಟಕ್ಕಿಳಿಯಿತು. ಆಕ್ರಮಣ ಹಾಗೂ ರಕ್ಷಣಾತ್ಮಕ ಆಟ ಡೆಲ್ಲಿ ತಂಡದ ವಿಶೇಷವಾಗಿತ್ತು. ನವೀನ್ ಕುಮಾರ್ 9 ಟಚ್ ಪಾಯಿಂಟ್, 2 ಬೋನಸ್ ಹಾಗೂ ಒಂದು ಅಮೋಘ ಟ್ಯಾಕಲ್ ನಡೆಸಿ ತಂಡದ ಹೀರೋ ಎನಿಸಿದರು. ಇವರಿಗೆ ಮತ್ತೋರ್ವ ರೈಡರ್ ವಿಜಯ್ ನೆರವಾದರು (5 ಟಚ್ ಪಾಯಿಂಟ್). ಜೋಗಿಂದರ್ ನರ್ವಾಲ್ (3 ಟ್ಯಾಕಲ್ ಅಂಕ), ರವೀಂದರ್ ಪಾಹಲ್ (2 ಟ್ಯಾಕಲ್ ಅಂಕ) ಅಷ್ಟೇನೂ ಯಶಸ್ಸು ಕಾಣಲಿಲ್ಲ. ಬದಲಿ ಆಟಗಾರನಾಗಿ ಕಣಕ್ಕೆ ಇಳಿದ ಚಂದ್ರನ್ ರಂಜಿತ್ ರೈಡಿಂಗ್‌ನಲ್ಲಿ 2 ಅಂಕ ಪಡೆದರು. ಗುಜರಾತ್‌ಗೆ ಹ್ಯಾಟ್ರಿಕ್ ಸೋಲು
ಗುಜರಾತ್ ಕೂಟದಲ್ಲಿ ಇದು ಸತತ 3ನೇ ಸೋಲಾಗಿದೆ. ತಂಡದ ಪ್ರದರ್ಶನ ಸಂಪೂರ್ಣ ವನ್‌ಮ್ಯಾನ್ ಶೋ ಆಗಿತ್ತು. ರೋಹಿತ್ ಗುಲಿಯಾ ಸರ್ವಾಧಿಕ 13 ರೈಡಿಂಗ್ ಅಂಕ ಗಳಿಸಿದರು. ರೈಡರ್ ಸಚಿನ್ 4 ಅಂಕ ಗಳಿಸಿದ್ದೇ ತಂಡದ ಎರಡನೇ ಉತ್ತಮ ಸಾಧನೆ. ಜಿ.ಬಿ. ಮೋರೆ (1 ಅಂಕ), ಸುನಿಲ್ ಕುಮಾರ್ (1 ಅಂಕ) ಟ್ಯಾಕಲ್‌ನಲ್ಲಿ ವೈಫಲ್ಯ ಅನುಭವಿಸಿದರು.