Advertisement

Pro Kabaddi: ಯುಪಿ ಯೋಧಾಸ್‌ ವಿರುದ್ಧ ತೆಲುಗು ಟೈಟಾನ್ಸ್‌ ಗೆ ಗೆಲುವು

11:04 PM Jan 20, 2024 | Team Udayavani |

ಹೈದರಾಬಾದ್‌: ತವರಿನಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿದ ತೆಲುಗು ಟೈಟಾನ್ಸ್‌ ತಂಡವು ಶನಿವಾರ ನಡೆದ ಪ್ರೊ ಕಬಡ್ಡಿಯ ಪಂದ್ಯದಲ್ಲಿ ಯುಪಿ ಯೋಧಾಸ್‌ ತಂಡವನ್ನು 49-32 ಅಂಕಗಳಿಂದ ಸೋಲಿಸಿದೆ. ಪವನ್‌ ಸೆಹ್ರಾವತ್‌, ಓಂಕಾರ್‌ ಪಾಟೀಲ್‌ ಅಮೋಘ ರೈಡಿಂಗ್‌ ನಡೆಸಿ ತಂಡದ ಗೆಲುವಿಗೆ ಕಾರಣರಾದರು.

Advertisement

ಈ ಮೊದಲು ನಡೆದ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡವು ಯು ಮುಂಬಾ ತಂಡವನ್ನು 39-33 ಅಂಕಗಳಿಂದ ಮಣಿಸಿತು. ಡೆಲ್ಲಿ ತಂಡದ ಅಶು ಮಲಿಕ್‌ ರೈಡಿಂಗ್‌ನಲ್ಲಿ 17 ಅಂಕ ಪಡೆದರು. ಯು ಮುಂಬಾವನ್ನು ಆಧರಿಸಿದ ಗುಮಾನ್‌ ಸಿಂಗ್‌ 13 ರೈಡಿಂಗ್‌ ಅಂಕ ಪಡೆದರು. ಈ ಗೆಲುವಿನಿಂದ ಡೆಲ್ಲಿ ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರೆ ಮುಂಬಾ ತಂಡವು ಏಳನೇ ಸ್ಥಾನದಲ್ಲಿ ನಿಂತಿದೆ.

ಇಂದಿನ ಪಂದ್ಯಗಳು
ರವಿವಾರ ನಡೆಯುವ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವು ತಮಿಳ್‌ ತಲೈವಾಸ್‌ ತಂಡವನ್ನು ಎದುರಿಸಲಿದೆ. ಇನ್ನೊಂದು ಪಂದ್ಯವು ಗುಜರಾತ್‌ ಮತ್ತು ಪುನೇರಿ ಪಲ್ಟಾನ್ಸ್‌ ನಡುವೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next