Advertisement

Pro Kabaddi:ತೆಲುಗು ಟೈಟಾನ್ಸ್‌ 8 ಸೋಲಿನ ನಂಟು; ಪಾಟ್ನಾ ಗೆಲುವು

11:21 PM Jan 01, 2024 | Team Udayavani |

ನೋಯ್ಡಾ: ನೂತನ ವರ್ಷದಲ್ಲೂ ತೆಲುಗು ಟೈಟಾನ್ಸ್‌ ಮೇಲೇಳುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಸೋಮವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಅದು ಪುನೇರಿ ಪಲ್ಟಾನ್ಸ್‌ ವಿರುದ್ಧ 54-18 ಅಂತರದ ಭಾರೀ ಸೋಲನುಭವಿಸಿತು. ಇದು 9 ಪಂದ್ಯಗಳಲ್ಲಿ ಟೈಟಾನ್ಸ್‌ಗೆ ಎದುರಾದ 8ನೇ ಆಘಾತ.

Advertisement

ಪುನೇರಿ ರೈಡರ್‌ ಮೋಹಿತ್‌ ಗೋಯತ್‌ 13, ನಾಯಕ ಅಸ್ಲಾಮ್‌ ಮುಸ್ತಾಫಾ 8 ಅಂಕ ಗಳಿಸಿದರು. ಇದು ಪುನೇರಿಗೆ 8 ಪಂದ್ಯಗಳಲ್ಲಿ ಒಲಿದ 7ನೇ ಜಯ. ಈ ಜಯದೊಂದಿಗೆ ಅದು ಮತ್ತೆ ಅಗ್ರಸ್ಥಾನಕ್ಕೆ ಏರಿತು.

ಪಾಟ್ನಾ ಗೆಲುವು
2ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ 48-41 ಅಂತರದಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿತು. ಇದು 9 ಪಂದ್ಯಗಳಲ್ಲಿ ಪಾಟ್ನಾ ಸಾಧಿಸಿದ 5ನೇ ಗೆಲುವು. ಯೋಧಾಸ್‌ 10 ಪಂದ್ಯ ಗಳಲ್ಲಿ 6ನೇ ಸೋಲುಂಡಿತು. ಪಾಟ್ನಾದ ರೈಡರ್‌ಗಳಾದ ಸಚಿನ್‌ (15) ಮತ್ತು ಮನ್‌ಜಿàತ್‌ (9) ಅಮೋಘ ಪ್ರದರ್ಶನವಿತ್ತರು. ಯೋಧಾಸ್‌ ನಾಯಕ ಪದೀìಪ್‌ ನರ್ವಾಲ್‌ ಅವರದು ಏಕಾಂಗಿ ಹೋರಾಟ ವಾಗಿತ್ತು (21 ಅಂಕ).

Advertisement

Udayavani is now on Telegram. Click here to join our channel and stay updated with the latest news.

Next