Advertisement
ಸೂಪರ್ ರೈಡ್ ಮತ್ತು ಟ್ಯಾಕಲ್ ಮೂಲಕ ಹಾಲಿ ಚಾಂಪಿಯನ್ ಪಾಟ್ನಾ ತಂಡವನ್ನು ಕಟ್ಟಿಹಾಕಲು ತೆಲುಗು ಟೈಟಾನ್ಸ್ ಯಶಸ್ವಿಯಾಯಿತು. ಪಾಟ್ನಾ ಆಟಗಾರರನ್ನು ಅದರಲ್ಲಿಯೂ ವಿಶೇಷವಾಗಿ ಪ್ರದೀಪ್ ನರ್ವಾಲ್ ರೈಡ್‌ಗೆ ಇಳಿದಾಗ ತೆಲುಗು ಆಟಗಾರರು ಅದ್ಭುತ ವ್ಯೂಹ ರಚಿಸಿ ಅವರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು. ಇದರಿಂದ ಪಾಟ್ನಾ ಅಂಕ ಗಳಿಸಲು ಹಿನ್ನಡೆ ಆಯಿತು. ಕೊನೆಕ್ಷಣದವರವೆಗೂ ತೀವ್ರ ಹೋರಾಟದಿಂದ ಈ ಕಾದಾಟದಲ್ಲಿ ಪಾಟ್ನಾ ಅಂತಿಮವಾಗಿ ಅಲ್ಪ ಅಂತರದಿಂದ ಶರಣಾಯಿತು. ಇದು ಈ ಕೂಟದಲ್ಲಿ ಪಾಟ್ನಾ ಕಂಡ ಎರಡನೇ ಸೋಲು. ಚೆನ್ನೈ ಚರಣದ ಮೊದಲ ಪಂದ್ಯದಲ್ಲಿ ಆತಿಥೇಯ ತಮಿಳ್ ತಲೈವಾಸ್ ವಿರುದ್ಧ ಪಾಟ್ನಾ ಸೋಲು ಅನುಭವಿಸಿತ್ತು. ಇದಾದ ಬಳಿಕ ಸತತ ಎರಡು ಪಂದ್ಯವನ್ನು ಪಾಟ್ನಾ ಗೆದ್ದಿತ್ತು. ಎರಡು ಕೂಡ ಯುಪಿ ಯೋಧಾ ವಿರುದ್ಧವೇ ಆಗಿತ್ತು ಎನ್ನುವುದು ವಿಶೇಷ. ಪಾಟ್ನಾ ರೈಡ್‌ನಲ್ಲಿ 19 ಅಂಕ ಪಡೆದಿತ್ತು. ಮಂಜಿತ್ 16 ರೈಡಿಂಗ್‌ನಲ್ಲಿ 8 ಅಂಕ ಪಡೆದರೆ ಪ್ರದೀಪ್ ಮತ್ತು ಜೈದೀಪ್ ತಲಾ ಐದಂಕ ಗಳಿಸಿದರು.
20 ಬಾರಿ ರೈಡ್ ಮಾಡಿದ ರಾಹುಲ್ ಚೌಧರಿ ಏಳಂಕ ಪಡೆದು ತಂಡದ ಗೆಲುವಿಗೆ ತನ್ನ ಕೊಡುಗೆ ಸಲ್ಲಿಸಿದರು. ಇದು ತೆಲುಗು ಈ ಕೂಟದಲ್ಲಿ ದಾಖಲಿಸಿದ ಮೂರನೇ ಗೆಲುವು ಆಗಿದೆ. ಆರಂಭದ ಎರಡು ಪಂದ್ಯಗಳಲ್ಲಿ ತಮಿಳ್ ಮತ್ತು ಯುಪಿ ವಿರುದ್ಧ ಜಯಭೇರಿ ಬಾರಿಸಿದ್ದ ತೆಲುಗು ಈ ಹಿಂದಿನ ಪಂದ್ಯದಲ್ಲಿ ಬಂಗಾಲ್ ವಾರಿಯರ್ ವಿರುದ್ಧ ಸೋಲು ಅನುಭವಿಸಿತ್ತು. ಟ್ಯಾಕಲ್‌ನಲ್ಲಿ ಗಮನ ಸೆಳೆದ ವಿಶಾಲ್ ಭಾರಧ್ವಾಜ್ 6 ಅಂಕ ಗಳಿಸಿದರು. ಅವರಲ್ಲದೇ ನೀಲೇಶ್ ಸಾಳುಂಕೆ ಐದಂಕ, ಅಬೋಜರ್ ಮಿಗಾನಿ ಐದಂಕ ಪಡೆದು ತಂಡದ ಗೆಲುವಿಗೆ ಸಹಕರಿಸಿದರು. ತೆಲುಗು ಟ್ಯಾಕಲ್‌ನಲ್ಲಿ ಗರಿಷ್ಠ 15 ಅಂಕ ಗಳಿಸಿತ್ತು.